ನೆಟ್ಟ ಗಿಡ ನಾಶ: ನಾಲ್ವರ ವಿರುದ್ಧ ಕೇಸು
ಸುಳ್ಯ: ಸಾಮಾಜಿಕ ಅರಣ್ಯಕ್ಕೆ ಒಳಪಡುವ ಜಾಗದಲ್ಲಿದ್ದ ಅಕೇಶಿಯಾ ಗಿಡಗಳನ್ನು ಸ್ಥಳೀಯರು ಕಡಿದ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರ ವಿರುದ್ಧ ಕೇಸು ದಾಖಲಾದ ಘಟನೆ ಐವರ್ನಾಡು ಗ್ರಾಮದ ದೇರಾಜೆಯಲ್ಲಿ ನಡೆದಿದೆ.
ಶೇಣಿ- ದೇರಾಜೆ ಪ್ರದೇಶದಲ್ಲಿ ಸಾಮಾಜಿಕ ಅರಣ್ಯಕ್ಕೆಂದು ಸುಮಾರು 15 ಹೆಕ್ಟೇರ್ನಷ್ಟು ಜಾಗ ಕಾದಿರಿಸಲಾಗಿತ್ತು. ಈ ಜಾಗದಲ್ಲಿ 2007- 08ರಲ್ಲಿ ಅಕೇಶಿಯಾ ಗಿಡಗಳನ್ನು ಇಲಾಖೆಯಿಂದ ನೆಡಲಾಗಿತ್ತು. ಸ್ಥಳೀಯ ನಿವಾಸಿಗಳಾದ ಗುಡ್ಡಪ್ಪ ಗೌಡ ಹಾಗೂ ಚಂದ್ರಹಾಸ ಎಂಬವರು ಸಾಮಾಜಿಕ ಅರಣ್ಯದ ತಲಾ 1 ಎಕ್ರೆ ಸ್ಥಳಕ್ಕೆ ತಂತಿಯ ಬೇಲಿ ಹಾಕಿ ಅಲ್ಲಿದ್ದ 600 ಗಿಡಗಳನ್ನು ಕಡಿದಿದ್ದರೆಂದೂ, ಮೋಹನ ಗೌಡ ಎಂಬವರು ಎರಡೂವರೆ ಎಕ್ರೆಯನ್ನು ಅತಿಕ್ರಮಣ ಮಾಡಿ ಸುಮಾರು 1600 ಗಿಡ ಕಡಿದಿದ್ದರೆಂದೂ, ಸತ್ಯನಾರಾಯಣ ಎಂಬವರು ಎರಡೂವರೆ ಎಕ್ರೆಯಲ್ಲಿ 1800 ಗಿಡಗಳನ್ನು ಕಡಿದಿದ್ದಾರೆ ಎಂಬ ಮಾಹಿತಿ ಸಾಮಾಜಿಕ ಅರಣ್ಯ ಇಲಾಖೆಗೆ ಹೋಗಿತ್ತು.
ಈ ದೂರಿನ ಮೇಲೆ ಅಧಿಕಾರಿಗಳು ಸ್ಥಳ ಪರಿಶೀಲನೆ ನಡೆಸಿದಾಗ ಗಿಡಗಳನ್ನು ನಾಶ ಮಾಡಿರುವುದು ಕಂಡು ಬಂದಿದ್ದು ನಾಲ್ವರ ವಿರುದ್ಧ ಪ್ರಕರಣ ದಾಖಲಾಗಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

