ದಕ್ಷಿಣ ಕನ್ನಡ

ಹಸಿರು ಬಳಿದರೆ ಹೃದಯದ ಕೇಸರಿ ಅಳಿಯದು: ಶರಣ್

Published On :

ಮಂಗಳೂರು: ಮುಡಿಪು ಬಜರಂಗದಳ ಕಟ್ಟೆಗೆ ಹಸಿರು ಬಣ್ಣ ಬಳಿದ ದುಷ್ಕರ್ಮಿಗಳನ್ನು ಪತ್ತೆ ಹಚ್ಚುವಲ್ಲಿ ವಿಫಲರಾದ ಪೊಲೀಸ್ ಮತ್ತು ಜಿಲ್ಲಾಡಳಿತ ವಿರುದ್ಧ ಬಜರಂಗದಳ ಕಾರ್ಯಕರ್ತರು ಮಂಗಳವಾರ ಪ್ರತಿಭಟನೆ ನಡೆಸಿದರು.
ಬಜರಂಗದಳ ವಿಭಾಗ ಸಂಚಾಲಕ ಶರಣ್ ಪಂಪ್‌ವೆಲ್ ಮಾತನಾಡಿ, ಕೇಸರಿ ಕಟ್ಟೆ ಹಸಿರು ಬಳಿದಿದ್ದಾರೆ. ಹಸಿರು ಬಳಿದರೆ ಹಿಂದುಗಳ ಹೃದಯಲ್ಲಿರುವ ಕೇಸರಿ ಅಳಿಯುವುದಿಲ್ಲ. ಹುಟ್ಟಿನಿಂದ ಸಾಯುವವರೆಗೆ ನಮ್ಮಲ್ಲಿಯೇ ಇರುತ್ತದೆ. ಆರೋಪಿಗಳನ್ನು ಬಂಧಿಸಲಾಗದೆ ಪೊಲೀಸರೇ ಕೇಸರಿ ಬಳಿದಿದ್ದಾರೆ. ಪೊಲೀಸರಿಗೆ ಬಣ್ಣ ಬಳಿಯುವ ಕೆಲಸ ನೀಡಿದ್ದಾರೆಯೇ ಎಂದು ವ್ಯಂಗ್ಯವಾಡಿದರು. ಹಿಂದುಗಳು ಮನಸ್ಸು ಮಾಡಿದರೆ ಇಡೀ ಮುಡಿಪಿಗೆ ಹಸಿರು ಬಣ್ಣ ತೆಗೆದು ಕೇಸರಿ ಬಳಿಯಬಹುದು. ಆದರೆ ನಾವು ಹಸಿರು ಬಣ್ಣಕ್ಕೂ ಗೌರವ ನೀಡುತ್ತೇವೆ. ಹಸಿರು ಸಮೃದ್ಧಿ ಸಂಕೇತ. ಮುಂದಿನ ದಿನಗಳಲ್ಲಿ ಘಟನೆ ಮರುಕಳಿಸಿದರೆ ಮತ್ತು ಆರೋಪಿಗಳನ್ನು ಬಂಧಿಸದೇ ಇದ್ದಲ್ಲಿ ತಕ್ಕ ಉತ್ತರ ನೀಡಲಿದ್ದೇವೆ. ಪೊಲೀಸರ ವೈಫಲ್ಯದಿಂದಾಗಿಯೇ ಭಯೋತ್ಪಾದನೆ ಹೆಚ್ಚಾಗುತ್ತಿದೆ. ಒವೈಸಿಯಂಥವರು ಕೋಮು ದ್ವೇಷ ಹೇಳಿಕೆ ನೀಡಲು ಕಾರಣ ಎಂದರು. ಗುರುಪುರ ವಜ್ರದೇಹಿ ಮಠ ರಾಜಶೇಖರಾನಂದ ಸ್ವಾಮೀಜಿ ಮಾತನಾಡಿ, ಆರೋಪಿಗಳನ್ನು ಬಂಧಿಸದಿರುವುದು ಆಡಳಿತ ವೈಫಲ್ಯ ಎಂದು ಟೀಕಿಸಿದರು. ಕೇರಳ ಹಿಂದು ಐಕ್ಯ ವೇದಿಕೆ ಅಧ್ಯಕ್ಷ ಕುಂಟಾರು ರವೀಶ ತಂತ್ರಿ ಮಾತನಾಡಿದರು.
--

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.