ಬಜಪೆ ಸಂತ್ರಸ್ತರ ನೆರವಿಗೆ ಧಾವಿಸಿದ ಸಹೃದಯರು
ಮಂಗಳೂರು: ಬಜಪೆ ಕಂಪೌಂಡ್ ಕುಸಿದು ಮನೆ ಮಠ ಕಳೆದುಕೊಂಡವರ ಕಣ್ಣೀರು ಒರಸುವ ಕಾರ್ಯಕ್ಕೆ ಸಹೃದಯರು ಮುಂದೆ ಬಂದಿದ್ದಾರೆ.
ಪಾಪ್ಯುಲರ್ ಬಂಟ್ಸ್ ಆಂಗ್ಲಮಾಧ್ಯಮ ಶಾಲೆ ಕಾರ್ಯಾಧ್ಯಕ್ಷ ಜಗದೀಶ್ ಸಿ. ಶೆಟ್ಟಿ ಸಂತ್ರಸ್ತ ಕುಟುಂಬಗಳಿಗೆ ನಗದು, ಅಕ್ಕಿ, ಮನೆ ಸಾಮಗ್ರಿ, ಚಹಾಪುಡಿ, ಸಕ್ಕರೆ, ತೆಂಗಿನಕಾಯಿ ಮತ್ತು ಊಟದ ವ್ಯವಸ್ಥೆ ಮಾಡಿ ಮಾದರಿ ಎನಿಸಿದರು.
ಸಂತ್ರಸ್ತರನ್ನು ಬಜಪೆ ಸಮೀಪದ ಮಳವೂರು ಆಂಗ್ಲಮಾಧ್ಯಮ ಶಾಲೆಗೆ ಕರೆಸಿಕೊಂಡು ಅವರಿಗೆ ಸಾಂತ್ವನ, ನೆರವು ನೀಡಿದರು. ಬಜಪೆಯಲ್ಲಿ ಆದ ದುರಂತ ಇನ್ನು ನಡೆಯಬಾರದು. ಇಂಥ ಸಂದರ್ಭದಲ್ಲಿ ಸಾಮರ್ಥ್ಯ ಇದ್ದವರು ನೆರವು ನೀಡಬೇಕು ಎಂದು ಜಗದೀಶ್ ಹೇಳಿದರು. ಬಡ ಮತ್ತು ಅನಾಥ ಮಕ್ಕಳನ್ನು ದತ್ತು ತೆಗೆದುಕೊಂಡು ಉಚಿತವಾಗಿ ವಿದ್ಯೆ ನೀಡುತ್ತಿರುವುದಾಗಿ ತಿಳಿಸಿದರು.
ದುರಂತದಲ್ಲಿ ಇದ್ದ ಒಬ್ಬಳೇ ಅಕ್ಕನನ್ನು ಕಳೆದುಕೊಂಡು ಅನಾಥನಾದ ಬಾಲಕ ರವಿಶಂಕರನನ್ನು ಜಗದೀಶ್ ದತ್ತು ತೆಗೆದುಕೊಂಡರು. ಶಾಲೆಯಲ್ಲಿ ಉಚಿತ ವಿದ್ಯಾಭ್ಯಾಸ ಮತ್ತು ಆತನ ಸಕಲ ಖರ್ಚು ವೆಚ್ಚಗಳನ್ನು ತಾನೇ ಭರಿಸುವುದಾಗಿ ಭರವಸೆ ನೀಡಿದರು.
ದುರಂತದಲ್ಲಿ ಮೃತಪಟ್ಟ ಎರಡು ಕುಟುಂಬಗಳಿಗೆ ರೆಡ್ಕ್ರಾಸ್ ಸಂಸ್ಥೆ ಮೂರು ಕಿಟ್ ನೀಡಿದೆ. ಈ ಕಿಟ್ನಲ್ಲಿ ಔಷಧ, ಬೆಡ್ಶೀಟ್, ಕುಕ್ಕರ್ ಹೀಗೆ ಗೃಹೋಪಯೋಗಿ ಸಾಮಗ್ರಿಗಳಿವೆ. ಸಂಕಷ್ಟದಲ್ಲಿದ್ದ ನಮಗೆ ನೆರವು ನೀಡಿದವರಿಗೆ ನಾವು ಕೃತಜ್ಞರಾಗಿದ್ದೇವೆ ಎಂದು ಸಂತ್ರಸ್ತೆ ಸುಜಾತ ಹೇಳಿದ್ದಾರೆ.
ಮೌನ ಪ್ರಾರ್ಥನೆ: ದುರಂತದಲ್ಲಿ ಮಡಿದವರಿಗೆ ಶಾಲೆಯಲ್ಲಿ ಮೌನ ಪ್ರಾರ್ಥನೆ ಸಲ್ಲಿಸಲಾಯಿತು. ಬಜಪೆ ಗ್ರಾಮ ಪಂಚಾಯ್ತಿ ಅಧ್ಯಕ್ಷ ಸಾಹುಲ್ ಹಮೀದ್, ರಾಮಚಂದ್ರ ಶೆಟ್ಟಿ, ಬಿ.ಜೆ.ರಹೀಂ, ಉಮೇಶ್ ರಾವ್ ಎಕ್ಕಾರ್, ಕಂದಾಯ ಅಧಿಕಾರಿ ನವೀನ್, ಶರೀಪ್, ಮುಖ್ಯ ಶಿಕ್ಷಕಿ ಸಹನಾ ಎಂ. ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

