ಜಾಗೃತಿಯೇ ಡೆಂಘೀ ತಡೆಗೆ ಪ್ರಧಾನ ಅಸ್ತ್ರ
ಸುಬ್ರಹ್ಮಣ್ಯ: ಕಳೆದ 12 ದಿನಗಳಿಂದ ಸುತ್ತಮುತ್ತಲಿನ ಗ್ರಾಮೀಣ ಪ್ರದೇಶಗಳಲ್ಲಿ ಮಲೇರಿಯಾ ಹಾಗೂ ಡೆಂಘೀ ಜ್ವರಗಳಿಂದ ತತ್ತರಿಸಿರುವ ಈ ಭಾಗದಲ್ಲಿ ಗ್ರಾಮಸ್ಥರು ಭಯಭೀತರಾಗಿದ್ದಾರೆ. ಜನತೆ ತಮ್ಮೊಳಗೆ ಜಾಗೃತಿಗೊಳ್ಳುವುದು ಹಾಗೂ ತಮ್ಮ ಮನೆ ಪರಿಸರ ಸ್ವಚ್ಛವಾಗಿ ಇರಿಸಿಕೊಳ್ಳುವುದೇ ಈ ಮಹಾಮಾರಿ ತಡೆಗೆ ಪ್ರಧಾನ ಅಸ್ತ ಎಂದು ಜಿ.ಪಂ. ಸದಸ್ಯ ದೇವರಾಜ್ ಕೆ.ಎಸ್. ಅಭಿಪ್ರಾಯಪಟ್ಟಿದ್ದಾರೆ.
ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ದ.ಕ. ಜಿಲ್ಲಾ ಪಂಚಾಯಿತಿ, ಗ್ರಾ.ಪಂ. ಸುಬ್ರಹ್ಮಣ್ಯ ಹಾಗೂ ಜೇಸಿಐ ಸುಬ್ರಹ್ಮಣ್ಯ ಕುಕ್ಕೆಶ್ರೀ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ ಸುಬ್ರಹ್ಮಣ್ಯ ಆಶ್ರಯದಲ್ಲಿ ಸುಬ್ರಹ್ಮಣ್ಯ ಗ್ರಾ.ಪಂ. ಸಭಾಂಗಣದಲ್ಲಿ ಇತ್ತೀಚೆಗೆ ನಡೆದ ಸಮುದಾಯ ಆರೋಗ್ಯ ದಿನಾಚರಣೆ ಹಾಗೂ ಸಾಂಕ್ರಮಿಕ ರೋಗಗಳು ಹರಡುವ ಕುರಿತು ಜಾಗೃತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಜನಜಾಗೃತಿಯಾಗಲಿ: ಸುಬ್ರಹ್ಮಣ್ಯದ ಪ್ರಾಥಮಿಕ ಆರೋಗ್ಯ ಕೇಂದ್ರ ಈಗಾಗಲೇ ಈ ಬಗ್ಗೆ ಜನತಾ ಜಾಗೃತಿ ಕಾರ್ಯ ನಡೆಸುತ್ತಿದೆ. ಅದರೊಂದಿಗೆ ಈ ಕೇಂದ್ರ ಡೆಂಘೀ ಸಂಪೂರ್ಣವಾಗಿ ಶಮನವಾಗುವ ತನಕ 24 ಗಂಟೆ ತೆರೆದು ಜನತಾ ಸೇವೆ ನಡೆಸಬೇಕು. ಅಲ್ಲದೆ ಇಲ್ಲಿ ಕೊರತೆ ಇರುವ ಲ್ಯಾಬ್ ಟೆಕ್ನೀಷಿಯನ್ ಸಿಬ್ಬಂದಿಯನ್ನು ಇತರ ಕಡೆಗಳಿಂದ ಇಲ್ಲಿಗೆ ನಿಯೋಜಿಸಲು ಕ್ರಮ ಕೈಗೊಳ್ಳಲಾಗುವುದು ಎಂದರು.
ಗ್ರಾ.ಪಂ. ವ್ಯಾಪ್ತಿಯಲ್ಲಿ ಆರೋಗ್ಯ ಸುಧಾರಣೆ ಮತ್ತು ಸುರಕ್ಷತೆಗಾಗಿ ಕಟ್ಟು ನಿಟ್ಟಿನ ಕ್ರಮ ಕೈಗೊಳ್ಳಬೇಕೆಂದು ಗ್ರಾ.ಪಂ.ಗೆ ಸೂಚಿಸಿದರು.
