ದಕ್ಷಿಣ ಕನ್ನಡ

ಮೀನುಗಾರಿಕಾ ನಾಡದೋಣಿ ನವೀಕರಣಕ್ಕೆ ಅರ್ಜಿ ಆಹ್ವಾನ

Published On :

ಮಂಗಳೂರು: 2013-14ನೇ ಸಾಲಿನ ಮೀನುಗಾರಿಕಾ ನಾಡದೋಣಿ ಎಂಜಿನ್ ರಹದಾರಿ ನವೀಕರಣಕ್ಕೆ ಮತ್ತು ಹೊಸದಾಗಿ ಪರವಾನಗಿ ಪಡೆಯಲು, ಸೀಮೆಎಣ್ಣೆ ಪಡೆದುಕೊಳ್ಳಲು ಮೀನುಗಾರರಿಂದ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿಯನ್ನು ಜಂಟಿ ತಪಾಸಣೆ ಪೂರ್ಣ ವರದಿಯನ್ನು ಒಂದೇ ಬಾರಿ ಆಹಾರ ನಾಗರಿಕ ಸರಬರಾಜು ಇಲಾಖೆ ಆಯುಕ್ತರಿಗೆ ಸಲ್ಲಿಸಿ ಅನುಮತಿ ಪಡೆಯಬೇಕಾಗುತ್ತದೆ. ಆದ್ದರಿಂದ ನಂತರ ಸಲ್ಲಿಸಿದ ಅರ್ಜಿಯನ್ನು ಪರಿಗಣಿಸಲಾಗುವುದಿಲ್ಲ. ಜೂ. 30 ಕೊನೆ ದಿನ.ಅರ್ಜಿಯೊಂದಿಗೆ ರಹದಾರಿ ಮೂಲಪ್ರತಿ, ಮೀನುಗಾರಿಕೆ ಇಲಾಖೆ ನೋಂದಣಿ ಪ್ರತಿ, ಗಣಕೀಕೃತ ಪಡಿತರ ಚೀಟಿ ಪ್ರತಿ, ದೋಣಿ ಖರೀದಿ ಪತ್ರ ಸಲ್ಲಿಸಬೇಕು ಎಂದು ಆಹಾರ ನಾಗರಿಕ ಸರಬರಾಜು ಸಹಾಯಕ ನಿರ್ದೇಶಕರು ತಿಳಿಸಿದ್ದಾರೆ.
ಕನ್ನಡ ಪುಸ್ತಕಗಳ ಆಹ್ವಾನ
ಮಂಗಳೂರು: ಕರ್ನಾಟಕ ಸಾಹಿತ್ಯ ಅಕಾಡೆಮಿ 2012ನೇ ವರ್ಷದ ಪುಸ್ತಕ ಬಹುಮಾನ ಯೋಜನೆಗೆ 16 ಪ್ರಕಾರಗಳ ಕನ್ನಡ ಪುಸ್ತಕಗಳನ್ನು ಆಹ್ವಾನಿಸಿದೆ. ಪ್ರತಿ ಪ್ರಕಾರದಲ್ಲಿ ವಿಮರ್ಶಕರು ಆಯ್ಕೆ ಮಾಡುವ ಒಂದು ಪ್ರತಿಗೆ ಬಹುಮಾನ ನೀಡಲಾಗುವುದು. 2012 ಜನವರಿಯಿಂದ ಡಿಸೆಂಬರನವರೆಗೆ ಪ್ರಥಮ ಆವೃತ್ತಿಯಾಗಿ ಪ್ರಕಟಗೊಂಡಿರುವ ಕೃತಿಯಾಗಿರಬೇಕು.  ಪ್ರತಿಯನ್ನು ಜು. 15ರೊಳಗೆ ರಿಜಿಸ್ಟ್ರಾರ್, ಕನ್ನಡ ಸಾಹಿತ್ಯ ಅಕಾಡೆಮಿ, ಕನ್ನಡ ಭವನ, ಬೆಂಗಳೂರು-2 ಇಲ್ಲಿಗೆ ಸಲ್ಲಿಸಬಹುದು. ಮಾಹಿತಿಗಾಗಿ ಢಿಢಿಢಿ.್ಞಛ್ಠಟಿಛಡಿಛ್ಞಛಡಝ್ಝಝಿಣಛಛ್ಛಛಜಜಟಣ.್ಟ್ಠ್ಜ ಸಂಪರ್ಕಿಸಿಬಹುದು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.