ದಕ್ಷಿಣ ಕನ್ನಡ

ನಿಲ್ಲಿಸಿದ್ದ ಲಾರಿಗೆ ನುಗ್ಗಿ ದರೋಡೆ

Published On :

ಉಪ್ಪಿನಂಗಡಿ: ರಾಷ್ಟ್ರೀಯ ಹೆದ್ದಾರಿ 75ರ ನೆಲ್ಯಾಡಿ ಸಮೀಪದ ಮಣ್ಣಗುಂಡಿ ಬಳಿ ಸೋಮವಾರ ರಾತ್ರಿ ನಿಲ್ಲಿಸಲಾಗಿದ್ದ ಲಾರಿಯಲ್ಲಿ ಮಲಗಿದ್ದ ಚಾಲಕ, ಕ್ಲೀನರ್‌ಗೆ ಮಾರಕಾಸ್ತ್ರಗಳಿಂದ ಹಲ್ಲೆಗೈದು ರು. 18 ಸಾವಿರ ನಗದು, ಮೊಬೈಲ್, ವಾಚ್ ದರೋಡೆ ಮಾಡಿದ ಪ್ರಕರಣ ನಡೆದಿದೆ.
ಬಳ್ಳಾರಿಯಿಂದ ಕುರಿ ಗೊಬ್ಬರ ಹೊತ್ತೊಯ್ಯುತ್ತಿದ್ದ ಲಾರಿಯನ್ನು ಗೊಬ್ಬರದ ಗ್ರಾಹಕರ ಮನೆ ಬಳಿ ರಾಷ್ಟ್ರೀಯ ಹೆದ್ದಾರಿಯ ಬದಿ ನಿಲ್ಲಿಸಲಾಗಿತ್ತು. ತಡ ರಾತ್ರಿಯಾಗಿದ್ದರಿಂದ ಲಾರಿಯಲ್ಲಿದ್ದ ಚಾಲಕ ಮತ್ತು ಮಾಲಕ ಮಂಜೇಗೌಡ, ಕ್ಲೀನರ್ ಮಂಜುನಾಥ, ಮತ್ತೋರ್ವ ಮಂಜು ಎಂಬವರು ಲಾರಿಯಲ್ಲೇ  ನಿದ್ರಿಸುತ್ತಿದ್ದರು.ನಸುಕಿನ ವೇಳೆ 3 ಗಂಟೆ ಸುಮಾರಿಗೆ ಕಾರೊಂದರಲ್ಲಿ ಬಂದ ದರೋಡೆಕೋರರು, ಪಿಸ್ತೂಲ್ ಮತ್ತು ಚೂರಿ ತೋರಿಸಿ ಬೆದರಿಸಿ, ಹಲ್ಲೆ ಮಾಡಿ ಮಂಜೇಗೌಡರ ಬಳಿ ಇದ್ದ ರು. 18 ಸಾವಿರ ದರೋಡೆ ಮಾಡಿ, ಅವರ ಬಳಿ ಇದ್ದ ಮೂರು ಮೊಬೈಲ್ ಫೋನ್, ವಾಚ್‌ಗಳನ್ನು ದೋಚಿ  ಪರಾರಿಯಾಗಿದ್ದಾರೆ. ಮೂವರಿದ್ದ ತಂಡ ಬಳಿಕ, ಕಾರಿನಲ್ಲಿ ಶಿರಾಡಿ ಕಡೆಗೆ ಪರಾರಿಯಾಯಿತು ಎನ್ನಲಾಗಿದೆ. ಈ ಮಧ್ಯೆ ಗುಂಡ್ಯ ಪರಿಸರದ ಹೆದ್ದಾರಿಯಲ್ಲಿ ಹಲವು ವಾಹನಗಳನ್ನು ತಡೆದು ನಿಲ್ಲಿಸಲು ಇದೇ ತಂಡದಿಂದ ಯತ್ನ ನಡೆದಿತ್ತು ಎನ್ನಲಾಗಿದೆ.

ಕೊಕ್ಕಡದಲ್ಲಿ ಸರಣಿ ಕಳವು
ಉಪ್ಪಿನಂಗಡಿ: ಕೊಕ್ಕಡದ ವೈನ್‌ಶಾಪ್, ಹೊಟೇಲ್, ಇಲೆಕ್ಟ್ರಿಕಲ್ ಅಂಗಡಿ, ಅಣ್ಣಪ್ಪ ಗುಡಿಗೆ ನುಗ್ಗಲು ಯತ್ನಿಸಿದ ಕಳ್ಳರು ಚಿಲ್ಲರೆ ಹಣವನ್ನು ಮಾತ್ರ ಲಪಟಾಯಿಸಲು ಶಕ್ತರಾಗಿದ್ದಾರೆ.
