ದಕ್ಷಿಣ ಕನ್ನಡ

ಅಕಾಡೆಮಿ ಅಧ್ಯಕ್ಷರು ಅವಧಿ ಪೂರ್ಣ ಮಾಡಲಿ: ಆಗ್ರಹ

Published On :

ಮಂಗಳೂರು: ಸರ್ಕಾರ ಅಕಾಡೆಮಿ ಅಧ್ಯಕ್ಷರ ರಾಜೀನಾಮೆ ಪಡೆದು ಹೊಸಬರನ್ನು ನೇಮಿಸಲು ನಿರ್ಧರಿಸಿದ್ದು, ಕರ್ನಾಟಕ ಲಲಿತಕಲಾ ಅಕಾಡೆಮಿ ಅಧ್ಯಕ್ಷ ರಾಜೀನಾಮೆ ಪಡೆಯದೆ ಪೂರ್ಣಾವಧಿ ಮುಗಿಸಲು ಅವಕಾಶ ಕೊಡುವಂತೆ ಕರಾವಳಿ ಚಿತ್ರಕಲಾ ಚಾವಡಿ ಸರ್ಕಾರವನ್ನು ಆಗ್ರಹಿಸಿದೆ. ಅಕಾಡೆಮಿ ಅಧ್ಯಕ್ಷರಾಗಿರುವ ಚಿ.ಸು. ಕೃಷ್ಣ ಶೆಟ್ಟಿ ಅವರು ಅಧಿಕಾರಕ್ಕೆ ಬಂದು ಒಂದು ವರ್ಷ ಪೂರೈಸಿದ್ದು, ಹೊಸ ಚಿಂತನೆ, ಯೋಜನೆಗಳ ಮೂಲಕ ಕಲಾವಲಯದಲ್ಲಿ ಪ್ರಗತಿಪರ ಸಂಚಲನ ಮೂಡಿಸಿದ್ದಾರೆ. ಅಧ್ಯಕ್ಷರ ರಾಜೀನಾಮೆಯಿಂದ ಹಾಕಿಕೊಂಡಿರುವ ಯೋಜನೆಗಳು ಕುಂಠಿತಗೊಳ್ಳುತ್ತದೆ. ಈ ಕ್ರಮ ಅಭಿವ್ಯಕ್ತಿ ಸ್ವಾತಂತ್ರಕ್ಕೆ ಅಡ್ಡಿಪಡಿಸಿದಂತಾಗುತ್ತದೆ. ಆದ್ದರಿಂದ ಸರ್ಕಾರ ಅಕಾಡೆಮಿಗಳ ಕಾರ್ಯವೈಖರಿಯನ್ನು ಪರಿಶೀಲಿಸಿ ಅವಧಿ ಪೂರ್ಣಗೊಳಿಸಲು ಅವಕಾಶ ಮಾಡಿಕೊಡಬೇಕು ಎಂದು ಚಾವಡಿ ಅಧ್ಯಕ್ಷ ವಿಷ್ಣು ಶೇವಗೂರ್ ಪ್ರಕಟಣೆಯಲ್ಲಿ ಹೇಳಿದ್ದಾರೆ.
ಕೆ. ಅನಿಲ್‌ಗೆ ಭಡ್ತಿ
ಮಂಗಳೂರು: ಇಂಡಿಯನ್ ಒವರ್‌ಸೀಸ್ ಬ್ಯಾಂಕಿನ ಮಂಗಳೂರು ಪ್ರಾದೇಶಿಕ ಕಚೇರಿ ಉಪ ಮಹಾಪ್ರಬಂಧಕ ಕೆ. ಅನಿಲ್ ಅವರು ಪ್ರಾದೇಶಿಕ ಮುಖ್ಯ ವ್ಯವಸ್ಥಾಪಕರಾಗಿ ಭಡ್ತಿ ಹೊಂದಿದ್ದು, ಬೆಂಗಳೂರು ಮುಖ್ಯ ಕಚೇರಿ ವರ್ಗಾವಣೆಗೊಂಡಿದ್ದಾರೆ. ಪ್ರಾದೇಶಿಕ ಕಚೇರಿಯ ವ್ಯವಹಾರದ ಅಭಿವೃದ್ಧಿಗೆ ಶ್ರಮಿಸಿದ ಇವರಿಗೆ ಬ್ಯಾಂಕಿನ ಗ್ರಾಹಕರು ಹಾಗೂ ಸಿಬ್ಬಂದಿ ವರ್ಗ ಶುಭ ಹಾರೈಸಿದೆ.
ರ್ಯಾಲಿ ಮುಂದೂಡಿಕೆ
ಮಂಗಳೂರು: ರಾಜ್ಯದಲ್ಲಿ ವಿಪರೀತ ಮಳೆಯ ಕಾರಣ ಭೂ ಸೇನೆ ಸೈನಿಕರ ನೇರ ನೇಮಕಾತಿ ರ್ಯಾಲಿಯನ್ನು ಮುಂದೂಡಲಾಗಿದ್ದು, ಜು. 3 ರಂದು ಚಿಕ್ಕಮಗಳೂರಿನ ಸೆಂಟನರಿ ಕ್ರೀಡಾಂಗಣದಲ್ಲಿ ನಡೆಯಲಿದೆ ಎಂದು ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.