ದಕ್ಷಿಣ ಕನ್ನಡ

ಇಂದಿನಿಂದ ಮೂಲ್ಕಿ ವಿಜಯ ಕಾಲೇಜ್ ವಾರ್ಷಿಕೋತ್ಸವ

Published On :

ಮೂಲ್ಕಿ: ಮೂಲ್ಕಿ ವಿಜಯ ಪದವಿ ಪೂರ್ವ ಹಾಗೂ ಪ್ರಥಮ ದರ್ಜೆ ಕಾಲೇಜಿನ ವಾರ್ಷಿಕೋತ್ಸವವು 23ರಿಂದ 25ರವರೆಗೆ ಜರಗಲಿದೆ.
23ರಂದು ಬೆಳಗ್ಗೆ ಕಾಲೇಜಿನ 50ನೇ ವಾರ್ಷಿಕೋತ್ಸವ ಹಾಗೂ ಸ್ಥಾಪಕರ ದಿನಾಚರಣೆ ಜರಗಲಿದ್ದು, ಮಿನಿ ಅಡಿಟೋರಿಯಂ ಅನ್ನು ಯುಜಿಸಿಯ ಬೆಂಗಳೂರಿನ ಉಪ ಕಾರ್ಯದರ್ಶಿ ಡಾ.ಎನ್. ಗೋಪು ಕುಮಾರ್ ಉದ್ಘಾಟಿಸಲಿದ್ದಾರೆ.
  ಮಂಗಳೂರಿನ ಕರಾವಳಿ ಕಾಲೇಜು ಆಫ್ ಮ್ಯಾನೇಜ್‌ಮೆಂಟ್‌ನ ಮುಖ್ಯಸ್ಥ ಗಣೇಶ್ ರಾವ್ ಮುಖ್ಯ ಅತಿಥಿಯಾಗಿ ಭಾಗವಹಿಸಲಿದ್ದು, ಅಧ್ಯಕ್ಷತೆಯನ್ನು ಕಾಲೇಜಿನ ಆಡಳಿತ ಮಂಡಳಿ ಅಧ್ಯಕ್ಷ ಡಾ.ಎಂ.ಎ.ಆರ್. ಕುಡ್ವ ವಹಿಸಲಿದ್ದಾರೆ.
  24ರಂದು ಬೆಳಗ್ಗೆ 50ನೇ ಅಸೋಸಿಯೇಶನ್ ದಿನಾಚರಣೆ ಜರಗಲಿದ್ದು, ಮಣಿಪಾಲದ ಕೆಎಂಸಿಯ ಮೆಡಿಕಲ್ ಸೂಪರಿಟೆಂಡೆಂಟ್ ಡಾ.ಎಂ. ದಯಾನಂದ, ಭಾರತ್ ಕೋ ಆಪರೇಟಿವ್ ಬ್ಯಾಂಕ್‌ನ ಚೆಯರ್‌ಮೆನ್ ವಾಸುದೇವ ಕೋಟ್ಯಾನ್ ಮುಖ್ಯ ಅತಿಥಿಗಳಾಗಿ ಭಾಗವಹಿಸುವರು. ಬೆಂಗಳೂರಿನ ಜೈನ್ ವಿದ್ಯಾನಿಕೇತನದ ಪ್ರಾಚಾರ್ಯ ಬಿ.ಪಿ. ಕಿಶೋರ್ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ. 25ರಂದು ಮಧ್ಯಾಹ್ನ 50ನೇ ಹಳೆ ವಿದ್ಯಾರ್ಥಿ ಸಂಘದ ವಾರ್ಷಿಕೋತ್ಸವ ಜರಗಲಿದೆ ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.