ಭಾನುವಾರ ರಾತ್ರಿ ಕೊಕ್ಕಡ ಜೋಡುಮಾರ್ಗದ ವೈನ್‌ಶಾಪ್ ಬೀಗ ಮುರಿಯಲು ಯತ್ನಿಸಿ ವಿಫರಾಗಿದ್ದಾರೆ. ಕೊಕ್ಕಡದ ದೇವಿಕೃಪಾ ಹೊಟೇಲ್‌ನ ಬೀಗ ಮುರಿದು ಒಳನುಗ್ಗಿದ ಕಳ್ಳರು ಏನನ್ನು ಕೊಂಡೊಯ್ದಿದ್ದಾರೆ ಎಂಬ ಬಗ್ಗೆ ತಿಳಿದು ಬಂದಿಲ್ಲ. ಕೊಕ್ಕಡ ಪೇಟೆಯ ಮಧ್ಯಬಾಗದಲಿರುವ ಶ್ರೀದೇವಿ ಎಲೆಕ್ಟ್ರಿಕಲ್‌ನ ಬೀಗ ಮುರಿದು ಒಳನುಗ್ಗಿದ ಕಳ್ಳರು ಅಲ್ಲಿದ್ದ ಚಿಲ್ಲರೆ ಹಣ ದೋಚಿದ್ದಾರೆ.
ಅಣ್ಣಪ್ಪ ಗುಡಿಗೆ ಕನ್ನ: ಕೊಕ್ಕಡ ಶ್ರೀವೈದ್ಯನಾಥೇಶ್ವರ ವಿಷ್ಣುಮೂರ್ತಿ ದೇವಾಲಯದ ಎದುರು ನೂತನವಾಗಿ ನಿರ್ಮಾಣಗೊಂಡ ಅಣ್ಣಪ್ಪ ಗುಡಿಗೆ ಪ್ರವೇಶಿಸಿದ ಕಳ್ಳರು, ಕಾಣಿಕೆ ಡಬ್ಬಿ ಬೀಗ ಮುರಿದಿದ್ದು, ವಿಸ್ಮಯವೆಂಬಂತೆ ಅದರಲ್ಲಿದ್ದ ಹಣವನ್ನು ಅಲ್ಲಿಯೇ ಬಿಟ್ಟು ಹೋಗಿದ್ದಾರೆ. ಈ ಕೃತ್ಯ ಎಸಗುವಾಗ ಯಾರಾದರೂ ಸ್ಥಳಕ್ಕೆ ಆಗಮಿಸಿದ್ದರಿಂದ ಹಣವನ್ನು ಅಲ್ಲೇ ಬಿಟ್ಟು ಪರಾರಿಯಾಗಿರುವ ಸಾಧ್ಯತೆ ವ್ಯಕ್ತವಾಗಿದೆ. ಘಟನಾ ಸ್ಥಳಕ್ಕೆ ಪೊಲೀಸ್ ಡಿವೈಎಸ್ಪಿ, ವೃತ್ತ ನಿರೀಕ್ಷಕ, ಉಪ ನಿರೀಕ್ಷಕರಾದಿಯಾಗಿ ಪೊಲೀಸ್ ಅಧಿಕಾರಿಗಳು ಭೇಟಿ ನೀಡಿದ್ದು, ತನಿಖಾ ಕಾರ್ಯಕ್ಕೆ ಮುಂದಾಗಿದ್ದಾರೆ. ಉಪ್ಪಿನಂಗಡಿ ಠಾಣೆ ವ್ಯಾಪ್ತಿಯಲ್ಲಿ ಹೆಚ್ಚುತ್ತಿರುವ ಕಳ್ಳತನ, ಅಪಹರಣದಂತಹ ಕೃತ್ಯಗಳ ಬಗ್ಗೆ ತೀವ್ರ ಆಕ್ರೋಶ ವ್ಯಕ್ತವಾಗುತ್ತಿದೆ.

ಜಗಳ ಬಿಡಿಸ ಹೋದ ವ್ಯಕ್ತಿಗೆ ತಂಡ ಹಲ್ಲೆ
ಬಂಟ್ವಾಳ: ಜಗಳ ಬಿಡಿಸಲು ಹೋದ ವ್ಯಕ್ತಿ ಮೇಲೆ ತಂಡ ಹಲ್ಲೆ ನಡೆಸಿದ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಸೋಮವಾರ ದೂರುದಾಖಲಾಗಿದೆ.
