ದಕ್ಷಿಣ ಕನ್ನಡ

ಕೇರಳಕ್ಕೆ ದನ ಸಾಗಾಟ ಯತ್ನ: ಸ್ಥಳೀಯರಿಂದ ತಡೆ

Published On :

ವಿಟ್ಲ: ಪುಣಚ ಗ್ರಾಮದಿಂದ ಕೇರಳಕ್ಕೆ ದನ ಸಾಗಾಟ ಮಾಡುತ್ತಿದ್ದ ವಾಹನವನ್ನು ಸ್ಥಳೀಯರು ತಡೆಯೊಡ್ಡಿ, ಪೊಲೀಸರಿಗೆ ನೀಡಿದ್ದು ವಾಹನ ಮತ್ತು ಆರೋಪಿಯನ್ನು ವಶಕ್ಕೆ ಪಡೆದ ಘಟನೆ ಕೊಲ್ಲಪದವಿನ ಬೈರಿಕಟ್ಟೆಯಲ್ಲಿ ಗುರುವಾರ ರಾತ್ರಿ ನಡೆದಿದೆ. ಪಿಕಪ್ ವಾಹನದಲ್ಲಿ ದನಗಳನ್ನು ತುಂಬಿಸಿಕೊಂಡು ಕೊಲ್ಲಪದವು ರಸ್ತೆಯಲ್ಲಿ ತಂದು ಚೆಕ್ಕುತ್ತಿ, ಪಾಂಡಿಗಯ ಮೂಲಕ ಕೇರಳದ ಅಡ್ಕಸ್ಥಳಕ್ಕೆ ಯಾವುದೇ ಆತಂಕವಿಲ್ಲದೆ, ಅಡೆತಡೆಗಳಿಲ್ಲದೆ ಸಾಗಿಸುವ ಉಪಾಯವನ್ನು ಮಾಡಲಾಗುತ್ತಿತ್ತೆನ್ನಲಾಗಿದೆ. ಅದೇ ರಿತಿ ಹೇರಿಕೊಂಡು ಬರುತ್ತಿರುವುದನ್ನು ಸ್ಥಳೀಯರೊಬ್ಬರು ನೋಡಿದ್ದು ಅಕ್ಕಪಕ್ಕದವರಿಗೆ ತಿಳಿಸುವಷ್ಟರಲ್ಲಿ ಚಾಲಕನಿಗೆ ಈ ವಿಷಯ ತಿಳಿದು ಪಿಕಪ್‌ನ್ನು ದೂರದಲ್ಲಿ ನಿಲ್ಲಿಸಿ ದನಗಳನ್ನು ಹಗ್ಗ ಕಳಚಿ ಗುಡ್ಡಕ್ಕೆ ಬಿಡುವ ನಾಟಕವಾಡಿದ್ದಾನೆ. ಇದನ್ನು ಅರಿತ ಸ್ಥಳೀಯರು ವಿಟ್ಲ ಠಾಣೆಗೆ ದೂರು ನೀಡಿದ್ದಾರೆ. ಸ್ಥಳಕ್ಕೆ ಭೇಟಿ ನೀಡಿದ ವಿಟ್ಲ ಠಾಣಾಧಿಕಾರಿ ಮಾಧವ ಕೂಡ್ಲು ಮತ್ತು ಪೊಲೀಸರು ವಾಹನ ಮತ್ತು ಚಾಲಕನನ್ನು ವಶಕ್ಕೆ ತೆಗೆದುಕೊಂಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.