ಆರೋಗ್ಯ ಅಭಿಯಾನ: ಡಾ. ಯದುರಾಜ್ ಮಳೆಗಾಲದ ಪ್ರಥಮ ಹಂತದಲ್ಲಿ ಬಾಧಿಸುವ ಸಾಂಕ್ರಮಿಕ ರೋಗಗಳಾದ ಡೆಂಘೀ, ಮಲೇರಿಯಾ, ಚಿಕುನ್‌ಗುನ್ಯ ಮೊದಲಾದುಗಳ ಬಗ್ಗೆ ಜಾಗೃತಿ ಮೂಡಿಸುವ ದೃಷ್ಟಿಯಿಂದ ಗ್ರಾಮಗಳ ಪ್ರತಿ ಮನೆಮನೆಗಳಿಗೂ ತೆರಳಿ ಜಾಗೃತಿ ಆರೋಗ್ಯ ಅಭಿಯಾನವನ್ನು ಜೂನ್ 10ರಿಂದ 16ರ ತನಕ ನಡೆಸಲಾಗುವುದು. ಅಲ್ಲದೆ ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ಅಡಿಯಲ್ಲಿ ಬರುವ ಏಳು ಉಪಕೇಂದ್ರಗಳ ಪ್ರದೇಶಗಳಲ್ಲಿ ಆಶಾ ಕಾರ್ಯಕರ್ತೆಯರು, ಎ.ಎನ್.ಎಂ, ಆರೋಗ್ಯ ಸಹಾಯಕರು ಮನೆ ಮನೆಗೆ ಭೇಟಿ ನೀಡಿ ಈ ಬಗ್ಗೆ ಜಾಗೃತಿ ನೀಡಲಿದ್ದಾರೆ ಎಂದು ಸುಬ್ರಹ್ಮಣ್ಯ ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ. ಯದುರಾಜ್ ಹೇಳಿದರು.
ಪ್ರತಿ ಶಾಲೆ ಕಾಲೇಜುಗಳಲ್ಲಿ ಜಾಗೃತಿ ಅಭಿಯಾನವನ್ನು ನಡೆಸಲಾಗುವುದು ಎಂದು ಗ್ರಾ.ಪಂ ಉಪಾಧ್ಯಕ್ಷ ಶಿವರಾಮ ರೈ ಹೇಳಿದರು.
ಸುಬ್ರಹ್ಮಣ್ಯ ಗ್ರಾ.ಪಂ. ಅಧ್ಯಕ್ಷೆ ಪುಷ್ಪಾವತಿ ಡಿ. ಅಧ್ಯಕ್ಷತೆ ವಹಿಸಿದ್ದರು. ತಾ.ಪಂ. ಸದಸ್ಯೆ ವಿಮಲಾ ರಂಗಯ್ಯ, ಹರಿಹರ ಪಲ್ಲತ್ತಡ್ಕ ಗ್ರಾ.ಪಂ. ಅಧ್ಯಕ್ಷೆ ಕುಸುಮಾ, ಸುಬ್ರಹ್ಮಣ್ಯ ಜೇಸಿಸ್ ಅಧ್ಯಕ್ಷ ಚಂದ್ರಶೇಖರ ಚೆನ್ನಕಜೆ, ಸುಬ್ರಹ್ಮಣ್ಯ ಗ್ರಾ.ಪಂ. ಪ್ರಭಾರ ಅಭಿವೃದ್ಧಿ ಅಧಿಕಾರಿ ಮೋನಪ್ಪ. ಡಿ, ಸದಸ್ಯರಾದ ಕೃಷ್ಣಮೂರ್ತಿ ಭಟ್, ಮನೋಹರ ನಾಳ, ಸುಶೀಲ, ನಾರಾಯಣ ಅಗ್ರಹಾರ ಇದ್ದರು.
ಭಾರತಿ ಬಿ.ವಿ ಪ್ರಾರ್ಥಿಸಿದರು. ಮೋನಪ್ಪ ಡಿ. ಸ್ವಾಗತಿಸಿದರು. ಸುಳ್ಯ ತಾಲೂಕು ಆರೋಗ್ಯ ಮಿತ್ರದ ಪ್ರತಿನಿಧಿ ಮುರಳಿ ಪ್ರಸ್ತಾಪಿಸಿದರು. ಡಾ. ಯದುರಾಜ್ ವಂದಿಸಿದರು. ಹೇಮಂತ್ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

