ದಕ್ಷಿಣ ಕನ್ನಡ

ಬೆಳ್ತಂಗಡಿ: ಪತ್ರಕರ್ತರ ಸಂಘದ ಪದಾಧಿಕಾರಿಗಳ ಆಯ್ಕೆ

Published On :

ಬೆಳ್ತಂಗಡಿ: ಬೆಳ್ತಂಗಡಿ ತಾಲೂಕು ಪತ್ರಕರ್ತರ ಸಂಘದ ಮಹಾಸಭೆಯಲ್ಲಿ ಇತ್ತೀಚೆಗೆ 2012- 13ನೇ ಸಾಲಿನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು.
ಅಧ್ಯಕ್ಷರಾಗಿ ವಾರ್ತಾಭಾರತಿ ಪತ್ರಿಕೆ ವರದಿಗಾರ ಶಿಬಿ ಧರ್ಮಸ್ಥಳ, ಉಪಾಧ್ಯಕ್ಷರಾಗಿ ಜಯಕಿರಣ, ವಿಜಯಕರ್ನಾಟಕ ಪತ್ರಿಕೆ ವರದಿಗಾರ ಭುವನೇಶ್ ಗೇರುಕಟ್ಟೆ, ಕಾರ್ಯದರ್ಶಿಯಾಗಿ ವಿಜಯವಾಣಿ, ನಮ್ಮ ಬಂಟ್ವಾಳ ಪತ್ರಿಕೆ ವರದಿಗಾರ ಮನೋಹರ್ ಬಳೆಂಜ, ಜೊತೆ ಕಾರ್ಯದರ್ಶಿಯಾಗಿ ಸುದ್ದಿಬಿಡುಗಡೆ ಪತ್ರಿಕೆ ವರದಿಗಾರ ಮಾತಾ ಎಂ.ಕೆ., ಕೋಶಾಧಿಕಾರಿಯಾಗಿ ಹೊಸದಿಗಂತ, ಕನ್ನಡಪ್ರಭ ಪತ್ರಿಕೆ ವರದಿಗಾರ ದೀಪಕ್ ಅಳದಂಗಡಿ ಆಯ್ಕೆಯಾಗಿದ್ದಾರೆ.
ಸದಸ್ಯರಾಗಿ ಉದಯವಾಣಿ ವರದಿಗಾರ ಲಕ್ಷ್ಮೀಮಚ್ಚಿನ, ವಿನಯ ಕುಮಾರ್ ಸೇಮಿತ, ಪ್ರಜಾವಾಣಿ ವರದಿಗಾರ ಆರ್.ಎನ್. ಪೂವಣಿ, ವಿಜಯ ಕರ್ನಾಟಕದ ವರದಿಗಾರ ರಾಜೇಶ್ ಪಂರ್ಬಡ, ಸಂಯುಕ್ತ ಕರ್ನಾಟಕ ವರದಿಗಾರರಾದ ಸಾಂತೂರು ಶ್ರೀನಿವಾಸ ತಂತ್ರಿ, ಪುಷ್ಪರಾಜ ಶೆಟ್ಟಿ, ಕರಾವಳಿ ಅಲೆ ವರದಿಗಾರ ಅಚುಶ್ರೀಬಾಂಗೇರು, ಸುದ್ದಿಬಿಡುಗಡೆ ವರದಿಗಾರರಾದ ಮಂಜುನಾಥ ರೈ, ಬಿ.ಎಸ್. ಕುಲಾಲ್, ಅಶ್ರಫ್ ಆಲಿ ಕುಂಞ, ದಕ್ಷಿಣ್ ಟೈಮ್ಸ್‌ನ ಹೃಷಿಕೇಶ್, ಜೈ ಕನ್ನಡಮ್ಮ ಸಂಪಾದಕ ದೇವಿಪ್ರಸಾದ್ ಮುಂದುವರಿಯಲಿದ್ದಾರೆ.
ಸಭೆಯಲ್ಲಿ ವಾರ್ಷಿಕ ವರದಿ ಮತ್ತು ಲೆಕ್ಕಪತ್ರ ಮಂಡಿಸಲಾಯಿತು.
ಜು. 6 ರಂದು ಪತ್ರಿಕಾ ದಿನಾಚರಣೆ ಆಚರಿಸಲು ನಿರ್ಧರಿಸಲಾಯತು. ಅಧ್ಯಯನ ಪ್ರವಾಸದ ಬಗ್ಗೆ ಚರ್ಚಿಸಲಾಯಿತು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.