ಬೆಳಗ್ಗೆ ಸುರಿದ ಮಳೆ ಸಂಜೆ ನಾಪತ್ತೆ!
ಮಂಗಳೂರು: ಅಬ್ಬರದಿಂದ ಮುರ್ನಾಲ್ಕು ದಿನ ಸುರಿದ ಮುಂಗಾರು ಮಳೆ ಮಂಗಳವಾರ ಹಿನ್ನಡೆ ಕಂಡಿದೆ. ಸೋಮವಾರ ಕೆಲವು ಕಡೆ ಮಳೆ ಸುರಿದದ್ದು ಬಿಟ್ಟರೆ ಮಂಗಳವಾರ ಮೋಡ, ಬಿಸಿಲಿನ ಅನುಭವ. ಮುಂಜಾನೆ ನಾಲ್ಕು ಹನಿ ಹನಿಸಿದ್ದು ಹೊರತುಪಡಿಸಿ ಮಳೆ ಪತ್ತೆ ಇರಲಿಲ್ಲ. ಗ್ರಾಮಾಂತರ ಪ್ರದೇಶದಲ್ಲೂ ಮಳೆ ಮರೆಯಾಗಿತ್ತು.
ಮಂಗಳವಾರ ಬೆಳಗ್ಗಿನ ವರೆಗೆ ಜಿಲ್ಲೆಯಲ್ಲಿ ಒಟ್ಟು 7.6 ಮಿಲಿ ಮೀಟರ್ ಮಳೆ ದಾಖಲಾಗಿದೆ. ಗರಿಷ್ಠ ಮಳೆ 18.2 ಮಿ.ಮೀ. ಬೆಳ್ತಂಗಡಿಯಲ್ಲಿ. ಬಂಟ್ವಾಳ 5.4 ಮಿ.ಮೀ, ಮಂಗಳೂರು 3.3 ಮಿ.ಮೀ, ಪುತ್ತೂರು 8.7 ಮಿ.ಮೀ, ಸುಳ್ಯ 2.4 ಮಿ.ಮೀ ಮಳೆಯಾಗಿದೆ. ಜಿಲ್ಲೆಯಲ್ಲಿ ವಾರ್ಷಿಕ ಸಾಮಾನ್ಯ ಮಳೆ 3912.2 ಮಿ.ಮೀ ಆಗಬೇಕಾಗಿದ್ದು, ಈವರೆಗೆ ಒಟ್ಟು 941 ಮಿ.ಮೀ ಮಳೆಯಾಗಿದೆ. ಇದೇ ದಿನ ಕಳೆದ ವರ್ಷ 5.4 ಮಿ.ಮೀ ಮಳೆಯಾಗಿತ್ತು. ಜನವರಿಯಿಂದ ಜೂನ್ವರೆಗೆ ಕಳೆದ ಬಾರಿ 45.1 ಮಿ.ಮೀ ಮಳೆಯಾಗಿದ್ದರೆ, ಈ ಬಾರಿ 291.3 ಮಿ.ಮೀ ಅಧಿಕ ಮಳೆಯಾಗಿದೆ. ತುಂಬೆಯಲ್ಲಿ ನೀರು ಸಂಗ್ರಹ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಕ್ರಸ್ಟಲ್ ಗೇಟ್ನ್ನು ಕ್ರಮವಾಗಿ ತೆಗೆಯಲಾಗುತ್ತಿದೆ. ಸೋಮವಾರ ತುಂಬೆ ಅಣೆಕಟ್ಟೆಯಲ್ಲಿ ಹೂಳು ತುಂಬಿರುವುದನ್ನು ತೆಗೆಯಲಾಗಿದ್ದು, ಉಳಿದ ಹೂಳು ತೆಗೆಯುವ ಕಾರ್ಯ ಬುಧವಾರ ನೆರವೇರಲಿದೆ. ಹೂಳು ತೆಗೆಯುವ ಕಾರಣ ನಗರಕ್ಕೆ ನೀರು ಪೂರೈಕೆಯಲ್ಲಿ ಅಡಚಣೆ ಉಂಟಾಗಿತ್ತು.
ಉಡುಪಿ ವರದಿ: ಜಿಲ್ಲೆಯಲ್ಲಿ ಕೆಲವು ದಿನಗಳಿಂದ ಧಾರಕಾರವಾಗಿ ಗುಡುಗು ಸಿಡಿಲಿನೊಂದಿಗೆ ಸುರಿಯುತ್ತಿದ್ದ ಮಳೆ ಮಂಗಳವಾರ ಬೆಳಗ್ಗಿನ ಜಾವ ಸ್ವಲ್ಪ ಹೊತ್ತು ಕಾಣಿಸಿಕೊಂಡಿದೆ.
ಬೆಳಗ್ಗೆ ದಟ್ಟ ಮೋಡ ಕವಿದ ವಾತವರಣವಿದ್ದು ಮಳೆಯ ಆರ್ಭಟ ಜೋರಾಗಿ ಇರಬಹುದು ಎಂದು ಕಾದಿದ್ದ ಜನರಿಗೆ ನಿರಾಶೆ ಹುಟ್ಟಿಸಿದೆ. ಬೆಳಗ್ಗೆ ಬಂದು ಹೋದ ಮಳೆ ಸಂಜೆಯವರೆಗೂ ಬಾರದೆ ಬಿಸಿಲಿನ ವಾತವರಣವಿತ್ತು. ಉಡುಪಿಯಲ್ಲಿ 5.5 ಮಿ.ಮೀ., ಕಾರ್ಕಳ 12.6 ಮಿ.ಮೀ., ಕುಂದಾಪುರ 11.1 ಮಿ.ಮೀ. ಮಳೆಯಾಗಿದ್ದು ಯಾವುದೇ ಹಾನಿ ಸಂಭವಿಸಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

