ದಕ್ಷಿಣ ಕನ್ನಡ

ಬಿಎಸ್‌ವೈಗೆ ಕಾಂಗ್ರೆಸ್ ಬ್ಲಾಕ್‌ಮೇಲ್

Published On :

ಮಂಗಳೂರು: ರಾಜಿನಾಮೆ ವಿಚಾರದಲ್ಲಿ ಸ್ವೀಕರ್ ಸ್ಥಾನಕ್ಕೆ ಅಪಮಾನ ಮಾಡುವ ಅಧಿಕಾರ ಯಡಿಯೂರಪ್ಪ, ಬಳಗಕ್ಕೆ ಇಲ್ಲ. ಬಿಎಸ್‌ವೈ ರಾಜಿನಾಮೆ ಹಿಂದೆ ಕಾಂಗ್ರೆಸ್‌ನ ಬ್ಲಾಕ್‌ಮೇಲ್ ತಂತ್ರವಿದ್ದು, ಅದನ್ನು ಅವರು ಅರ್ಥಮಾಡಿಕೊಂಡಿಲ್ಲ. ಈ ಎಲ್ಲ ಕುತಂತ್ರಗಳ ಬಗ್ಗೆ ಬಹುಮತ ಸಾಬೀತು ಸಂದರ್ಭ ಬಂದರೆ ಉತ್ತರ ನೀಡುವುದಾಗಿ ಉಪಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಈಶ್ವರಪ್ಪ ಹೇಳಿದ್ದಾರೆ.  ಮಂಗಳೂರಿನ ಸರ್ಕ್ಯೂಟ್‌ಹೌಸ್‌ನಲ್ಲಿ ಬುಧವಾರ ಸುದ್ದಿಗಾರರಲ್ಲಿ ಮಾತನಾಡಿದ ಅವರು, ಬಿಎಸ್‌ವೈ ಬೆಂಬಲಿಗರು ರಾಜಿನಾಮೆ ನೀಡಿರುವುದು ಸರ್ಕಾರವನ್ನು ಬೀಳಿಸಬೇಕೆನ್ನುವ ಒಂದೇ ಕಾರಣಕ್ಕಾಗಿ. ಇದರ ಹಿಂದೆ ಕಾಂಗ್ರೆಸ್ ಕೈವಾಡವಿದ್ದು, ಬಿಎಸ್‌ವೈಯನ್ನು ದಾಳವಾಗಿಸಿದೆ. ರಾಜಿನಾಮೆ ಸಂದರ್ಭ ಸ್ಪೀಕರ್ ಕೊಠಡಿಯಲ್ಲಿ ಇಲ್ಲದಿದ್ದರೆ ಅದಕ್ಕೆ ಅಪಮಾನ ಮಾಡಬಾರದು. ಸ್ಪೀಕರ್ ಎಲ್ಲಿದ್ದಾರೆ ಎಂದು ತನಗೆ ಗೊತ್ತಿಲ್ಲ ಎಂದರು.
ಬಿಎಸ್‌ವೈಗೆ ಪ್ರಾರ್ಥನೆ: ಬಿಎಸ್‌ವೈ ಹಿಂದೆ ಕೇಂದ್ರ ಹಾಗೂ ರಾಜ್ಯದ ಯಾವೆಲ್ಲ ಕಾಂಗ್ರೆಸ್ ನಾಯಕರಿದ್ದಾರೆ ಎಂಬುದನ್ನು ಗಮನಿಸುತ್ತೇವೆ. ಕಾಂಗ್ರೆಸ್ ವಿಷವರ್ತುಲದಲ್ಲಿ ಬಿಎಸ್‌ವೈ ಸಿಲುಕಿದ್ದು, ಅದರಿಂದ ಬೇಗನೆ ಹೊರಬರುವಂತೆ ಅವರಲ್ಲಿ ಪ್ರಾರ್ಥಿಸುತ್ತೇನೆ ಎಂದಿದ್ದಾರೆ ಈಶ್ವರಪ್ಪ. ರಾಜಕೀಯ ಬೆಳವಣಿಗೆಗಳನ್ನು ರಾಜ್ಯದ ಜನತೆಯೂ ನೋಡುತ್ತಿದೆ. ಈ ಗೊಂದಲದಿಂದ ಬಿಜೆಪಿ ಹೊರಬರಲಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.