ದಕ್ಷಿಣ ಕನ್ನಡ

ಚರಂಡಿಯಲ್ಲಿ ಅಂಚೆಪತ್ರ ರಾಶಿ: ಪೋಸ್ಟ್‌ಮ್ಯಾನ್ ಅಮಾನತು

Published On :

ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ನಿಡ್ಲೆ ಗ್ರಾಮದ ಕಾಯರ್ತಡ್ಕ ಕಳಂಜ ಅಂಚೆ ಕಚೇರಿ ಮೂಲಕ ಬಟವಾಡೆಯಾಗಬೇಕಾಗಿದ್ದ ಅಂಚೆ ಪತ್ರಗಳು ಚರಂಡಿಯಲ್ಲಿ ಪತ್ತೆಯಾಗಿದ್ದು, ಈ ಬಗ್ಗೆ ಮೂಡಿದ ವ್ಯಾಪಕ ಜನಾಕ್ರೋಶದ ನಡುವೆ ಪೋಸ್‌ಮ್ಯಾನ್‌ನ್ನು ಕರ್ತವ್ಯದಿಂದ ಅಮಾನತುಗೊಳಿಸಲಾಗಿದೆ.  ಮದ್ಯವ್ಯಸನಿ ಎನ್ನಲಾದ ಈ ಪೋಸ್‌ಮ್ಯಾನ್ ಅಂಚೆ ಬಟವಾಡೆ ಮಾಡುವ ಉಸಾಬರಿಯೇ ಬೇಡವೆಂದು ಬಂದಂತಹ ಅಂಚೆ ಪತ್ರಗಳನ್ನು ಚರಂಡಿಗೆ ಎಸೆದಂತಿದೆ.
ಚರಂಡಿಯಲ್ಲಿ ಅಂಚೆ ಪತ್ರಗಳು ದೊಡ್ಡ ಪ್ರಮಾಣದಲ್ಲಿ ಪತ್ತೆಯಾದ ಬಗ್ಗೆ ಸ್ಥಳೀಯರು ಅಂಚೆ ಅಧಿಕಾರಿಗಳಿಗೆ ದೂರು ನೀಡಿದ್ದಾರೆ.
ದೂರಿನನ್ವಯ ಬೆಳ್ತಂಗಡಿ ಪೋಸ್ಟಲ್ ಇನ್‌ಸ್ಪೆಕ್ಟರ್ ಉದಯ ರಾವ್ ಸ್ಥಳಕ್ಕೆ ಆಗಮಿಸಿ, ಪರಿಶೀಲನೆ ನಡೆಸಿದ್ದಾರೆ.  ಕರ್ತವ್ಯಲೋಪವೆಸಗಿದ ಪೋಸ್ಟ್‌ಮ್ಯಾನ್ ಕುಶಾಲಪ್ಪನನ್ನು ತಕ್ಷಣದಿಂದಲೇ ಅಮಾನುಗೊಳಿಸಿ ಆದೇಶಿಸಲಾಗಿದೆ.  ಇತ್ತ ಕರ್ತವ್ಯ ಲೋಪವೆಸಗಿದ ಅಂಚೆ ಸಿಬ್ಬಂದಿ ಬಗ್ಗೆ ಇಲಾಖಾ ತನಿಖೆ ನಡೆಯುತ್ತಿದೆ.
ಇದೇ ಪೋಸ್ಟ್‌ಮ್ಯಾನ್ ಗ್ರಾಮದ ಏಕ ಎಂಬಲ್ಲಿನ ಪ್ರಕಾಶ್ ಆಚಾರ್ಯ ಎಂಬವರ ಮನೆಗೆ ಬಂದು ಕೊಡ್ಡ ಕಟ್ಟನ್ನು ನೀಡಿ, ಯಾರು ಕೇಳಿದರೂ ನೀಡಬೇಡಿ ಎಂದು ತಿಳಿಸಿ ಹೋಗಿದ್ದನಂತೆ. ಪೋಸ್ಟ್‌ಮ್ಯಾನ್ ಅಮಾನತಾದ ಬಳಿಕ ಅನುಮಾನಗೊಂಡ ಪ್ರಕಾಶ್ ಆಚಾರ್ಯ ಕಟ್ಟು ಬಿಚ್ಚಿ ನೋಡಿದಾಗ ಜೂನ್ ತಿಂಗಳಲ್ಲಿ ಬಟವಾಡೆಯಾಗಬೇಕಿದ್ದ ಅಂಚೆಪತ್ರಗಳ ರಾಶಿ ಪತ್ತೆಯಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.