ದೇಗುಲ ಸ್ವಾಧೀನ; ಗೊಂದಲದಲ್ಲಿ ಸರ್ಕಾರ
ವಿಧಾನ ಪರಿಷತ್ತು: ಗೋಕರ್ಣ ದೇವಸ್ಥಾನ ಹಾಗೂ ಉಡುಪಿ ಶ್ರೀಕೃಷ್ಣ ಮಠವನ್ನು ಸ್ವಾಧೀನಪಡಿಸಿಕೊಳ್ಳುವ ಕುರಿತಂತೆ ರಾಜ್ಯ ಸರ್ಕಾರ ಗೊಂದಲದ ಉತ್ತರ ನೀಡಿದೆ. ಸ್ವಾಧೀನಪಡಿಸಿಕೊಳ್ಳುವ ಯಾವುದೇ ಉದ್ದೇಶ ಸರ್ಕಾರಕ್ಕಿಲ್ಲ ಎಂದು ಸದನಕ್ಕೆ ಮುಜರಾಯಿ ಸಚಿವ ಪ್ರಕಾಶ ಹುಕ್ಕೇರಿ ತಿಳಿಸಿದ್ದಾರೆ. ಆದರೆ ಲಿಖಿತ ಉತ್ತರದಲ್ಲಿ ಸಾರ್ವಜನಿಕ ಹಿತದೃಷ್ಟಿಯಿಂದ ಪರಿಶೀಲಿಸಲಾಗುವುದು ಎಂಬ ಗೊಂದಲದ ಉತ್ತರ ನೀಡಿದ್ದಾರೆ. ಸರ್ಕಾರದ ಉತ್ತರ ಹೀಗಿದೆ, 'ಮೇಲ್ಕಂಡ ಎರಡೂ ದೇವಾಲಯಗಳು ಪುರಾತನ ಪ್ರಸಿದ್ಧ ದೇವಾಲಯಗಳಾಗಿವೆ. ಈ ದೇವಾಲಯಗಳು ರಾಜ್ಯ, ಹೊರ ರಾಜ್ಯ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅಸಂಖ್ಯಾತ ಭಕ್ತಾದಿಗಳನ್ನು ಹೊಂದಿವೆ. ಅಸಂಖ್ಯಾತ ಸಾರ್ವಜನಿಕ ಹಾಗೂ ಭಕ್ತಾದಿಗಳ ಹಿತದೃಷ್ಟಿಯಿಂದ ಅಧಿಸೂಚಿತ ಸಂಸ್ಥೆಗಳ ಪಟ್ಟಿಗೆ ಪುನಃ ಸೇರಿಸಿಕೊಳ್ಳುವುದೇ ಅಥವಾ ಬೇಡವೇ ಎಂಬ ಬಗ್ಗೆ ಪರಿಶೀಲಿಸಲಾಗುವುದು.'
ಪದವಿ ಪರೀಕ್ಷೆ ಫಲಿತಾಂಶ ಪ್ರಕಟ
ಮಂಗಳೂರು: ಮಂಗಳೂರು ವಿಶ್ವವಿದ್ಯಾಲಯ ಪದವಿ ಪರೀಕ್ಷೆ(2, 4, 6 ಸೆಮಿಸ್ಟರ್)ಮೇಯಲ್ಲಿ ಮುಕ್ತಾಯವಾಗಿದ್ದು, ಪರೀಕ್ಷೆ ಮುಗಿದ 18 ದಿನದಲ್ಲಿ (ಜೂ.8)ಫಲಿತಾಂಶ ಪ್ರಕಟಿಸಲಾಗಿದೆ. 15 ಪದವಿ ಪರೀಕ್ಷೆಗೆ ಒಟ್ಟು 87,148 ಮಂದಿ ವಿದ್ಯಾರ್ಥಿಗಳು ಹಾಜರಾಗಿದ್ದಾರೆ. 7 ಕೋರ್ಸ್‌ಗಳಲ್ಲಿ ಬಿ.ಕಾಂ 21,504(ಶೇ.62.88), ಬಿಬಿಎಂ 9,870(ಶೇ.49.55), ಬಿಎ 11,327(ಶೇ.61.29), ಬಿಎಸ್ಸಿ 4,366 (ಶೇ.80.97), ಬಿಸಿಎ 2,971(ಶೇ.63.17), ಬಿಎಸ್‌ಡಬ್ಲ್ಯೂ 890(ಶೇ.76) ಮತ್ತು ಬಿಎಚ್‌ಎಂ 712(ಶೇ.54.85)ಫಲಿತಾಂಶ ಲಭಿಸಿದೆ ಎಂದು ರಿಜಿಸ್ಟ್ರಾರ್ ಪ್ರೊ.ಬಿ.ನಾರಾಯಣ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಪದ್ಮನಾಭ ಭಟ್ ಆಯ್ಕೆ
ಮೂಲ್ಕಿ: ಮಂಗಳೂರು ವಿ.ವಿ. ರಾಜ್ಯಶಾಸ್ತ್ರ ಉಪನ್ಯಾಸಕರ ಸಂಘದ ಅಧ್ಯಕ್ಷರಾಗಿ ಶಿರ್ವ ಸಂತ ಮೇರಿ ಮಹಾವಿದ್ಯಾಲಯದ ಉಪನ್ಯಾಸಕ ಪದ್ಮನಾಭ ಭಟ್ ಆಯ್ಕೆಯಾಗಿದ್ದಾರೆ.
ಇತರ ಪದಾಧಿಕಾರಿಗಳು: ಉಪಾಧ್ಯಕ್ಷರಾಗಿ ಕರ್ಯಪ್ಪ ರೈ, ಕಾರ್ಯದರ್ಶಿ ಕೃಷ್ಣಾನಂದ ಶೆಟ್ಟಿ, ಸಹ ಕಾರ್ಯದರ್ಶಿ ಪ್ರಮೀಳಾ ರಾವ್, ಕೋಶಾಧಿಕಾರಿ ಥಾಮಸ್ ಜಿ.ಎಂ, ಕಾರ್ಯಕಾರಿ ಮಂಡಳಿ ಸದಸ್ಯರಾಗಿ ಗುರುದೇವ್, ಕ್ಲೇವಿಯರ್ ಡಿಸೋಜಾ, ಡಾ. ಲತಾ ಪಂಡಿತ್ ಆಯ್ಕೆಯಾಗಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