ಕಳ್ಳಿಗೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಹಲ್ಲೆಗೊಳಗಾದ ಸುಂದರ ಪೂಜಾರಿ ಸ್ಥಳೀಯರಾದ ದಯಾನಂದ, ಕಿಶೋರ್, ವಿಕೇಶ್ ಹಾಗೂ ಮತ್ತಿತರರನ್ನು ಆರೋಪಿಗಳೆಂದು ದೂರಿನಲ್ಲಿ ಹೆಸರಿಸಿದ್ದಾರೆ.
ಭಾನುವಾರ ಸಂಜೆ ಲಕ್ಷ್ಮೀ ಹಾಗೂ ವಿಷ್ಣು ಸಂಘದ ವಾರ್ಷಿಕ ಸಭೆ ನಡೆಯುತ್ತಿದ್ದ ವೇಳೆ ಹಣಕಾಸಿನ ವಿಚಾರದಲ್ಲಿ ಜಗಳ ನಡೆಯುತ್ತಿತ್ತು. ಈ ಸಂದರ್ಭ ತಾನು ಜಗಳ ಬಿಡಿಸಲು ಹೋಗಿದ್ದು, ಆರೋಪಿಗಳು ತನ್ನ ಮೇಲೆ ಕಬ್ಬಿಣದ ರಾಡ್ ಹಾಗೂ ಮರದ ರೀಪಿನಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿದ್ದಾರೆ ಎಂದು ಸುಂದರ ಪೂಜಾರಿ ದೂರಿನಲ್ಲಿ ತಿಳಿಸಿದ್ದಾರೆ. ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಬಾವಿಗೆ ಬಿದ್ದು ಮಗು ಸಾವು
ಬ್ರಹ್ಮಾವರ: ಆವರಣ ಇಲ್ಲದ ಬಾವಿಗೆ ಮಗು ಬಿದ್ದು ಮೃತಪಟ್ಟ ಘಟನೆ ಇಲ್ಲಿನ ವಾರಂಬಳ್ಳಿ ಗ್ರಾಮದ ಬ್ಯಾಂಕರ್ಸ್ ಕಾಲೊನಿಯಲ್ಲಿ ಸೋಮವಾರ ನಡೆದಿದೆ. ಪ್ರಥಮ್ (1) ಮೃತ ಮಗು. ಮನೆಯ ಅಂಗಳದಲ್ಲಿ ಆಟವಾಡುತ್ತಿರುವಾಗ ಆಕಸ್ಮಿಕವಾಗಿ ಆವರಣ ಇಲ್ಲದ ಬಾವಿಗೆ ಕಾಲುಜಾರಿ ಬಿದ್ದಿದ್ದ. ತಕ್ಷಣ ಮಗುವನ್ನು ಮೇಲೆತ್ತಿ ಮಹೇಶ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾನೆ. ಸಂಬಂಧಿ ಕರುಣಾಕರ ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ
ಉಡುಪಿ: ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಅಂಬಲ್ಪಾಡಿ ಗ್ರಾಮದಲ್ಲಿ ಭಾನುವಾರ ನಡೆದಿದೆ. ಮೃತರು ಉದಯ. ಇವರು ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸದಾಶಿವ ಅಮೀನ್ ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾವಿಗೆ ಹಾರಿ ಆತ್ಮಹತ್ಯೆ
ಕಾರ್ಕಳ: ಇಲ್ಲಿನ ಕೌಡೂರು ಗ್ರಾಮದ ನಾಯರ್‌ಬೆಟ್ಟು ನಿವಾಸಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ನಡೆದಿದೆ. ಮಾಲಿಂಗ (29) ಮೃತರು. ಇವರು ವಿಪರೀತ ಅಮಲು ಪದಾರ್ಥ ಸೇವಿಸುವ ಚಟ ಹೊಂದಿದ್ದರು. ಜೀವನದಲ್ಲಿ ಜಿಗುಪ್ಸೆಗೊಂಡು ತನ್ನ ಮನೆ ಬಾವಿಯ ರಾಟೆಯಲ್ಲಿದ್ದ ಹಗ್ಗವನ್ನು ತನ್ನ ಕುತ್ತಿಗೆಗೆ ಕಟ್ಟಿಕೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬಸ್ ಡಿಕ್ಕಿ: ಬೈಕ್ ಸವಾರ ಗಾಯ
