ದಕ್ಷಿಣ ಕನ್ನಡ

266 ನಾಮಪತ್ರ ಕ್ರಮಬದ್ಧ, 1 ಬಾಕಿ, 81 ತಿರಸ್ಕೃತ

Published On :

ಮಂಗಳೂರು: ಮಹಾನಗರ ಪಾಲಿಕೆ ಚುನಾವಣೆಯಲ್ಲಿ 369  ನಾಮಪತ್ರ ಸಲ್ಲಿಕೆಯಾಗಿದ್ದು, 81 ತಿರಸ್ಕೃತವಾಗಿದೆ.  29ನೇ ವಾರ್ಡ್‌ನ ಕಾಂಗ್ರೆಸ್ ಅಭ್ಯರ್ಥಿ ಗಣೇಶ್ ಎಂಬವರು ಮಾರುಕಟ್ಟೆ ಪ್ರದೇಶದಲ್ಲಿ ಮಹಾನಗರ ಪಾಲಿಕೆಯ ಕಟ್ಟಡದಲ್ಲಿ ಅಂಗಡಿ ಇಟ್ಟಿದ್ದು, 10 ತಿಂಗಳಿಂದ ಬಾಡಿಗೆ ನೀಡಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ನಾಮಪತ್ರ ಪರಿಶೀಲನೆಯನ್ನು ಒಂದು ದಿನದ ಮಟ್ಟಿಗೆ ಮುಂದೂಡಲಾಗಿದೆ. ಬಿಜೆಪಿ ಅಭ್ಯರ್ಥಿ, ಕಳೆದಬಾರಿ ಗೆದ್ದಿರುವ ನವೀನ್‌ಚಂದ್ರ ಅವರ ಗಣೇಶ್ ವಿರುದ್ಧ ಆಕ್ಷೇಪ ಸಲ್ಲಿಸಿದ್ದರು. ತಿರಸ್ಕೃತ ಗೊಂಡ ನಾಮಪತ್ರಗಳಲ್ಲಿ ಬಿಜೆಪಿಯ 60 ಡಮ್ಮಿ ಅಭ್ಯರ್ಥಿಗಳು, ಸೂಚಕರಿಲ್ಲದ ಪಕ್ಷೇತರ ಅಭ್ಯರ್ಥಿಗಳು ಸೇರಿದ್ದಾರೆ. 266 ನಾಮಪತ್ರ ಸ್ವೀಕರಿಸಿದ್ದೇವೆ. 29 ವಾರ್ಡ್ ಕಾಂಗ್ರೆಸ್ ಅಭ್ಯರ್ಥಿ ಗಣೇಶ್ ವಿರುದ್ಧ ಅಕ್ಷೇಪ ಕೇಳಿ ಬಂದ ಹಿನ್ನೆಲೆಯಲ್ಲಿ ಪರಾಮರ್ಶೆಗಾಗಿ ಪರಿಶೀಲನೆಯನ್ನು ಬಾಕಿ ಇರಿಸಿದ್ದು, ಮಂಗಳವಾರ ನಡೆಸಲಾಗುವುದು ಎಂದು ಆಯುಕ್ತ ಡಾ.ಹರೀಶ್ ಕುಮಾರ್ ತಿಳಿಸಿದ್ದಾರೆ.

