ದಕ್ಷಿಣ ಕನ್ನಡ

30 ವೈದ್ಯ ಕಾಲೇಜುಗಳಿಗೆ ಚಿಂತನೆ: ಆಸ್ಕರ್

Published On :

ಮೂಲ್ಕಿ: ಕಾರ್ಮಿಕರ ಮಕ್ಕಳೂ ಇತರರಂತೆ ಬದುಕಬೇಕಾಗಿದ್ದು ಕಾರ್ಮಿಕರಿಗೆ ಉಪಯೋಗವಾಗುವ ನಿಟ್ಟಿನಲ್ಲಿ ಇಎಸ್‌ಐ ಆಸ್ಪತ್ರೆಗಳಿಗೆ ಹೊಂದಿಕೊಂಡಂತೆ ದೇಶಾದ್ಯಂತ 30 ಮೆಡಿಕಲ್ ಕಾಲೇಜುಗಳನ್ನು ಆರಂಭಿಸಲು ನಿರ್ಧರಿಸಲಾಗಿದೆ. ಇದರಿಂದ ಕಾರ್ಮಿಕರಿಗೆ ಇಎಸ್‌ಐ ಆಸ್ಪತ್ರೆಯಲ್ಲಿ ಎಲ್ಲಾ ರೀತಿಯ ಸವಲತ್ತುಗಳು ಸಿಗುವ ಸಾಧ್ಯತೆಯಿದೆ ಎಂದು ಕೇಂದ್ರ ಭೂಸಾರಿಗೆ ಸಚಿವ ಆಸ್ಕರ್ ಫರ್ನಾಂಡಿಸ್ ಹೇಳಿದ್ದಾರೆ.
ಮೂಲ್ಕಿಯ ಕಾರ್ನಾಡಿನ ಚರ್ಚಿನ ಸಭಾಂಗಣದಲ್ಲಿ ಜರುಗಿದ ಇಂಟೆಕ್ ನೇತೃತ್ವದ ಪಡುಬಿದ್ರಿಯ ಸುಜ್ಲಾನ್ ಕಾರ್ಮಿಕರ ಸಂಘಟನೆ ಉದ್ಘಾಟಿಸಿ ಮಾತನಾಡಿದ ಅವರು, ಪ್ರಸ್ತುತ ಇಎಸ್‌ಐ ಸೌಲಭ್ಯ ಹೊಂದಿರುವ ಕಾರ್ಮಿಕರಿಗೆ ಗಂಭೀರ ಶಸ್ತ್ರಚಿಕಿತ್ಸೆಗಳ ಅಗತ್ಯ ಬಿದ್ದರೆ, ಇತರ ಖಾಸಗಿ ಆಸ್ಪತ್ರೆಗಳಿಗೆ ಕಳುಹಿಸಲಾಗುತ್ತಿದೆ, ಈ ಖರ್ಚನ್ನು ಇಎಸ್‌ಐ ಆಸ್ಪತ್ರೆಯೇ ಭರಿಸಬೇಕಾಗುತ್ತದೆ. ಇದರ ಬದಲು ಎಎಸ್‌ಐ ಆಸ್ಪತ್ರೆಗಳನ್ನೇ ವೈದ್ಯ ಕಾಲೇಜುಗಳಾಗಿ ಅಭಿವೃದ್ಧಿಪಡಿಸಿ, ವೈದ್ಯ ಕಾಲೇಜ್ ಸ್ಥಾಪಿಸಿದರೆ ಈ ಖರ್ಚು ಉಳಿಯುವ ಜೊತೆಗೆ, ಆಸ್ಪತ್ರೆಯಲ್ಲೂ ಕಾರ್ಮಿಕರಿಗೆ ಹೆಚ್ಚಿನ ಸೌಲಭ್ಯ ದೊರಕುತ್ತದೆ ಎಂದು ವಿವರಿಸಿದರು.
ತಾಂತ್ರಿಕ ವಿದ್ಯಾಲಯ: ದೇಶಾದ್ಯಂತ ತಾಂತ್ರಿಕ ಶಿಕ್ಷಣ ನೀಡುವ 50 ಸಾವಿರ ತಾಂತ್ರಿಕ ವಿದ್ಯಾಲಯಗಳನ್ನು ಸ್ಥಾಪಿಸುವ ಉದ್ದೇಶವಿದೆ. ದೇಶದಲ್ಲಿ ಶೇ.18 ಮಂದಿ ಉನ್ನತ ಶಿಕ್ಷಣ ಪಡೆಯುತ್ತಿದ್ದು ಮುಂದಿನ 7 ವರ್ಷಗಳಲ್ಲಿ ಶೇ.30 ಮಂದಿ ಉನ್ನತ ಶಿಕ್ಷಣ ಪಡೆಯುವ ಉದ್ದೇಶ ಹೊಂದಲಾಗಿದೆಯೆಂದು ತಿಳಿಸಿದರು.  ಈ ಸಂದರ್ಭ ಆಸ್ಕರ್ ಫರ್ನಾಂಡಿಸ್ ಮೌತ್‌ಆರ್ಗನ್ ನುಡಿಸಿ ಗಮನ ಸೆಳೆದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.