ಮೂಲ್ಕಿ: ಮೂಲ್ಕಿ- ಕಿನ್ನಿಗೋಳಿ ರಾಜ್ಯ ಹೆದ್ದಾರಿಯಲ್ಲಿ ದ್ವಿಚಕ್ರ ವಾಹನಕ್ಕೆ ಬಸ್ ಡಿಕ್ಕಿಯಾಗಿ ಸವಾರ ತೀವ್ರ ಗಾಯಗೊಂಡ ಘಟನೆ ಸೋಮವಾರ ಸಂಭವಿಸಿದೆ. ಕಿನ್ನಿಗೋಳಿ ಕಡೆಗೆ ಹೋಗುತ್ತಿದ್ದ ಬಸ್ ಓವರ್‌ಟೇಕ್ ಮಾಡುವ ಭರದಲ್ಲಿ ಎಂ-80ಗೆ ಡಿಕ್ಕಿ ಹೊಡೆದು, ಸವಾರ ಸಂಷುದ್ದೀನ್ ತೀವ್ರ ಗಾಯಗೊಂಡು ಮುಕ್ಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಸ್ ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.  ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮರವಂತೆ ಶ್ರೀವರಹಾ ದೇವಳದಲ್ಲಿ ಕಳವು
ಗಂಗೊಳ್ಳಿ: ಇಲ್ಲಿನ ಮರವಂತೆ ಗ್ರಾಮದ ಮಹಾರಾಜಸ್ವಾಮಿ ಶ್ರೀವರಹಾ ದೇವಳದಲ್ಲಿ ಭಾನುವಾರ ರಾತ್ರಿ ಲಕ್ಷಾಂತರ ರು. ಮೌಲ್ಯದ ಸೊತ್ತುಗಳನ್ನು ಕಳವು ಮಾಡಲಾಗಿದೆ. ಕಳ್ಳರು ಗರ್ಭಗುಡಿಯ ಮೂರು ಬಾಗಿಲುಗಳ ಚೌಕಟ್ಟಿಗೆ ಅಳವಡಿಸಿದ ಸುಮಾರು ರು. 2 ಲಕ್ಷ ಮೌಲ್ಯದ ಅಂದಾಜು 7 ಕೆ.ಜಿ. ಬೆಳ್ಳಿಯ ತಗಡುಗಳನ್ನು ಹಾಗೂ ದೇವಸ್ಥಾನದ ಕಾರ್ಯಾಲಯದ ಬಾಗಿಲು ಮುರಿದು ಕಪಾಟಿನಲ್ಲಿದ್ದ ರು. 5 ಸಾವಿರ ನಗದು ಕಳ್ಳತನ ಮಾಡಿದ್ದಾರೆ. ಅಲ್ಲದೆ ದೇವಳದ ಸೌಪರ್ಣಿಕಾ ನದಿಯ ದಡದ ಮೇಲಿರುವ ಬಲಿಕಲ್ಲು ಎದುರಿರುವ ಬಾಗಿಲು ಕೂಡ ಕಿತ್ತ ಸ್ಥಿತಿಯಲ್ಲಿದೆ. ಈ ಬಗ್ಗೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ರಾಮಚಂದ್ರ ಹೆಬ್ಬಾರ್ ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂಜತ್ತೂರು ಮಂಜೇಶ್ವರ: ಕೆರೆಗೆ ಹಾರಿ ಆತ್ಮಹತ್ಯೆ
ಮಂಗಳೂರು: ಕುಂಜತ್ತೂರು ಮಂಜೇಶ್ವರ ನಿವಾಸಿ ಯಶೋಧರ (39) ಮಂಜನಾಡಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖಿನ್ನತೆಯಿಂದ ಬಳಲುತ್ತಿದ್ದ ಅವರು ಶನಿವಾರ ಮನೆಯಿಂದ ಹೊರಹೋಗಿದ್ದವರು ನಾಪತ್ತೆಯಾಗಿದ್ದರು. ಈ ಬಗ್ಗೆ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸೋಮವಾರ ಬೆಳಗ್ಗೆಮಂಜನಾಡಿ ಕೆರೆಯಲ್ಲಿ ಮೃತದೇಹ ಕಂಡು ಬಂದಿತ್ತು.  ಭಾನುವಾರ ಸಂಜೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ಮೃತರಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ.

ಅಪಘಾತ: ಬೈಕ್ ಸವಾರ ಗಂಭೀರ
ವಿಟ್ಲ: ಬೈಕ್ ಹಾಗೂ ಆಪೆ ಆಟೋ ನಡುವೆ ಡಿಕ್ಕಿ ಸಂಭವಿಸಿ ಬೈಕ್ ಸವಾರ ಗಂಭೀರವಾಗಿ ಗಾಯಗೊಂಡ ಘಟನೆ ವಿಟ್ಲ ಸಮೀಪದ ನೇತ್ರಕೆರೆ ಎಂಬಲ್ಲಿ ಸೋಮವಾರ ಬೆಳಗ್ಗೆ ಸಂಭವಿಸಿದೆ.