ಸುಳ್ಯ ಪುರಸಭೆ: 2 ನಾಮಪತ್ರಗಳಿಗೆ ಆಕ್ಷೇಪಣೆ
ಸುಳ್ಯ:  ನಳ್ಳಿ ನೀರಿನ ಬಿಲ್ ಪಾವತಿಸದೇ ಇರುವುದು ಚುನಾವಣೆಯಲ್ಲಿ ಸ್ಪರ್ಧಿಸಲು ಅನರ್ಹತೆಯಾಗುತ್ತದೋ ಎಂಬ ವಿಷಯ ನಾಮಪತ್ರಗಳ ಪರಿಶೀಲನೆ ವೇಳೆ ತೀವ್ರ ಚರ್ಚೆಗೆ ಗ್ರಾಸವಾಗಿದ್ದು, ಚುನಾವಣಾಧಿಕಾರಿ ದಾಖಲೆಗಳನ್ನು ಪರಿಶೀಲಿಸಿ ಮಂಗಳವಾರ 11 ಗಂಟೆಗೆ ತಮ್ಮ ತೀರ್ಮಾನ ತಿಳಿಸುವುದಾಗಿ ಹೇಳಿದ ಘಟನೆ ಸುಳ್ಯದಲ್ಲಿ ನಡೆದಿದೆ.
ಸುಳ್ಯ ಪ.ಪಂ.ಗೆ ನಡೆಯಲಿರುವ ಚುನಾವಣೆಯಲ್ಲಿ ಹಿಂದಿನ ಸ್ಥಾಯಿ ಸಮಿತಿ ಅಧ್ಯಕ್ಷರಾಗಿದ್ದ ಎನ್.ಎ. ರಾಮಚಂದ್ರ 8 ಹಾಗೂ 16ನೇ ವಾರ್ಡ್‌ನಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಿದ್ದರು. ಅವರು ಎರಡು ನಳ್ಳಿ ಸಂಪರ್ಕ ಹೊಂದಿದ್ದು, ಒಟ್ಟು ರು. 4,750 ನಳ್ಳಿ ನೀರಿನ ಬಿಲ್ ಪಾವತಿಸಲು ಬಾಕಿ ಇತ್ತು. ನಾಪಪತ್ರ ಪರಿಶೀಲನೆ ವೇಳೆ ಕಾಂಗ್ರೆಸ್ ಅಭ್ಯರ್ಥಿ ಎಂ. ವೆಂಕಪ್ಪ ಗೌಡರು ಈ ವಿಚಾರ ಚುನಾವಣೆ ಅಧಿಕಾರಿಯ ಗಮನಕ್ಕೆ ತಂದಿದ್ದು, ಸೂಕ್ತ ದಾಖಲೆಯನ್ನು ಹಾಜರು ಪಡಿಸಿದರು.
ಈ ಪ್ರಕ್ರಿಯೆ ನಡೆಯುತ್ತಿದ್ದಂತೆ ರಾಮಚಂದ್ರ ಅವರು ಬಾಕಿ ಬಿಲ್ ಪಾವತಿ ಮಾಡಿ ರಶೀದಿಯನ್ನು ಅಧಿಕಾರಿಗೆ ಹಾಜರು ಪಡಿಸಿದರು. ಆದರೆ ನಾಮಪತ್ರ ಸಲ್ಲಿಸುವಾಗ ಸರ್ಕಾರಕ್ಕೆ ಯಾವುದೇ ಬಾಕಿ ಇರುವುದಿಲ್ಲ ಎಂದು ಪ್ರಮಾಣಪತ್ರ ಸಲ್ಲಿಸಿದ್ದು, ಪರಿಶೀಲನೆ ವೇಳೆ ಬಿಲ್ ಪಾವತಿ ಮಾಡಿದರೆ ಅದನ್ನು ಅಂಗೀಕರಿಸಬಾರದು ಎಂದು ವೆಂಕಪ್ಪ ಗೌಡ ಪಟ್ಟು ಹಿಡಿದರು. ದಾಖಲೆ ಒದಗಿಸಿಲು ತಮಗೆ 1 ದಿನದ ಅವಕಾಶ ಬೇಕು ಎಂದು ರಾಮಚಂದ್ರ ಅವರು ಕೇಳಿದ್ದರಿಂದ ಮಂಗಳವಾರ 11 ಗಂಟೆಗೆ ಮುನ್ನ ಅಗತ್ಯ ದಾಖಲೆ ಹಾಜರುಪಡಿಸುವಂತೆ, ಬಳಿಕ ತಮ್ಮ ನಿರ್ಧಾರ ಪ್ರಕಟಿಸುವುದಾಗಿ ಚುನಾವಣಾ ಅಧಿಕಾರಿ ತಿಳಿಸಿದರು. ವಿಷಯ ತಿಳಿದ ಚುನಾವಣಾ ಆಯೋಗದ ವೀಕ್ಷಕ ಪ್ರಭುದೇವ್ ಸ್ಥಳಕ್ಕೆ ಆಗಮಿಸಿದರು. ವಿವಾದದ ಕುರಿತು ಪತ್ರಕರ್ತರು ಅವರೊಂದಿಗೆ ಕೇಳಿದಾಗ ನಾಮಪತ್ರ ಪರಿಶೀಲನೆ ಚುನಾವಣಾಧಿಕಾರಿಯ ಜವಾಬ್ದಾರಿ, ಈ ಕುರಿತು ಅವರೇ ತೀರ್ಮಾನ ಪ್ರಕಟಿಸುತ್ತಾರೆ. ಅದರ ವಿರುದ್ಧ ದೂರು ಬಂದರೆ ಪರಿಶೀಲನೆ ನಡೆಸುವುದಾಗಿ ತಿಳಿಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.