ದಕ್ಷಿಣ ಕನ್ನಡ

ಬಿಸಿಲು ದರ್ಶನ: ತಗ್ಗಿದ ಮಳೆ ಬಿರುಸು

Published On :

ಮಂಗಳೂರು/ಉಡುಪಿ: ದ.ಕ.ಜಿಲ್ಲೆಯಲ್ಲಿ ಶುಕ್ರವಾರ ಮಳೆ ಕಂಡುಬಂದಿಲ್ಲ. ಮಂಗಳೂರಿನಲ್ಲೂ ಮಳೆ ಮಾಯವಾಗಿತ್ತು. ಆದರೆ ಗುರುವಾರ ರಾತ್ರಿವರೆಗೆ ಸುರಿದ ಮಳೆಗೆ ಅಲ್ಲಲ್ಲಿ ಹಾನಿಯಾದ ಬಗ್ಗೆ ವರದಿಯಾಗಿದೆ.
 ತುಂಬೆಯಲ್ಲಿ ವಿದ್ಯುತ್ ಲೈನ್ ತಂತಿ ತುಂಡಾದ ಪರಿಣಾಮ ಗುರುವಾರ ರಾತ್ರಿಯಿಂದ ಶುಕ್ರವಾರ ರಾತ್ರಿ 7.30ರ ವರೆಗೆ ಮಂಗಳೂರಿನ ಕಂಕನಾಡಿ, ಜೆಪ್ಪು, ಮಂಗಳಾದೇವಿ ಮತ್ತಿತರ ಪ್ರದೇಶಗಳಿಗೆ ನೀರು ಪೂರೈಕೆ ಸ್ಥಗಿತಗೊಂಡಿತ್ತು. ಶುಕ್ರವಾರ ಹಗಲು ಬಿಸಿಲು, ಮೋಡ ಹೊರತುಪಡಿಸಿದರೆ ತುಂತುರು ಹನಿ ಕೂಡ ಬಂದಿಲ್ಲ.
ಮಳೆ ಹಾನಿ: ಹರೇಕಳದ ಆರ್.ಜಿ.ನಗರದಲ್ಲಿ ಗುರುವಾರ ಗಾಳಿ ಮಳೆಗೆ ಮರವೊಂದು ವಿದ್ಯುತ್ ಕಂಬಕ್ಕೆ ಬಿದ್ದು ಕಂಬ ಧರೆಗುರುಳಿದೆ. ಇಲ್ಲಿನ ಮಸೀದಿ ಬಳಿಯ ಮದ್ರಸಕ್ಕೆ ಹಾಕಲಾದ ಸಿಮೆಂಟ್ ಶೀಟ್ ಗಾಳಿಗೆ ಹಾರಿಹೋಗಿ ಹಾನಿ ಸಂಭವಿಸಿದೆ. ಎಲಿಯಾರ್‌ಪದವಿನಲ್ಲಿ ಮನೆಗೆ ಬೃಹತ್ ಮರ ಬಿದ್ದು ಅಪಾರ ಹಾನಿ ಉಂಟಾಗಿದೆ. ಇಲ್ಲಿನ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯ ಮಾಡಿನ ಹೆಂಚು ಗಾಳಿಗೆ ಹಾರಿದ್ದು, ಶಾಲೆ ಬಿಟ್ಟ ಅರ್ಧ ಗಂಟೆ ನಂತರ ಈ ಘಟನೆ ಸಂಭವಿಸಿದ್ದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗಿಲ್ಲ. ಬೋಳಾರದಲ್ಲೂ ರಸ್ತೆಗೆ ಮರ ಬಿದ್ದು ಸಂಚಾರಕ್ಕೆ ಅಡ್ಡಿಯಾಗಿದೆ.
ಉಡುಪಿ ಜಿಲ್ಲೆಯಲಿ ಹಾನಿ:  ಉಡುಪಿಯಲ್ಲಿ ಶುಕ್ರವಾರ ಸುರಿದ ಗಾಳಿ ಮಳೆಯಿಂದಾಗಿ ವಿವಿಧೆಡೆ ಆಸ್ತಿ, ಸೊತ್ತು ಹಾನಿ ಸಂಭವಿಸಿದೆ.
82ನೇ ಕುದಿ ಗ್ರಾಮದಲ್ಲಿ ಸುಪ್ರಿಯಾ ಎಂಬವರು ಮನೆಗೆ ಸಾಗುವಾನಿ ಮರ ಬಿದ್ದು ಸುಮಾರು ರು. 10 ಸಾವಿರ ನಷ್ಟವಾಗಿದ್ದು, ಹೊನ್ನಾಳ ಗ್ರಾಮದ ದೇವಕಿ ಮರಕಾಲ್ತಿ ಮನೆಗೆ ಹಲಸಿನ ಮರ ಬಿದ್ದು ಸುಮಾರು ರು. 15 ಸಾವಿರ ಹಾನಿಯಾಗಿದೆ. 52ನೇ ಹೇರೂರು ಗ್ರಾಮದ ಗಿರಿಜ ಪೂಜಾರಿ ಮನೆಗೆ ಮರ ಬಿದ್ದು ರು. 25 ಸಾವಿರ ನಷ್ಟವಾಗಿದೆ.
ಉದಯ ಆಚಾರ್ ಮನೆಗೆ ಮರಬಿದ್ದು ರು. 5 ಸಾವಿರ ಹಾನಿಯಾಗಿದೆ. ತೆಂಕ ಗ್ರಾಮದಲ್ಲಿ ಅಮ್ಮಣ್ಣಿ ಮನೆಯ ಹತ್ತಿರ ಸುಮಾರು 200 ಮೀ. ವರೆಗೆ ಕಡಲ್ಕೊರೆತ ಉಂಟಾಗಿ 4 ತೆಂಗಿನ ಮರಗಳು ಕೊಚ್ಚಿಹೋಗಿವೆ.  ಕಾರ್ಕಳ ನಲ್ಲಾರು ಗ್ರಾಮದಲ್ಲಿ ದವ್ಯ  ಮನೆ ಮಳೆಗೆ ಭಾಗಶಃ ಹಾನಿಯಾಗಿ ರು. 10 ಸಾವಿರ ನಷ್ಟ ಸಂಭವಿಸಿದೆ. ಮಿಯಾರು ಗ್ರಾಮದ ರತ್ನಾ ಮನೆಯು ಮಳೆಗೆ ಭಾಗಶಃ ಹಾನಿಯಾಗಿ ರು. 10 ಸಾವಿರ ನಷ್ಟವಾಗಿದೆ. ಕುಂದಾಪುರ ಶಿರೂರು ಗ್ರಾಮದಲ್ಲಿ ಕಡಲ್ಕೊರೆತ ಉಂಟಾಗಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.