ವಿಟ್ಲ ಕಡೆಯಿಂದ ಸಾಲೆತ್ತೂರು ಕಡೆ ತೆರಳುತ್ತಿದ್ದ ಬೈಕ್ ಹಾಗೂ ಸಾಲೆತ್ತೂರು ಕಡೆಯಿಂದ ವಿಟ್ಲ ಕಡೆಗೆ ತೆರಳುತ್ತಿದ್ದ ಆಪೆ ವಾಹನಗಳು ನೇತ್ರಕೆರೆ ಅಪಾಯಕಾರಿ ತಿರುವಿನಲ್ಲಿ ಪರಸ್ಪರ ಡಿಕ್ಕಿಯಾಗಿದೆ. ಸವಾರನ ತಲೆಗೆ ಗಾಯವಾಗಿದ್ದು, ವಿಟ್ಲ ಸಮುದಾಯ ಆಸ್ಪತ್ರೆಗೆ ದಾಖಲು ಮಾಡಲಾಗಿದೆ. ಎರಡು ವಾಹನಗಳು ತಾವು ಚಲಿಸಿದ ರಸ್ತೆಯ ವಿರುದ್ಧ ದಿಕ್ಕಿನಲ್ಲಿ ನಿಂತಿತ್ತು. ಘಟನೆಯಲ್ಲಿ ಬೈಕ್‌ನ ಮುಂಭಾಗಕ್ಕೆ ಹಾಗೂ ಆಪೆಯ ಚಕ್ರಗಳು ಹಾನಿಗೊಳಗಾಗಿವೆ. ಸ್ಥಳಕ್ಕಾಗಮಿಸಿದ ವಿಟ್ಲ ಠಾಣಾಧಿಕಾರಿ ಮಾಧವ ಕೂಡ್ಲು ಹಾಗೂ ಸಿಬ್ಬಂದಿ ವಾಹನ ತೆರವುಗೊಳಿಸಿದರು. ಎರಡೂ ವಾಹನ ಚಾಲಕರು ಅತಿ ವೇಗವಾಗಿ ಚಲಿಸಿದ್ದೇ ಘಟನೆಗೆ ಕಾರಣ ಎನ್ನಲಾಗಿದೆ.

ಅಪಘಾತ: ಬೈಕ್ ಸವಾರಗೆ ಗಾಯ
ವಿಟ್ಲ:  ಇಳಿಜಾರಿನಲ್ಲಿ ನಿಯಂತ್ರಣ ಕಳೆದುಕೊಂಡ ಬೈಕ್ ಓಮ್ನಿಗೆ ಡಿಕ್ಕಿ ಹೊಡೆದಿದ್ದು ಬೈಕ್ ಸವಾರ ಗಾಯಗೊಂಡ ಘಟನೆ ವಿಟ್ಲದ ಪಳಿಕೆ ರಸ್ತೆಯಲ್ಲಿ ಸೋಮವಾರ ನಡೆದಿದೆ. ವಿಟ್ಲದ ದೇವಸ್ಥಾನ ರಸ್ತೆಯಲ್ಲಿ ಗೋಬಿ ವ್ಯಾಪಾರ ಮಾಡುತ್ತಿದ್ದ ಶಿವ ಎಂಬವರು ಗಾಯಾಳು. ಅವರು ಸೋಮವಾರ ಸಂಜೆ ತನ್ನ ಮನೆಯಿಂದ ವಿಟ್ಲ ಪೇಟೆ ಕಡೆ ಬೈಕ್‌ನಲ್ಲಿ ತೆರಳುತ್ತಿದ್ದ ವೇಳೆ ಅಪಾಯಕಾರಿ ಇಳಿಜಾರಿನಲ್ಲಿ ಬ್ರೇಕ್ ಕಳೆದುಕೊಂಡಿದ್ದು, ಬಳಿಕ ಅದು ಎದುರಿನಿಂದ ಬರುತ್ತಿದ್ದ ಓಮ್ನಿಗೆ ಡಿಕ್ಕಿ ಹೊಡೆದಿದೆ. ಅಪಘಾತದ ತೀವ್ರತೆಗೆ ಬೈಕ್ ನಜ್ಜುಗುಜ್ಜಾಗಿದ್ದು, ಸಹಸವಾರ ಪಾರಾಗಿದ್ದಾನೆ. ಗಾಯಾಳುವನ್ನು ಆಸ್ಪತ್ರೆಗೆ ದಾಖಲು ಮಾಡಲಾಗಿದೆ.

