ಕಿಲೆಂಜೂರು ದೈವಸ್ಥಾನ 25ರಂದು ಬ್ರಹ್ಮಕಲಶೋತ್ಸವ
ಮೂಲ್ಕಿ: ಕಿನ್ನಿಗೋಳಿ ಸಮೀಪದ ಕಿಲೆಂಜೂರಿನ ಶ್ರೀ ಸರಳ ಧೂಮಾವತಿ ದೈವಸ್ಥಾನದಲ್ಲಿ ಸುಮಾರು ರು. 50 ಲಕ್ಷ ವೆಚ್ಚದಲ್ಲಿ ಜೀರ್ಣೋದ್ಧಾರಗೊಂಡಿದ್ದು, ದೈವಸ್ಥಾನದಲ್ಲಿ ಬ್ರಹ್ಮಕಲಶೋತ್ಸವವು 25ರಂದು ಜರಗಲಿದೆ ಎಂದು ಜೀರ್ಣೋದ್ಧಾರ ಸಮಿತಿಯ ಅಧ್ಯಕ್ಷ ಕುಡ್ತಿಮಾರುಗುತ್ತು ರಾಜೇಂದ್ರ ಕೆ. ಶೆಟ್ಟಿ ಕಿಲೆಂಜೂರಿನ ದೈವಸ್ಥಾನದಲ್ಲಿ ಜರಗಿದ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಸುಮಾರು 800 ವರ್ಷಗಳ ಇತಿಹಾಸವಿರುವ ದೈವಸ್ಥಾನವು ಕಟೀಲಿನಲ್ಲಿ 1944ರಲ್ಲಿ ನೆರೆ ಬಂದು ದೇವಳವು ನೀರಿನಿಂದ ಆವೃತವಾದ ಸಂದರ್ಭದಲ್ಲಿ ನೀರಿನಿಂದ ಆವೃತವಾಗಿ ಧಾರ್ಮಿಕ ಕಾರ್ಯಕ್ರಮಗಳು ನಿಂತಿತ್ತು. 1968ರಲ್ಲಿ ಮತ್ತೆ ನೇಮೋತ್ಸವವು ಆರಂಭಗೊಂಡಿದ್ದು, 1992ರಲ್ಲಿ ಜೀರ್ಣೋದ್ಧಾರ ಕಾರ್ಯ ನಡೆದಿದ್ದು, ಭಂಡಾರ ಮನೆ, ಗರ್ಭಗುಡಿ ನಿರ್ಮಾಣಗೊಂಡಿದ್ದು, ಆ ಬಳಿಕ ಹಂತ ಹಂತವಾಗಿ ಜೀರ್ಣೋದ್ಧಾರಗೊಂಡಿದ್ದು ಇದೀಗ 50 ಲಕ್ಷ ವೆಚ್ಚದಲ್ಲಿ ಸಂಪೂರ್ಣ ಜೀರ್ಣೋದ್ಧಾರಗೊಂಡಿದೆ.
ಇಂದಿನಿಂದ ವಿವಿಧ ಕಾರ್ಯಕ್ರಮ: 23ರಿಂದ 26ವರೆಗೆ ಧಾರ್ಮಿಕ, ಸಾಂಸ್ಕೃತಿಕ ಕಾರ್ಯಕ್ರಮಗಳು ಜರಗಲಿದ್ದು, 25ರಂದು ಬ್ರಹ್ಮಕಲಶಾಭಿಷೇಕ, 26ರಂದು ನೇಮೋತ್ಸವವು ಜರಗಲಿದೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ಮಾಡರ ಮನೆ ಪ್ರವೀಣ್ಮಾಡ, ಅತ್ತೂರುಗುತ್ತು ಪ್ರಸನ್ನ ಎಲ್. ಶೆಟ್ಟಿ, ಮುಂಬೈ ಸಮಿತಿ ಅಧ್ಯಕ್ಷ ಮಜಲಗುತ್ತು ಹರೀಶ್ ಜ. ಶೆಟ್ಟಿ, ಬಾಂಜಾಲ ಗುತ್ತು ವಿಶ್ವನಾಥ ಶೆಟ್ಟಿ, ನಿಶಾಂತ್ ಶೆಟ್ಟಿ ಮತ್ತಿತರರು ಕಾಮ್ಯೆತೋಟ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

