ಚಲಿಸುವ ರೈಲಿಗೆ ತಲೆ ಕೊಟ್ಟು ಆತ್ಮಹತ್ಯೆ
ವಿಟ್ಲ: ಯುವಕನೊಬ್ಬ ಚಲಿಸುವ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡ ಘಟನೆ ವಿಟ್ಲ ಠಾಣೆ ವ್ಯಾಪ್ತಿಯ ಮಾಣಿ ಸಮೀಪದ ಕೊಡಾಜೆ ಎಂಬಲ್ಲಿ ಭಾನುವಾರ ನಡೆದಿದೆ.
ವಿಟ್ಲದ ಮಾಣಿ ಗ್ರಾಮದ ಸಾಗು ನಿವಾಸಿ ವಾಮನಶೆಟ್ಟಿ ಅವರ ಪುತ್ರ ಸಂಪತ್ ರೈ (23) ಆತ್ಮಹತ್ಯೆಗೆ ಶರಣಾದ ಯುವಕ. ಈತ ಮಂಗಳೂರಿನ ಖಾಸಗಿ ಕಂಪನಿಯೊಂದರಲ್ಲಿ ಉದ್ಯೋಗದಲಿದ್ದ.
ಭಾನುವಾರ ಬೆಳಗ್ಗೆ ಕೊಡಾಜೆ ರೈಲು ಹಳಿಯಲ್ಲಿ ಅನಾಥ ಶವವೊಂದನ್ನು ಸ್ಥಳೀಯರು ಗಮನಿಸಿದ್ದು, ಬಳಿಕ ಅವರು ವಿಟ್ಲ ಪೊಲೀಸರಿಗೆ ಮಾಹಿತಿ ನೀಡಿದರು. ವಿಟ್ಲ ಠಾಣಾಧಿಕಾರಿ ಮಾಧವ ಕೂಡ್ಲು ಮತ್ತು ಸಿಬ್ಬಂದಿ ಸ್ಥಳಕ್ಕೆ ಬಂದು ಪರಿಶೀಲನೆ ನಡೆಸಿದ್ದು, ಆ ಸಮಯದಲ್ಲಿ ಆತನ ಕಿಸೆಯಲ್ಲಿ ಡೆತ್ನೋಟ್ ಪತ್ತೆಯಾಗಿದೆ. ಮೃತನ ಬಳಿಯಲ್ಲಿದ್ದ ಮೊಬೈಲ್ನಲ್ಲಿದ್ದ ನಂಬರ್ನ ಆಧಾರದಲ್ಲಿ ಯುವಕನ ಮನೆಯವರನ್ನು ಸಂಪರ್ಕಿಸಿದಾಗ ಶವದ ಗುರುತು ದೊರೆತಿದೆ. ಮೃತ ಯುವಕ ಕಳೆದ ಕೆಲವು ದಿನಗಳಿಂದ ಹೃದಯ ಸಂಬಂಧಿ ಕಾಯಿಲೆಯಿಂದ ಬಳಲುತ್ತಿದ್ದು, ಸರ್ಜರಿ ಕೂಡಾ ಆಗಿತ್ತು.
ಇದರಿಂದ ಬೇಸತ್ತ ಯುವಕ ಭಾನುವಾರ ಬೆಳಗ್ಗೆ ಮಂಗಳೂರಿನಿಂದ- ಪುತ್ತೂರು ಕಡೆಗೆ ತೆರಳುವ ರೈಲಿನಡಿಗೆ ತಲೆಕೊಟ್ಟು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಆತನ ದೇಹದ ಛಿದ್ರವಾಗಿ ಚೆಲ್ಲಾಪಿಲ್ಲಿಯಾಗಿ ಬಿದ್ದಿತ್ತು. ಸ್ಥಳಕ್ಕೆ ರೇಲ್ವೆ ಪೊಲೀಸ್ ಅಧಿಕಾರಿ ಟಿ. ಸಂಜೀವ ನಾಯ್ಕ ಹಾಗೂ ಸಿಬ್ಬಂದಿ ಬಂದು ಪರಿಶೀಲನೆ ನಡೆಸಿ ಪ್ರಕರಣ
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

