ದಕ್ಷಿಣ ಕನ್ನಡ

ದ.ಕ: ಅಡಕೆ ಬೆಳೆಗಾರರಿಗೆ ಸಹಾಯಧನ, ಫೆ.7 ಕೊನೆ

Published On :

ಮಂಗಳೂರು: ದ.ಕ.ಜಿಲ್ಲೆಯಲ್ಲಿ 2012-13ನೇ ಸಾಲಿಗೆ ಅಡಕೆ ಬೆಳೆಗಾರರಿಗೆ ಬೇರು ಹುಳ ಬಾಧಿತ ತೋಟಗಳ ಪುನಃಶ್ಚೇತನಕ್ಕೆ ತೋಟಗಾರಿಕೆ ಯೋಜನೆಯಡಿ ಶೇ.50 ಸಹಾಯ ಒದಗಿಸುವ ಕಾರ್ಯಕ್ರಮ ವಿಸ್ತರಿಸಲಾಗಿದೆ. 1 ಹೆಕ್ಟೇರ್‌ಗೆ(2.50 ಎಕರೆ) 7500ರಂತೆ ಸಹಾಯಧನ ನೀಡಲಾಗುವುದು. ಫಲಾನುಭವಿಗಳು ಫೆ.7ರೊಳಗೆ ತಮ್ಮ ತೋಟಗಳಿಗೆ ಬಳಸಲು ಖರೀದಿಸಿದ ಪೀಡೆನಾಶಕ, ರಸಗೊಬ್ಬರ, ಹಿಂಡಿಗಳು, ಸೂಕ್ಷ್ಮಪೋಷಕಾಂಶ ಖರೀದಿ ಬಿಲ್ಲುಗಳೊಂದಿಗೆ ಆಯಾ ತಾಲೂಕು ಕಚೇರಿಗಳಲ್ಲಿ ಅರ್ಜಿ ನೀಡಬಹುದು. ಜಿಲ್ಲೆಗೆ ಲಭ್ಯ ರು. 50 ಲಕ್ಷ ಅನುದಾನದಲ್ಲಿ ಮೊದಲು ಬಂದವರಿಗೆ ಪ್ರಾಶಸ್ತ್ಯ ನೀಡಲಾಗುವುದು. ವಿವರಕ್ಕೆ ತೋಟಗಾರಿಕೆ ಉಪನಿರ್ದೇಶಕರ ಕಚೇರಿ, ಬೆಂದೂರು ಕ್ರಾಸ್ ಮಂಗಳೂರು(ದೂ.0824-2423628)ಅಥವಾ ಆಯಾ ತಾಲೂಕಿನ ಹಿರಿಯ ಸಹಾಯಕ ತೋಟಗಾರಿಕೆ ನಿರ್ದೇಶಕರ ಕಚೇರಿಗಳನ್ನು ಸಂಪರ್ಕಿಸಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.