ಜಗಳ ಬಿಡಿಸ ಹೋದ ವ್ಯಕ್ತಿಗೆ ತಂಡ ಹಲ್ಲೆ
ಬಂಟ್ವಾಳ: ಜಗಳ ಬಿಡಿಸಲು ಹೋದ ವ್ಯಕ್ತಿ ಮೇಲೆ ತಂಡ ಹಲ್ಲೆ ನಡೆಸಿದ ಬಗ್ಗೆ ಬಂಟ್ವಾಳ ನಗರ ಠಾಣೆಯಲ್ಲಿ ಸೋಮವಾರ ದೂರುದಾಖಲಾಗಿದೆ.
ಕಳ್ಳಿಗೆ ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಹಲ್ಲೆಗೊಳಗಾದ ಸುಂದರ ಪೂಜಾರಿ ಸ್ಥಳೀಯರಾದ ದಯಾನಂದ, ಕಿಶೋರ್, ವಿಕೇಶ್ ಹಾಗೂ ಮತ್ತಿತರರನ್ನು ಆರೋಪಿಗಳೆಂದು ದೂರಿನಲ್ಲಿ ಹೆಸರಿಸಿದ್ದಾರೆ.
ಭಾನುವಾರ ಸಂಜೆ ಲಕ್ಷ್ಮೀ ಹಾಗೂ ವಿಷ್ಣು ಸಂಘದ ವಾರ್ಷಿಕ ಸಭೆ ನಡೆಯುತ್ತಿದ್ದ ವೇಳೆ ಹಣಕಾಸಿನ ವಿಚಾರದಲ್ಲಿ ಜಗಳ ನಡೆಯುತ್ತಿತ್ತು. ಈ ಸಂದರ್ಭ ತಾನು ಜಗಳ ಬಿಡಿಸಲು ಹೋಗಿದ್ದು, ಆರೋಪಿಗಳು ತನ್ನ ಮೇಲೆ ಕಬ್ಬಿಣದ ರಾಡ್ ಹಾಗೂ ಮರದ ರೀಪಿನಿಂದ ಹಲ್ಲೆ ನಡೆಸಿ ಕೊಲೆ ಬೆದರಿಕೆ ಒಡ್ಡಿದ್ದಾರೆ ಎಂದು ಸುಂದರ ಪೂಜಾರಿ ದೂರಿನಲ್ಲಿ ತಿಳಿಸಿದ್ದಾರೆ. ನಗರ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಬಾವಿಗೆ ಬಿದ್ದು ಮಗು ಸಾವು
ಬ್ರಹ್ಮಾವರ: ಆವರಣ ಇಲ್ಲದ ಬಾವಿಗೆ ಮಗು ಬಿದ್ದು ಮೃತಪಟ್ಟ ಘಟನೆ ಇಲ್ಲಿನ ವಾರಂಬಳ್ಳಿ ಗ್ರಾಮದ ಬ್ಯಾಂಕರ್ಸ್ ಕಾಲೊನಿಯಲ್ಲಿ ಸೋಮವಾರ ನಡೆದಿದೆ. ಪ್ರಥಮ್ (1) ಮೃತ ಮಗು. ಮನೆಯ ಅಂಗಳದಲ್ಲಿ ಆಟವಾಡುತ್ತಿರುವಾಗ ಆಕಸ್ಮಿಕವಾಗಿ ಆವರಣ ಇಲ್ಲದ ಬಾವಿಗೆ ಕಾಲುಜಾರಿ ಬಿದ್ದಿದ್ದ. ತಕ್ಷಣ ಮಗುವನ್ನು ಮೇಲೆತ್ತಿ ಮಹೇಶ್ ಆಸ್ಪತ್ರೆಗೆ ಚಿಕಿತ್ಸೆಗಾಗಿ ಕರೆದುಕೊಂಡು ಹೋಗುವಾಗ ದಾರಿ ಮಧ್ಯೆ ಮೃತಪಟ್ಟಿದ್ದಾನೆ. ಸಂಬಂಧಿ ಕರುಣಾಕರ ನೀಡಿದ ದೂರಿನಂತೆ ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ
ಉಡುಪಿ: ಜೀವನದಲ್ಲಿ ಜಿಗುಪ್ಸೆಗೊಂಡು ವ್ಯಕ್ತಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಇಲ್ಲಿನ ಅಂಬಲ್ಪಾಡಿ ಗ್ರಾಮದಲ್ಲಿ ಭಾನುವಾರ ನಡೆದಿದೆ. ಮೃತರು ಉದಯ. ಇವರು ಜೀವನದಲ್ಲಿ ಜಿಗುಪ್ಸೆಗೊಂಡು ಮನೆಯಲ್ಲಿ ಯಾರೂ ಇಲ್ಲದ ಸಮಯದಲ್ಲಿ ಕುತ್ತಿಗೆಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಸದಾಶಿವ ಅಮೀನ್ ನೀಡಿದ ದೂರಿನಂತೆ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಬಾವಿಗೆ ಹಾರಿ ಆತ್ಮಹತ್ಯೆ
