ದಕ್ಷಿಣ ಕನ್ನಡ

ಬೀಡಿ ಹತ್ತಿಸುವಾಗ ಬೆಂಕಿ ತಗುಲಿ ಸಾವು

Published On :

 ಮಂಗಳೂರು: ಬೀಡಿಗೆ ಬೆಂಕಿ ಹತ್ತಿಸಿಕೊಳ್ಳುವ ವೇಳೆಗೆ ಲುಂಗಿಗೆ ಬೆಂಕಿ ತಗುಲಿ ಶಕ್ತಿನಗರ ಕಾರ್ಮಿಕ ಕಾಲನಿಯ ಶಂಭು ಶೆಟ್ಟಿ (65) ಮೃತಪಟ್ಟಿದ್ದಾರೆ.  
 ವಾರದ ಹಿಂದೆ ಮನೆಯಲ್ಲಿ ಮಧ್ಯಾಹ್ನ ಊಟ ಮಾಡಿ ಬೀಡಿ ಹತ್ತಿಸಿಕೊಳ್ಳುವ ವೇಳೆ ಬೆಂಕಿ ಕಡ್ಡಿ ಲುಂಗಿಗೆ ತಗುಲಿದ್ದು ಏಕಾಏಕಿ ಬೆಂಕಿ ಮೈಗೂ ವ್ಯಾಪಿಸಿತ್ತು. ಗಂಭೀರ ಗಾಯಗೊಂಡಿದ್ದ ಶಂಭು ಶೆಟ್ಟರನ್ನು ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದು, ಚಿಕಿತ್ಸೆಗೆ ಸ್ಪಂದಿಸದೆ ಬುಧವಾರ ಮೃತಪಟ್ಟರು. ಗ್ರಾಮಾಂತರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಅರಂತೋಡು ಬ್ಯಾಂಕ್ ಕಾರ್ಯನಿರ್ವಹಣಾಧಿಕಾರಿ
ಗುಂಡು ಹಾರಿಸಿಕೊಂಡು ಆತ್ಮಹತ್ಯೆ


ಸುಳ್ಯ: ಅರಂತೋಡು ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್‌ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಕೆ. ತೀರ್ಥರಾಮ (45) ಅವರು ತಮಗೆ ತಾವೇ ಗುಂಡು ಹಾರಿಸಿಕೊಂಡು ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ. ಎಂದಿನಂತೆ ಬ್ಯಾಂಕ್‌ಗೆ ಬಂದಿದ್ದ ಅವರು ಮಧ್ಯಾಹ್ನ ಊಟಕ್ಕೆಂದು ಮನೆಗೆ ಹೋಗಿ ಈ ಕೃತ್ಯ ಮಾಡಿಕೊಂಡಿದ್ದಾರೆ. ಗುಂಡು ಹಾರಾಟದ ಶಬ್ದ ಕೇಳಿ ಆಸುಪಾಸಿನವರು ಬಂದು ನೋಡಿದಾಗ ವಿಷಯ ಬಹಿರಂಗವಾಯಿತು. ಆತ್ಮಹತ್ಯಗೆ ಕಾರಣ ತಿಳಿದು ಬಂದಿಲ್ಲ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.