ದಕ್ಷಿಣ ಕನ್ನಡ

ನೇಣು ಬಿಗಿದು ಆತ್ಮಹತ್ಯೆ

Published On :

ಕಾರ್ಕಳ: ಇಲ್ಲಿನ ನಂದಳಿಕೆ ಗ್ರಾಮದ ಕೈರೋಳಿ ನಿವಾಸಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಗುರುವಾರ ನಡೆದಿದೆ. ವಾಸುದೇವ ಆಚಾರ್ಯ (64) ಮೃತರು. ವಿಪರೀತ ಕುಡಿತದ ಚಟ ಹೊಂದಿದ ವಾಸುದೇವ ಆಚಾರ್ಯ ಅವರು ಭೋಜ ದೇವಾಡಿಗ ಎಂಬವರ ಹಾಡಿಯಲ್ಲಿ ಮರಕ್ಕೆ ನೈಲಾನ್ ಹಗ್ಗದಿಂದ ಕುತ್ತಿಗೆಗೆ  ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಮೃತರ ಮಗ ವಿಠಲ ಆಚಾರ್ಯ ನೀಡಿದ ದೂರಿನಂತೆ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಿಸಿ ತನಿಖೆ ಕೈಗೊಳ್ಳಲಾಗಿದೆ.
ವಾಹನ ಡಿಕ್ಕಿ; ವ್ಯಕ್ತಿ ಸಾವು
ಕಾರ್ಕಳ: ವಾಹನ ಡಿಕ್ಕಿ ಹೊಡೆದು ವ್ಯಕ್ತಿ ಮೃತಪಟ್ಟ ಘಟನೆ ಇಲ್ಲಿನ ಮುಡಾರು ಗ್ರಾಮದ ಬನದ ಪಲ್ಲೆ ಎಂಬಲ್ಲಿ ನಡೆದಿದೆ. ಶೇಖರ ಪೂಜಾರಿ ಮೃತರು. ಇವರು ಗುರುವಾರ ರಾತ್ರಿ ಮುಡಾರು ಗ್ರಾಮದ ಬನದ ಪಲ್ಲೆ ಎಂಬಲ್ಲಿ ರಸ್ತೆ ಬದಿಯಲ್ಲಿ ನಡೆದುಕೊಂಡು ಬರುತ್ತಿರುವಾಗ ಯಾವುದೋ ವಾಹನದ ಚಾಲಕರು ವಾಹನವನ್ನು ಅತಿ ವೇಗ ಹಾಗೂ ಆಜಾಗರೂಕತೆಯಿಂದ ಚಲಾಯಿಸಿಕೊಂಡು ಬಂದು ಡಿಕ್ಕಿ ಹೊಡೆದು ನಿಲ್ಲಿಸದೆ ಪರಾರಿಯಾಗಿದ್ದಾರೆ. ಡಿಕ್ಕಿ ಹೊಡೆದು ಅದರಿಂದ ಉಂಟಾದ ಗಾಯದಿಂದ ಶೇಖರ ಪೂಜಾರಿ ಸ್ಥಳದಲ್ಲೇ ಮೃತಪಟ್ಟಿದ್ದಾರೆ ಎಂದು ಗಣೇಶ್ ಕೆ. ನೀಡಿದ ದೂರಿನಂತ ಕಾರ್ಕಳ ಠಾಣೆಯಲ್ಲಿ ಪ್ರಕರಣ ದಾಖಿಲಿಸಿ ತನಿಖೆ ಕೈಗೊಳ್ಳಲಾಗಿದೆ.
ಎಂಐಟಿ ವಿದ್ಯಾರ್ಥಿ ನಾಪತ್ತೆ
ಮಣಿಪಾಲ: ಇಲ್ಲಿನ ಎಂ.ಐ.ಟಿ. ವಿದ್ಯಾರ್ಥಿ ನಾಪತ್ತೆಯಾದ ಘಟನೆ ಭಾನುವಾರ ನಡೆದಿದೆ. ಎಂ.ಐ.ಟಿ. ಹಾಸ್ಟೆಲ್‌ನ ರೂಂ ನಂಬ್ರ 4122 ವಾಸ್ತವ್ಯವಿದ್ದ ಸ್ವಪ್ನಿಲ್ ಜೈನ್ (23) ನಾಪತ್ತೆಯಾದಾತ. ಅವರು ಭಾನುವಾರ ರಾತ್ರಿ 1 ಗಂಟೆಯ ನಂತರ ಯಾರಲ್ಲೂ ಹೇಳದೆ ರೂಮಿಗೆ ಬೀಗ ಹಾಕಿ ಹೋದವನು ಇದುವರೆಗೂ ವಾಪಾಸು ಬಾರದೆ ಕಾಣೆಯಾಗಿರುತ್ತಾನೆ. ಈ ಬಗ್ಗೆ ಎಂ.ಐ.ಟಿ ಹಾಸ್ಟೆಲ್ ವಾರ್ಡನ್ ದೂರಿನಂತೆ ಮಣಿಪಾಲ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ.  
