ತಗ್ಗಿದ ಮಳೆ ಅಬ್ಬರ
ಮಂಗಳೂರು: ನಗರದಲ್ಲಿ ಕಳೆದ ನಾಲ್ಕು ದಿನದಿಂದ ಜೋರಾಗಿ ಸುರಿದ ಮಳೆ ಬುಧವಾರ ಕಡಿಮೆಯಾಗಿದೆ. ಮಧ್ಯಾಹ್ನದ ತನಕ ಜೋರಾಗಿ ಸುರಿದ ಮಳೆ ಸಂಜೆ ವೇಳೆಗೆ ಕಡಿಮೆಯಾಗಿತ್ತು. ಇಡೀ ದಿನ ಮೋಡ ಕವಿದ ವಾತಾವರಣ ವಿತ್ತು.
ಬುಧವಾರ ಮುಂಜಾನೆ ಸುರಿದ ಭಾರಿ ಗಾಳಿ ಮಳೆಗೆ ಉಳ್ಳಾಲದಲ್ಲಿ 8 ಮನೆ ಹಾನಿಗೊಂಡಿದೆ. ಮಂಜನಾಡಿಯಲ್ಲಿ 3 ಮನೆ, ಕುಂಜತ್ತಬೈಲ್ನಲ್ಲಿ 2 ಮನೆಗೆ ಹಾನಿಯಾಗಿದೆ. ಸೋಮೇಶ್ವರ, ಮರೋಳಿ, ಮುನ್ನೂರು, ಇಡ್ಯಾದಲ್ಲಿ ಮನೆಗಳು ಭಾಗಶಃ ಹಾನಿಗೊಂಡಿದೆ. ಮಣ್ಣಗುಡ್ಡೆ ಗಾಂಧಿಪಾರ್ಕಿನ ಬಳಿ ರಸ್ತೆಗೆ ಮುಂಜಾನೆ 6.30 ಮರ ಉರುಳಿ ಬಿದ್ದಿದ್ದು, ಅಗ್ನಿ ಶಾಮಕದಳ ಸ್ಥಳಕ್ಕೆ ತೆರಳಿ ತೆರವುಗೊಳಿಸಿದೆ.
ಮುಡಿಪು ಕಡೆ ತೆರಳುವ ತೊಕ್ಕೊಟ್ಟು ಸರ್ಕಲ್ನ ರಸ್ತೆ ಬದಿ ಹೊಂಡ ಆಗಿದ್ದು, ಬಸ್ಗೆ ಕಾಯುವ ಜನ ನಿಲ್ಲಲು ಸ್ಥಳವಿಲ್ಲದೆ ಪರದಾಡುತ್ತಿದ್ದಾರೆ. ಪಳ್ನೀರ್ ಮಿಲಾಗ್ರಿಸ್ ಕಾಂಕ್ರಿಟ್ ರಸ್ತೆ ಸೇರಿದಂತೆ ಅಲ್ಲಲ್ಲಿ ಮಳೆ ನೀರು ನಿಂತಿದ್ದು, ಸೊಳ್ಳೆ ಉತ್ಪತ್ತಿಗೆ ಕಾರಣವಾಗಿದೆ.
ಬುಧವಾರ ಬೆಳಗ್ಗಿನವರೆಗೆ ಜಿಲ್ಲೆಯ ಸುಳ್ಯದಲ್ಲಿ 88.4 ಮಿ.ಮೀ. ಅಧಿಕ ಮಳೆ ಸುರಿದಿದೆ.
ಮಳೆ ವಿವರ: ಮೂಡುಬಿದಿರೆ- 65.2 ಮಿ.ಮೀ., ಮಂಗಳೂರು- 59.1 ಮಿ.ಮಿ., ಬಂಟ್ವಾಳ- 54.5 ಮಿ.ಮೀ., ಬೆಳ್ತಂಗಡಿ- 49.4 ಮಿ.ಮೀ., ಪುತ್ತೂರು- 43.5 ಮಿ.ಮೀ., ಕಡಬ-36.2 ಮಿ.ಮೀ. ಮಳೆ ದಾಖಲಾಗಿದೆ.
ಸುಳ್ಯದ ಮಾಣಿ-ಮೈಸೂರು ರಸ್ತೆ ಕಾಮಗಾರಿ ಸಂದರ್ಭ ಪೈಚಾರಿನಲ್ಲಿ ಹೊಸ ಸೇತುವೆ ನಿರ್ಮಾಣಕ್ಕಾಗಿ ಹಳೆಯ ರಸ್ತೆಯ ಒಂದು ಪಾರ್ಶ್ವ ಕೆಡವಿ ಇನ್ನೊಂದು ಬದಿಯಲ್ಲಿ ನಿರ್ಮಿಸಲಾಗಿದ್ದ ತಾತ್ಕಾಲಿಕ ರಸ್ತೆ ಭಾರಿ ಮಳೆಗೆ ಕುಸಿದು ಸಂಚಾರದಲ್ಲಿ ವ್ಯತ್ಯಯ ಉಂಟಾದ ಹಿನ್ನಲೆಯಲ್ಲಿ ನಾಗರಿಕರು ಪ್ರತಿಭಟನೆ ನಡೆಸಿದ್ದಾರೆ. ಸುಳ್ಯ-ಪುತ್ತೂರು ಮುಖ್ಯ ರಸ್ತೆಯ ಪೈಚಾರಿನಲ್ಲಿ ಹೊಸ ಸೇತುವೆ ಕಾಮಗಾರಿ ಆರಂಭಿಸುವುದಕ್ಕಾಗಿ ಪಕ್ಕದಲ್ಲಿ ಕಿರಿದಾದ ಮೋರಿ ಪೈಪುಗಳನ್ನು ಅಳವಡಿಸಿ ರಸ್ತೆಯನ್ನು ನಿರ್ಮಿಸಲಾಗಿತ್ತು. ಮಂಗಳವಾರ ಸುರಿದ ಭಾರಿ ಮಳೆಗೆ ಹೊಳೆಯಲ್ಲಿ ಅಪಾರ ಪ್ರಮಾಣದ ನೀರು ಹರಿದು ಬಂದು ಮೋರಿಯಲ್ಲಿ ನೀರು ಹೋಗಲು ಸ್ಥಳಾವಕಾಶ ಸಾಕಾಗದೆ ರಸ್ತೆಯ ಎತ್ತರಕ್ಕೆ ತುಂಬಿತು. ಈ ನೀರು ರಸ್ತೆಯ ಒಂದು ಬದಿಯ ಮಣ್ಣನ್ನು ಕೊರೆದು ರಸ್ತೆಯ ಸಂಪರ್ಕ ಕಡಿತಗೊಂಡಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

