ದಕ್ಷಿಣ ಕನ್ನಡ

ಉಪ್ಪಿನಂಗಡಿ: ಇಂದು, ನಾಳೆ ನಡು ಮಖೆ ಜಾತ್ರೆ

Published On :

ಉಪ್ಪಿನಂಗಡಿ: ಉಪ್ಪಿನಂಗಡಿಯ ಶ್ರೀ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಳದಲ್ಲಿ ಸೋಮವಾರ 2ನೇ ಅಷ್ಟಮಿ ಮಖೆ (ನಡು ಮಖೆ) ಜಾತ್ರೋತ್ಸವವು ಜರುಗಲಿದೆ. ದೇಗುಲದಲ್ಲಿ ವರ್ಷಾವಧಿ ನಡೆಯುವ ಮೂರು ಮಖೆ ಜಾತ್ರೆಗಳ ಪೈಕಿ ಎರಡನೇ ಮಖೆ (ನಡು ಮಖೆ) ಜಾತ್ರೆಯಾಗಿ ಬಂದಿರುವ ಅಷ್ಟಮಿ ಮಖೆ ಜಾತ್ರೆಯು ಭಾರಿ ಭಕ್ತರನ್ನು ಸೆಳೆಯುವ ನಿರೀಕ್ಷೆ ಹೊಂದಿದೆ. ಜಾತ್ರೋತ್ಸವದ ಅಂಗವಾಗಿ ರಾತ್ರಿ 8 ಗಂಟೆಗೆ ದೇವರು ಹೊರಟು ಉತ್ಸವ, ರಥೋತ್ಸವ ಮತ್ತು ಮಹಾ ಪೂಜೆ ನಡೆಯಲಿದೆ. ಜಾತ್ರೋತ್ಸವದಲ್ಲಿ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ.  ಈ ಬಾರಿ ಸ್ವಾಮೀ ವಿವೇಕಾನಂದರ 150ನೇ ವರ್ಷಾಚಾರಣೆಯ ಅಂಗವಾಗಿ ವಿವೇಕ ಜಾಗೃತಿ ಹಾಗೂ ಧಾರ್ಮಿಕ ಸಭೆ ಆಯೋಜಿಸಲಾಗಿದೆ. ರಾತ್ರಿ ವಿದ್ವಾನ್ ಕೆ. ರಾಮಚಂದ್ರ ಆಚಾರ್ಯ ಮೈಸೂರು ಇವರಿಂದ ದಾಸರ ಪದಗಳು, ಸರಯೂ ಬಾಲ ಯಕ್ಷವೃಂದ ಮಕ್ಕಳ ಮೇಳದಿಂದ ಷಣ್ಮುಖ ವಿಜಯ ಯಕ್ಷಗಾನ ಬಯಲಾಟ, ಬಳಿಕ ಮಚ್ಚೇಂದ್ರನಾಥ್ ಮಂಜೇಶ್ವರ ವಿರಚಿತ ನೆತ್ತೆರಾ.. ನೀರಾ...  ಎಂಬ ನಾಟಕವು ನೇತ್ರಾವತಿ ನದಿ ಪಾತ್ರದಲ್ಲಿ ರಚಿತವಾದ ರಂಗ ಮಂಟಪದಲ್ಲಿ ನಡೆಯಲಿದೆ. ಮಾ.5ರಂದು ಮುಂಜಾನೆ ನೇತ್ರಾವತಿ ಕುಮಾರಾಧಾರ ನದಿ ಸಂಗಮ ಸ್ಥಳದಲ್ಲಿ ಪವಿತ್ರ ತೀರ್ಥ ಸ್ನಾನ ನಡೆಯಲಿದೆ. ನಂತರ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆಯಲಿದೆ.  ಸಾರ್ವಜನಿಕ ಅನ್ನ ಸಂತರ್ಪಣೆ ನಡೆಯಲಿದೆ.
ಇಂದಿನಿಂದ ಜಿಲ್ಲಾದ್ಯಂತ ಬಿಜೆಪಿ ಮಹಿಳಾ ಅಭಿಯಾನ
ಮಂಗಳೂರು ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಗಳ ಗೆಲವಿಗೆ ಮಹಿಳಾ ಮೋರ್ಚಾ ಶ್ರಮಿಸಲಿದ್ದು, ಸೋಮವಾರ ಜಿಲ್ಲಾದ್ಯಂತ ವಿಶೇಷ ಅಭಿಯಾನ ನಡೆಸಲಿದೆ ಎಂದು ಜಿಲ್ಲಾಧ್ಯಕ್ಷೆ ಪುಲಸ್ತ್ಯ ರೈ ಸುದ್ದಿಗೋಷ್ಠಿಯಲ್ಲಿ ತಿಳಿಸಿದ್ದಾರೆ. ಜಿಲ್ಲೆಯ ಪ್ರತಿ ವಾರ್ಡ್‌ನಲ್ಲಿ ಏಕಕಾಲಕ್ಕೆ ಮಹಿಳಾ ಮೋರ್ಚಾ ಕಾರ್ಯಕರ್ತೆಯರು ಚುನಾವಣಾ ಪ್ರಚಾರ ನಡೆಸುವರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.