ದೇವಾಲಯಕ್ಕೆ ನುಗ್ಗಿ ದಾಂದಲೆ
ಉಪ್ಪಿನಂಗಡಿ: ಇಲ್ಲಿಗೆ ಸಮೀಪದ ಅಡ್ಡೋಳೆ ಎಂಬಲ್ಲಿನ ಅಯ್ಯಪ್ಪ ಸ್ವಾಮಿ ದೇವಾಲಯದಲ್ಲಿ ಪ್ರತಿಷ್ಠಾ ಮಹೋತ್ಸವ ನಡೆಯುತ್ತಿದ್ದಾಗ ಅನ್ಯಮತೀಯನೋರ್ವ ಮಾರಾಕಾಯುಧದೊಂದಿಗೆ ಬಂದು ದಾಂದಲೆ ನಡೆಸಿದ ಬಗ್ಗೆ ಪೊಲೀಸರಿಗೆ ದೂರು ನೀಡಲಾಗಿದೆ. ಟಿ.ಪಿ. ಜೋಯಿ ಎಂಬಾತ ಕತ್ತಿಯೊಂದಿಗೆ ದೇವಾಲಯದ ಆವರಣ ಪ್ರವೇಶಿಸಿ, ಅಲ್ಲಿ ನೆರೆದಿದ್ದ ಭಕ್ತರನ್ನು ನಿಂದಿಸಿ, ಬೆದರಿಸಿ, 7 ಟ್ಯೂಬ್ ಲೈಟ್‌ಗಳನ್ನು ಪುಡಿಗಟ್ಟಿ ದಾಂದಲೆ ನಡೆಸಿದ್ದಾನೆ ಎಂದು ಪೊಲೀಸರಿಗೆ ನೀಡಿದ ದೂರಿನಲ್ಲಿ ತಿಳಿಸಲಾಗಿದೆ. ಉಪ್ಪಿನಂಗಡಿ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.
ವ್ಯಾನ್- ಜೀಪ್ ಡಿಕ್ಕಿ; ಮೂವರಿಗೆ ಗಾಯ
ಸುಳ್ಯ: ಸುಳ್ಯದಿಂದ ಮರ್ಕಂಜ ಕಡೆ ಹೋಗುತ್ತಿದ್ದ ವ್ಯಾನ್ ಮತ್ತು ಎಲಿಮಲೆಯಿಂದ ದೊಡ್ಡತೋಟದ ಕಡೆಗೆ ಬರುತ್ತಿದ್ದ ಜೀಪು ಪರಸ್ಪರ ಡಿಕ್ಕಿಯಾಗಿ ಜೀಪಿನಲ್ಲಿದ್ದ ಮೂವರು ಗಾಯಗೊಂಡ ಘಟನೆ ನಡೆದಿದೆ. ಸುಳ್ಯದಿಂದ ಮರ್ಕಂಜ ಕಡೆಗೆ ಜಯರಾಮ ಎಂಬವರು ಚಲಾಯಿಸಿಕೊಂಡು ಹೋಗುತ್ತಿದ್ದ ವ್ಯಾನ್ ಮತ್ತು ಎಲಿಮಲೆಯಿಂದ ದೊಡ್ಡತೋಟದ ಕಡೆಗೆ ಬರುತ್ತಿದ್ದ ಜೀಪು ಪರಸ್ಪರ ಡಿಕ್ಕಿ ಹೊಡೆದು, ಜೀಪ್ ಮತ್ತು ವ್ಯಾನ್ ಜಖಂಗೊಂಡಿದೆ. ಜೀಪಿನ ಚಾಲಕ ದಿವಾಕರ ಬಾಳೆತೋಟ ಮತ್ತು ಅದರಲ್ಲಿದ್ದ ಜಾನು ನಾಯ್ಕ, ಚನಿಯಪ್ಪ ನಾಯ್ಕ ಗಾಯಗೊಂಡವರು.
ವ್ಯಕ್ತಿ ಕೊಲೆ ಯತ್ನ
ಬೆಳ್ತಂಗಡಿ: ಇಲ್ಲಿನ ಕಾಜೂರು ಎಂಬಲ್ಲಿ ವ್ಯಕ್ತಿಯೊಬ್ಬರನ್ನು ಕೊಲೆ ಮಾಡುವ ವಿಫಲ ಯತ್ನ ಶುಕ್ರವಾರ ನಡೆದಿದೆ. ಸ್ಥಳೀಯ ಸಿದ್ದಿಕ್ ಎಂಬವರ ಮೇಲೆ ತಲವಾರಿನಿಂದ ಹಲ್ಲೆ ಮಾಡಲಾಗಿದೆ. ಕೈ,ದೇಹಕ್ಕೆ ಗಂಭೀರ ಗಾಯಗೊಂಡಿರುವ ಅವರನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.