ದಕ್ಷಿಣ ಕನ್ನಡ

ಕುಂಚದಲ್ಲಿ ಅರಳುತ್ತಿರುವ ಕಾರಂತರ ಕಾದಂಬರಿಗಳು

Published On :

ಪುತ್ತೂರು: ಡಾ.ಶಿವರಾಮ ಕಾರಂತರ ಸಾಹಿತ್ಯವನ್ನು ಕಲಾಕೃತಿ ರೂಪದಲ್ಲಿ ಸೃಷ್ಟಿಸುವ ಮೂಲಕ ಜನರಿಗೆ ತಿಳಿಸುವ ಪ್ರಯತ್ನ ಪುತ್ತೂರಿನ ಬಾಲವನದಲ್ಲಿ ನಡೆಯುತ್ತಿದೆ.
ಕಾರಂತರ ಕಾದಂಬರಿಗಳಲ್ಲಿ ಆಯ್ದ 15 ಕಾದಂಬರಿಗಳ ಕುರಿತು ಪ್ರಸಿದ್ಧ ಸಾಹಿತಿಗಳು ಹಾಗೂ ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಕಲಾವಿದರು ಚರ್ಚೆ ನಡೆಸಿ, ಕಾದಂಬರಿಯಲ್ಲಿನ ಆಶಯಗಳನ್ನು ಸಮಾಜಕ್ಕೆ ಪರಿಚಯಿಸುವ ನಿಟ್ಟಿನಲ್ಲಿ ಜ.25ರಿಂದ 29ರತನಕ ತೈಲವರ್ಣ ಕಲಾಕೃತಿಗಳ ರಚನಾ ಶಿಬಿರ ನಡೆಯುತ್ತಿದೆ.
ಯಾವ್ಯಾವ ಕಲಾವಿದರು?: ಹಿರಿಯ ಕಲಾವಿದರಾದ ಎಂ.ಬಿ. ಪಾಟೀಲ್, ವಿ.ಜೆ. ಅಂದಾನಿ, ಚಂದ್ರನಾಥ ಆಚಾರ್ಯ, ಪ.ಸ. ಕುಮಾರ್. ಎಂ.ಎಸ್. ಮೂರ್ತಿ, ರೇಖಾ ರಾಣಿ, ಸುದೇಶ್ ಮಹಾನ, ಸುರೇಶ್ಚಂದ್ರ ದತ್ತ, ಕೆ.ಕೆ. ಮಕಾಳಿ, ಬಾಬುರಾವ್ ನಾಡೊಣಿ, ರೇಣುಕಾ ಮಾರ್ಕಂಡೆ, ಮೋಹನ್ ಸೋನ ಮತ್ತು ರಮೇಶ್ ರಾವ್ ಕಾರಂತರ ಕಾದಂಬರಿಗಳಿಗೆ ತಮ್ಮ ಕುಂಚದಲ್ಲಿ ಚಿತ್ರರೂಪ ನೀಡುತ್ತಿದ್ದಾರೆ. ಸಾಹಿತಿಗಳಾದ ಲಕ್ಷ್ಮೀಶ ತೋಳ್ಪಾಡಿ, ಪುರಂದರ ಭಟ್, ಸುಬ್ರಾಯ ಚೊಕ್ಕಾಡಿ, ತಾಳ್ತಜೆ ವಸಂತ ಕುಮಾರ್, ವರದರಾಜ ಚಂದ್ರಗಿರಿ, ಜಯಪ್ರಕಾಶ್ ಮಾವಿನಕುಳಿ, ಚಿಕ್ಕಮಗಳೂರು ಗಣೇಶ್, ನರೇಂದ್ರ ರೈ ದೇರ್ಲ, ರಾಜೇಶ್ ಬೆಜ್ಜಂಗಳ, ಜಯಪ್ರಕಾಶ್ ಶೆಟ್ಟಿ ಕುಂದಾಪುರ, ತುಕಾರಾಮ ಮೈಸೂರು, ರಮೇಶ್ಚಂದ್ರ ದತ್ತ ಬೆಂಗಳೂರು ಮತ್ತು ಡಾ. ಸುಬ್ರಹ್ಮಣ್ಯ ಭಟ್ ಕಲಾವಿದರೊಂದಿಗೆ ಸಂವಾದ ನಡೆಸುವುದರೊಂದಿಗೆ ಡಾ. ಕಾರಂತರ ಕಾದಂಬರಿಯ ಕಲಾಚಿತ್ರದ ಕಲ್ಪನೆಗೆ ಸಾಥ್ ನೀಡುತ್ತಿದ್ದಾರೆ.
ಕಾದಂಬರಿ 'ಚಿತ್ರ'ಣ: ಡಾ.ಶಿವರಾಮ ಕಾರಂತರ ಚಿಗುರಿದ ಕನಸು ಕಾದಂಬರಿಯನ್ನು ಚಂದ್ರನಾಥ ಆಚಾರ್ಯ, 'ಸಮೀಕ್ಷೆ'ಯನ್ನು ಪ.ಸ.ಕುಮಾರ್, 'ಮೈಮನಗಳ ಸುಳಿಯಲ್ಲಿ'ಯನ್ನು ಎಂ.ಎನ್. ಮೂರ್ತಿ, 'ಕನ್ಯಾ ಬಲಿ'ಯನ್ನು ರೇಖಾರಾಣಿ, 'ಅಳನಿರಾಳ'ವನ್ನು ಎಂ.ಬಿ. ಪಾಟೀಲ್, 'ಮರಳಿ ಮಣ್ಣಿಗೆ'ಯನ್ನು ವಿ.ಜೆ. ಅಂದಾನಿ, 'ಕುಡಿಯರ ಕೂಸು'ವನ್ನು ಸುದೇಶ್ ಮಹಾನ, 'ಔದಾರ್ಯದ ಉರುಳಲ್ಲಿ'ಯನ್ನು ಸುರೇಶ್ಚಂದ್ರ ದತ್ತ, 'ಬೆಟ್ಟದ ಜೀವ'ವನ್ನು ಕೆ.ಕೆ. ಮಕಾಳಿ, 'ಅಳಿದ ಮೇಲೆ'ಯನ್ನು ಬಾಬುರಾವ್ ನಾಡೊಣಿ, 'ಸ್ವಪ್ನದ ಹೊಳೆ'ಯನ್ನು ರೇಣುಕಾ ಮಾರ್ಕಾಂಡೆ, 'ಸರಸಮ್ಮನ ಸಮಾಧಿ'ಯನ್ನು ಮೋಹನ್ ಸೋನ ಮತ್ತು 'ಕಾರಂತರ ಬ್ಯಾಲೆ'ಗೆ ರಮೇಶ್ ರಾವ್ ಬಣ್ಣದ ರೂಪ ನೀಡುತ್ತಿದ್ದಾರೆ.
ಕಾರ್ಯಕ್ರಮದ ಆಯೋಜಕರಾದ ಡಾ. ಶಿವರಾಮ ಕಾರಂತ ಬಾಲವನ ಸಮಿತಿ ಅಧ್ಯಕ್ಷ ಹಾಗೂ ಪುತ್ತೂರಿನ ಸಹಾಯಕ ಆಯುಕ್ತ ಎಚ್. ಪ್ರಸನ್ನ ಕಾರ್ಯಕ್ರಮದ ಮೂಲ ರೂವಾರಿ. ಸರ್ಕಾರದ ಅನುದಾನವಿಲ್ಲದೆ ಸ್ಥಳೀಯರ ಸಹಕಾರದಲ್ಲಿಯೇ ಈ ಶಿಬಿರವನ್ನು ಪ್ರಸನ್ನ  ಆಯೋಜಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.