ಕಾರ್ಕಳ: ಇಲ್ಲಿನ ಕೌಡೂರು ಗ್ರಾಮದ ನಾಯರ್‌ಬೆಟ್ಟು ನಿವಾಸಿ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಭಾನುವಾರ ನಡೆದಿದೆ. ಮಾಲಿಂಗ (29) ಮೃತರು. ಇವರು ವಿಪರೀತ ಅಮಲು ಪದಾರ್ಥ ಸೇವಿಸುವ ಚಟ ಹೊಂದಿದ್ದರು. ಜೀವನದಲ್ಲಿ ಜಿಗುಪ್ಸೆಗೊಂಡು ತನ್ನ ಮನೆ ಬಾವಿಯ ರಾಟೆಯಲ್ಲಿದ್ದ ಹಗ್ಗವನ್ನು ತನ್ನ ಕುತ್ತಿಗೆಗೆ ಕಟ್ಟಿಕೊಂಡು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂಬುದಾಗಿ ಕಾರ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಬಸ್ ಡಿಕ್ಕಿ: ಬೈಕ್ ಸವಾರ ಗಾಯ
ಮೂಲ್ಕಿ: ಮೂಲ್ಕಿ- ಕಿನ್ನಿಗೋಳಿ ರಾಜ್ಯ ಹೆದ್ದಾರಿಯಲ್ಲಿ ದ್ವಿಚೋಕ್ರ ವಾಹನಕ್ಕೆ ಬಸ್ ಡಿಕ್ಕಿಯಾಗಿ ಸವಾರ ತೀವ್ರ ಗಾಯಗೊಂಡ ಘಟನೆ ಸೋಮವಾರ ಸಂಭವಿಸಿದೆ. ಕಿನ್ನಿಗೋಳಿ ಕಡೆಗೆ ಹೋಗುತ್ತಿದ್ದ ಬಸ್ ಓವರ್‌ಟೇಕ್ ಮಾಡುವ ಭರದಲ್ಲಿ ಎಂ-80ಗೆ ಡಿಕ್ಕಿ ಹೊಡೆದು, ಸವಾರ ಸಂಷುದ್ದೀನ್ ತೀವ್ರ ಗಾಯಗೊಂಡು ಮುಕ್ಕ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬಸ್ ಚಾಲಕನ ಅಜಾಗರೂಕತೆಯೇ ಅಪಘಾತಕ್ಕೆ ಕಾರಣ ಎನ್ನಲಾಗಿದೆ.  ಮೂಲ್ಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಮರವಂತೆ ಶ್ರೀವರಹಾ ದೇವಳದಲ್ಲಿ ಕಳವು
ಗಂಗೊಳ್ಳಿ: ಇಲ್ಲಿನ ಮರವಂತೆ ಗ್ರಾಮದ ಮಹಾರಾಜಸ್ವಾಮಿ ಶ್ರೀವರಹಾ ದೇವಳದಲ್ಲಿ ಭಾನುವಾರ ರಾತ್ರಿ ಲಕ್ಷಾಂತರ ರು. ಮೌಲ್ಯದ ಸೊತ್ತುಗಳನ್ನು ಕಳವು ಮಾಡಲಾಗಿದೆ. ಕಳ್ಳರು ಗರ್ಭಗುಡಿಯ ಮೂರು ಬಾಗಿಲುಗಳ ಚೌಕಟ್ಟಿಗೆ ಅಳವಡಿಸಿದ ಸುಮಾರು ರು. 2 ಲಕ್ಷ ಮೌಲ್ಯದ ಅಂದಾಜು 7 ಕೆ.ಜಿ. ಬೆಳ್ಳಿಯ ತಗಡುಗಳನ್ನು ಹಾಗೂ ದೇವಸ್ಥಾನದ ಕಾರ್ಯಾಲಯದ ಬಾಗಿಲು ಮುರಿದು ಕಪಾಟಿನಲ್ಲಿದ್ದ ರು. 