ದಕ್ಷಿಣ ಕನ್ನಡ

ಕೇಸರಿ ಪಾವಿತ್ರ್ಯ ಹಾಳು ಮಾಡಿದರು: ಪೂಜಾರಿ

Published On :

ಮಂಗಳೂರು: ಸಂಘಪರಿವಾರದವರು ಕೇಸರಿ ಖಾವಿ ಬಟ್ಟೆ ತೊಟ್ಟು, ಮಸೀದಿ, ಚರ್ಚ್ ಹೆಣ್ಣುಮಕ್ಕಳ ಮೇಲೆ ದಾಳಿ ಮಾಡಿ ಖಾವಿ, ಕೇಸರಿ ಬಣ್ಣದ ಪಾವಿತ್ರ್ಯ ಹಾಳು ಮಾಡಿದರು ಎಂದು ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಹೇಳಿದರು. ಮಂಗಳವಾರ ಮಧ್ಯಾಹ್ನ ತೊಕ್ಕೊಟ್ಟು ಬಹಿರಂಗ ಸಭೆಯಲ್ಲಿ ಮಾತನಾಡಿದರು. ಭಾರತ ಮೊದಲ ದಂಡನಾಯಕ ಹುಟ್ಟಿದ ವೀರರ ನಾಡು ಕೊಡಗಿನ ಲ್ಲಿ ಹುಟ್ಟಿದ್ದರೂ ಸ್ಪೀಕರ್ ಹುದ್ದೆಯ ಮಾನ ಮಾರ್ಯಾದೆ ತೆಗೆದರು ಎಂದು ಟೀಕಿಸಿದರು. ಎಸ್.ಎಂ.ಕೃಷ್ಣ ನೇತೃತ್ವದ ಕಾಂಗ್ರೆಸ್ ಸರ್ಕಾರದ ಅಭಿವೃದ್ಧಿ ವೀಕ್ಷಣೆಗೆ ಅಮೆರಿಕ ಅಧ್ಯಕ್ಷರು ಸೇರಿದಂತೆ ವಿದೇಶಿಯರು ಬೆಂಗಳೂರಿಗೆ ಆಗಮಿಸುತ್ತಿದ್ದರು. ಆದರೆ ಈಗ ಬಿಜೆಪಿ ಸರ್ಕಾರ ಬಂದ ಬಳಿಕ ವಿಧಾನ ಸಭೆಗೆ ವಾಮಾಚಾರ, ಮಾಟ ಮಾಡಿದರು ಎಂದು ಟೀಕಿಸಿದರು.
ಮಹಾತ್ಮ ಗಾಂಧಿ ಬಳಿಕ ಸೋನಿಯಾ
ಮಂಗಳೂರು: ಪಕ್ಷ ಮತ್ತು ದೇಶಕ್ಕಾಗಿ ಅಧಿಕಾರ ತ್ಯಾಗ ಮಾಡಿದವರು ಮಹಾತ್ಮಾ ಗಾಂಧಿ ಬಳಿಕ ಸೋನಿಯಾ ಗಾಂಧಿ ಎಂದು ಕೇಂದ್ರ ಸಚಿವ ಎಂ. ವೀರಪ್ಪ ಮೊಯ್ಲಿ ಹೇಳಿದರು. ಭಾರತ ಸಂಸ್ಕೃತಿ, ಕಾಂಗ್ರೆಸ್ ಸಂಸ್ಕೃತಿ, ಭಾರತ ಬದುಕಬೇಕಾದರೆ, ಕಾಂಗ್ರೆಸ್ ಬದುಕಬೇಕು. ಕಾಂಗ್ರೆಸ್ ಬದುಕಬೇಕಾದರೆ, ಸಾಮರಸ್ಯ ಉಳಿಯಬೇಕು. ಕಾಂಗ್ರೆಸ್ ಗೆದ್ದರೆ ಕರ್ನಾಟಕ ಗೆಲ್ಲುತ್ತದೆ, ಕಾರ್ಯಕರ್ತರು ಗೆಲ್ಲುತ್ತಾರೆ ಎಂಬ ಉದಾತ್ತ ಮನೋಭಾವ ಬೆಳೆಸಿಕೊಳ್ಳಬೇಕು ಎಂದರು. ಆರ್‌ಎಸ್‌ಎಸ್ ಜಾತೀಯ ಸಿದ್ಧಾಂತ ಹೊಂದಿದೆ. ಕಾಂಗ್ರೆಸ್ ಎಲ್ಲ ವರ್ಗದವರಿಗೂ ರಾಜಕೀಯ, ಶೈಕ್ಷಣಿಕ ಹಕ್ಕು, ಮೀಸಲು ನೀಡಿದೆ. ಬಿಜೆಪಿಗೆ ಧರ್ಮದ ಮೇಲೆ ವಿಶ್ವಾಸ ಇಲ್ಲ, ಅಧಿಕಾರಕ್ಕಾಗಿ ಧರ್ಮ ಬಳಸುತಿದ್ದಾರೆ. ಅವರಿಗೆ ಮನುಷ್ಯ ಭಯ ಇಲ್ಲವೇ ಇಲ್ಲ, ದೇವರ ಭಯವೂ ಇಲ್ಲ. ಅವರು ಮುರಿಯುವ ಸಂಸ್ಕೃತಿಯವರು, ನಾವು ಕಟ್ಟುವ ಸಂಸ್ಕೃತಿಯವರು ಎಂದರು.
ಮೀನುಗಾರರಿಗೆ ಡಿಸೇಲ್: ಮೀನುಗಾರರಿಗೆ ರಿಯಾಯಿತಿ ದರದಲ್ಲಿ ಡೀಸೇಲ್ ನೀಡುವ ಕೆಲಸ ಮಾಡಲಿದ್ದೇವೆ ಎಂದು ಮೊಯ್ಲಿ ಅಭಯ ನೀಡಿದರು. ಹೈದರಾಬಾದ್ ಕರ್ನಾಟಕಕ್ಕೆ ವಿಶೇಷ ಸ್ಥಾನ ಮಾನ ನೀಡಿದ್ದು ಕೇಂದ್ರ ಸರ್ಕಾರ. ಈ ಬಾರಿ ಚುನಾವಣೆಯಲ್ಲಿ ಆ ಭಾಗದಲ್ಲಿ 40 ಸೀಟು ಕಾಂಗ್ರೆಸ್‌ಗೆ ಸಿಗಲಿದೆ ಎಂದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.