ದಕ್ಷಿಣ ಕನ್ನಡ

ಕುಮ್ಕಿ ಹಕ್ಕು ಮಂಜೂರು: 6 ತಿಂಗಳಲ್ಲಿ ಪೂರ್ಣವಾಗಲಿ

Published On :

ಮಂಗಳೂರು: ಸರ್ಕಾರ ಮಂಜೂರು ಮಾಡಿರುವ ಕುಮ್ಕಿ ಹಕ್ಕು ಪ್ರಯೋಜನವನ್ನು ಅಧ್ಯಾದೇಶಗೊಂಡ 6 ತಿಂಗಳೊಳಗೆ ಅರ್ಜಿ ಪ್ರಕ್ರಿಯೆಯನ್ನು ಮುಕ್ತಾಯಗೊಳಿಸುವಂತೆ ದ.ಕ.ಜಿಲ್ಲಾ ಬಿಜೆಪಿ ಕಂದಾಯ ಅಧಿಕಾರಿಗಳನ್ನು ಆಗ್ರಹಿಸಿದೆ.
  ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ವಿಧಾನಪರಿಷತ್ತು ಸದಸ್ಯ, ಜಿಲ್ಲಾ ವಕ್ತಾರ ಮೋನಪ್ಪ ಭಂಡಾರಿ, ಇದಕ್ಕೆ ಯಾವುದೇ ನಿಯಮಿತ ಅರ್ಜಿ ಸಲ್ಲಿಸಬೇಕಾಗಿಲ್ಲ, ಕೈಬರಹದಲ್ಲಿ ಬರೆದ ಅರ್ಜಿಯನ್ನು ಸಹಾಯಕ ಕಮಿಷನರ್‌ಗೆ ಸಲ್ಲಿಸಿದರೆ ಅವರು ಕುಮ್ಕಿ ಹಕ್ಕು ಮಂಜೂರಾತಿಗೆ ಸೂಕ್ತ ನಿರ್ಧಾರ ತೆಗೆದುಕೊಳ್ಳುತ್ತಾರೆ. ದ.ಕ. ಮತ್ತು ಉಡುಪಿ ಜಿಲ್ಲೆಗಳ 4 ಲಕ್ಷ ಕುಟುಂಬಗಳಿಗೆ ಇದರ ಲಾಭ ಸಿಗಲಿದ್ದು, 3.50 ಲಕ್ಷ ಸಣ್ಣ ಹಿಡುವಳಿದಾರರು, 50 ಸಾವಿರ ಮಧ್ಯಮ ಹಿಡುವಳಿದಾರರಿದ್ದಾರೆ.  ಸರ್ಕಾರದ ಈ ನಿರ್ಧಾರದಿಂದ ಖಜಾನೆಗೆ ತೆರಿಗೆ ಸಂಗ್ರಹವಾಗಲಿದೆ. ಇದಕ್ಕಾಗಿ ದಿ.ಡಾ.ವಿ.ಎಸ್.ಆಚಾಯ, ಹಣಕಾಸು ಕಾರ್ಯಪಡೆ ಅನುಷ್ಠಾನ ಸಮಿತಿ ಅಧ್ಯಕ್ಷ ಎ.ಜಿ.ಕೊಡ್ಗಿ, ಮಾಜಿ ಮುಖ್ಯಮಂತ್ರಿ ಡಿ.ವಿ.ಸದಾನಂದ ಗೌಡ ಪ್ರಯತ್ನಿಸಿದ್ದು ಅಭಿನಂದನಾರ್ಹ ಎಂದರು. ಜಿಲ್ಲಾಧ್ಯಕ್ಷ ಪದ್ಮನಾಭ ಕೊಟ್ಟಾರಿ, ಬಾಲಭವನ ಸಮಿತಿ ಅಧ್ಯಕ್ಷೆ ಸುಲೋಚನಾ ಭಟ್, ಮೀನುಗಾರಿಕಾ ಅಭಿವೃದ್ಧಿ ನಿಗಮ ಅಧ್ಯಕ್ಷ ನಿತಿನ್ ಕುಮಾರ್, ಮಾಧ್ಯಮ ಪ್ರಮುಖ್ ರಾಜಗೋಪಾಲ ರೈ ಹಾಜರಿದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.