5 ಸಾವಿರ ನಗದು ಕಳ್ಳತನ ಮಾಡಿದ್ದಾರೆ. ಅಲ್ಲದೆ ದೇವಳದ ಸೌಪರ್ಣಿಕಾ ನದಿಯ ದಡದ ಮೇಲಿರುವ ಬಲಿಕಲ್ಲು ಎದುರಿರುವ ಬಾಗಿಲು ಕೂಡ ಕಿತ್ತ ಸ್ಥಿತಿಯಲ್ಲಿದೆ. ಈ ಬಗ್ಗೆ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೆ. ರಾಮಚಂದ್ರ ಹೆಬ್ಬಾರ್ ನೀಡಿದ ದೂರಿನಂತೆ ಗಂಗೊಳ್ಳಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕುಂಜತ್ತೂರು ಮಂಜೇಶ್ವರ: ಕೆರೆಗೆ ಹಾರಿ ಆತ್ಮಹತ್ಯೆ
ಮಂಗಳೂರು: ಕುಂಜತ್ತೂರು ಮಂಜೇಶ್ವರ ನಿವಾಸಿ ಯಶೋಧರ (39) ಮಂಜನಾಡಿ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಖಿನ್ನತೆಯಿಂದ ಬಳಲುತ್ತಿದ್ದ ಅವರು ಶನಿವಾರ ಮನೆಯಿಂದ ಹೊರಹೋಗಿದ್ದವರು ನಾಪತ್ತೆಯಾಗಿದ್ದರು. ಈ ಬಗ್ಗೆ ಮಂಜೇಶ್ವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಸೋಮವಾರ ಬೆಳಗ್ಗೆಮಂಜನಾಡಿ ಕೆರೆಯಲ್ಲಿ ಮೃತದೇಹ ಕಂಡು ಬಂದಿತ್ತು.  ಭಾನುವಾರ ಸಂಜೆ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ಮೃತರಿಗೆ ಮದುವೆಯಾಗಿ ಇಬ್ಬರು ಮಕ್ಕಳಿದ್ದಾರೆ.

ಪೊಲೀಸರ ಮೇಲೆ ಹಲ್ಲೆ: ಆರೋಪಿಗಳಿಗೆ ನಿರೀಕ್ಷಣಾ ಜಾಮೀನು
ಸುಳ್ಯ: ಗಸ್ತು ತಿರುಗುತ್ತಿದ್ದ ಪೊಲೀಸರಿಗೆ ದೊಡ್ಡತೋಟದಲ್ಲಿ ಹಲ್ಲೆ ಮಾಡಿದ ಆರೋಪಿಗಳಿಗೆ ಜಾಮೀನು ದೊರೆತಿದೆ.
ಮೇ 12ರಂದು ರಾತ್ರಿ ಸುಳ್ಯ ಪೋಲೀಸ್ ಠಾಣೆಯ ಸಿಬ್ಬಂದಿ ಬಾಲಕೃಷ್ಣ ಹಾಗೂ ಪಂಪಾಪತಿ ರೆಡ್ಡಿಗೆ ರಸ್ತೆಯಲ್ಲಿ ಅಮಲೇರಿಸಿಕೊಂಡು ಮಲಗಿದ್ದ ಸುರೇಶ್ ಕೇರ್ಕಜೆ, ಮೋಹನ್ ದಾಸ್, ಭುವನ್ ಹಾಗೂ ಹರೀಶ್ ಸೇವಾಜೆ ಹಲ್ಲೆ ನಡೆಸಿದ್ದಾರೆಂದು ಆರೋಪಿಸಲಾಗಿತ್ತು.
ಸುಳ್ಯ ಪೋಲೀಸ್ ಠಾಣೆಯಲ್ಲಿ ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ ನಡೆಸಿದ ಪ್ರಕರಣ ದಾಖಲಾಗಿತ್ತಲ್ಲದೆ, ಹರೀಶ್ ಸೇವಾಜೆಯನ್ನು ಅದೇ ದಿನ ರಾತ್ರಿ ಠಾಣಾಧಿಕಾರಿ ಬಂಧಿಸಿದ್ದರು. ಉಳಿದ ಆರೋಪಿಗಳು ತಲೆಮರೆಸಿಕೊಂಡಿದ್ದರು. ಇದೀಗ ಆರೋಪಿಗಳಿಗೆ ನಿರೀಕ್ಷಣಾ ಜಾಮೀನು ದೊರೆತಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.