ಉಂಡೆಮನೆ, ಗೌರಿ ಶಂಕರ ಪ್ರಶಸ್ತಿ ಪ್ರದಾನ
ಬೆಳ್ತಂಗಡಿ: ಗುರುಪೀಠದ ಸೇವೆ, ಅದರ ಮೇಲಿನ ಪ್ರೀತಿ, ಭಕ್ತಿ ಇವು ಅಚಲವಾಗಿರಬೇಕು ಎಂದು ಶ್ರೀ ರಾಮಚಂದ್ರಾಪುರ ಮಠದ ಶ್ರೀ ರಾಘವೇಶ್ವರ ಭಾರತಿ ಸ್ವಾಮೀಜಿ ನುಡಿದರು.
ಶನಿವಾರ ಗುರುವಾಯನಕರೆ ಹವ್ಯಕ ಭವನದಲ್ಲಿ 17ನೇ ವರ್ಷದ ಉಂಡೆಮನೆ ಮತ್ತು ಗೌರಿ ಶಂಕರ ಪ್ರಶಸ್ತಿ ಪ್ರದಾನ ಮಾಡಿ ಅವರು ಆಶೀರ್ವದಿಸಿದರು.
ಪ್ರಶಸ್ತಿ ಪ್ರದಾನ: ಮೊದಲ ಬಾರಿಗೆ ಈ ಬಾರಿ ಉಂಡೆಮನೆ ಪ್ರಶಸ್ತಿಯನ್ನು ದಂಪತಿಗೆ ನೀಡಲಾಯಿತು. ಸಮಾಜದ ಎಲ್ಲ ಕ್ಷೇತ್ರದಲ್ಲಿ ಸೇವೆ ಸಲ್ಲಿಸಿರುವ ವಕೀಲ ಎಂ.ಬಿ. ಮುಳಿಯ ಮತ್ತು ವಿ.ಹಿ.ಪಂ. ಕಾರ್ಯಕರ್ತೆ ಸಾವಿತ್ರಿ ದಂಪತಿಗೆ ಉಂಡೆಮನೆ ಶಂಭು ಭಟ್ಟರ ನೆನಪಿನ ಉಂಡೆಮನೆ ಪ್ರಶಸ್ತಿಯನ್ನು, ರಂಗಕಲಾವಿದ, ಶಿಕ್ಷಕ ಚಂದ್ರಶೇಖರ ಭಟ್ ಆದೂರು ಅವರಿಗೆ ಅಗರ್ತ ಶಂಕರ ಭಟ್ಟರ ಸವಿನೆನಪಿನ ಗೌರಿ ಶಂಕರ ಪ್ರಶಸ್ತಿಯನ್ನು, ಈ ಬಾರಿಯ ಎಸ್‌ಎಸ್‌ಎಲ್‌ಸಿ ಪರೀಕ್ಷೆಯಲ್ಲಿ ಕನ್ನಡ ಮಾಧ್ಯಮದಲ್ಲಿ ದ.ಕ. ಜಿಲ್ಲೆಗೆ ಎರಡನೇ ಸ್ಥಾನವನ್ನು ಪಡೆದ ದೀಕ್ಷಾ, ಪ್ರತಿಭಾನ್ವಿತ ವಿದ್ಯಾರ್ಥಿನಿ ಸುಪ್ರೀತಿ ಇವರಿಗೆ ಉಂಡೆಮನೆ ವಿದ್ಯಾರ್ಥಿ ಪುರಸ್ಕಾರವನ್ನು ಮತ್ತು ನಿವೃತ್ತ ಮೇಜರ್ ಎಮ್.ವಿ. ಭಟ್, ಸೌತಡ್ಕ ದೇವಳದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಕೊಕ್ಕಡ ಕೃಷ್ಣ ಭಟ್, ಉರಗ ತಜ್ಞ ನಿಡ್ಲೆ ಕೆ. ಕೃಷ್ಣ ಭಟ್ ಇವರಿಗೆ ಸಾಧಕ ಪುರಸ್ಕಾರವನ್ನು ಶ್ರೀಗಳು ನೀಡಿ ಗೌರವಿಸಿದರು.
ಶಾಸಕ ವಸಂತ ಬಂಗೇರ ಶ್ರೀಗಳಿಂದ ಗೌರವ ಸ್ವೀಕರಿಸಿ, 17 ವರ್ಷದ ಹಿಂದೆ ಉಂಡೆಮನೆ ಪ್ರಶಸ್ತಿಯನ್ನು ತಾನು ಉದ್ಘಾಟಿಸಿದ್ದನ್ನು ನೆನಪಿಸಿಕೊಂಡರು. ಮಹಾಮಂಡಲ ಅಧ್ಯಕ್ಷ ಡಾ.ವೈ. ಕೃಷ್ಣಮೂರ್ತಿ, ಉಪ್ಪಿನಂಗಡಿ ಹವ್ಯಕ ಮಂಡಲದ ಅಧ್ಯಕ್ಷ ಕಾಂತಾಜೆ ಈಶ್ವರ ಭಟ್ ದಂಪತಿ ಇದ್ದರು.
ಉಂಡೆಮನೆ ನಾರಾಯಣ ಭಟ್ ಸ್ವಾಗತಿಸಿದರು. ಉಂಡೆಮನೆ ವಿಶ್ವೇಶ್ವರ ಭಟ್ ಪ್ರಶಸ್ತಿ ಪತ್ರ ವಾಚಿಸಿ ವಂದಿಸಿದರು. ಉಪ್ಪಿನಂಗಡಿ ಹವ್ಯಕಮಂಡಲ ಕಾರ್ಯದರ್ಶಿ ಬಾಲ್ಯ ಶಂಕರ ಭಟ್ ಕಾರ್ಯಕ್ರಮ ನಿರ್ವಹಸಿದರು. ಹವ್ಯಕ ಭವನದಲ್ಲಿ ಶುಕ್ರವಾರ ಶ್ರೀ ದುರ್ಗಾತ್ರಿಕಾಲ ಪೂಜಾ ನಡೆಯಿತು. ಶನಿವಾರ ರಾಘವೇಶ್ವರ ಶ್ರೀಗೆ ಪಾದಪೂಜೆ, ಭಿಕ್ಷಾದಿ ಸೇವೆಗಳು, ಗೋಪೂಜೆ, ಶ್ರೀ ರಾಜರಾಜೇಶ್ವರಿ ಕಲ್ಪೋಕ್ತಪೂಜೆ ನಡೆದವು.
ಮುಂದಿನ ಜನವರಿಯಲ್ಲಿ ತಾಲೂಕಿನ ಗುಂಡೂರಿಯ ಗೋ ಶಾಲೆಯ ವಠಾರದಲ್ಲಿ ಗೋ ಸಮ್ಮೇಳನ ನಡೆಸುವುದೆಂದು ನಿಶ್ಚಯಿಸಲಾಗಿದೆ ಎಂದು ಕಾಂತಾಜೆ ಈಶ್ವರ ಭಟ್ ಪ್ರಕಟಿಸಿದಾಗ ಶ್ರೀಗಳು ಶುಭ ಹಾರೈಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

