ದಕ್ಷಿಣ ಕನ್ನಡ

ವಿಟ್ಲ ತಾಲೂಕು ಘೋಷಣೆಗೆ ಉಗ್ರ ಹೋರಾಟ ಅಭಿಮತ

Published On :

ವಿಟ್ಲ: ಹೋರಾಟ ಸಮಿತಿಯನ್ನು ರಚಿಸಿ ಸುಮ್ಮನೆ ಕೂರದೆ ಕೆಲಸ ಮಾಡಿದಾಗ ಮಾತ್ರ ಯಶಸ್ವಿಯಾಗಲು ಸಾಧ್ಯ. ರಾಜಕೀಯ ಪಕ್ಷಗಳು ರಾಜಕೀಯ ತೊರೆದು ಹೋರಾಟ ಮಾಡಬೇಕಿದೆ ಮತ್ತು ಎಲ್ಲಾ ಸಂಘಟನೆಗಳು ಇದರಲ್ಲಿ ಕಾರ್ಯನಿರ್ವಹಿಸುವ ಅಗತ್ಯ ಇದೆ ಎಂದು ವಿಟ್ಲ ಪರಿಸರದ ಸಾರ್ವಜನಿಕ ಮುಖಂಡರು ಅಭಿಪ್ರಾಯಪಟ್ಟರು.
ವಿಟ್ಲವನ್ನು ತಾಲೂಕನ್ನಾಗಿ ಘೋಷಿಸಬೇಕು ಎಂದು ಆಗ್ರಹಿಸಿ ಇತ್ತೀಚೆಗೆ ನಡೆದ ವಿಟ್ಲ ಪರಿಜ್ಞಾನ ಸಭಾಭವನದಲ್ಲಿ ನಡೆದ ವಿಟ್ಲ ಹೋಬಳಿಯ ಎಲ್ಲಾ ಜಪ್ರನಿಧಿಗಳ ಸಭೆಯಲ್ಲಿ ಸಾರ್ವಜನಿಕರು ಅಭಿಪ್ರಾಯ ವ್ಯಕ್ತಪಡಿಸಿದರು.
ತ್ರಿಶಂಕು ಸ್ಥಿತಿಯಲ್ಲಿರುವ ವಿಟ್ಲ ತಾಲೂಕು ರಚನೆಗೆ ಉಗ್ರ ಹೋರಾಟದ ಅಗತ್ಯ ಇದೆ. ಗ್ರಾಮ ಮಟ್ಟದಿಂದ ಹೋರಾಟದ ರೂಪು ರೇಷೆಗಳನ್ನು ಮಾಡಿಕೊಂಡು ವಿಟ್ಲ ಬಸ್ ನಿಲ್ದಾಣದ ಬಳಿ ಬೃಹತ್ ಸಮಾವೇಶ ನಡೆಸಿ ಎಲ್ಲರನ್ನು ಎಚ್ಚರಗೊಳಿಸುವ ಕಾರ್ಯ ಆಗಬೇಕೆಂಬ ಅಭಿಪ್ರಾಯಗಳು ಕೇಳಿ ಬಂದವು. ಚುನಾವಣಾ ಬಹಿಷ್ಕಾರದಿಂದ ಯಾವುದನ್ನೂ ಸಾಧಿಸಲು ಸಾಧ್ಯವಿಲ್ಲದ ಕಾರಣ ಜನಪ್ರತಿನಿಧಿಗಳು ತಮ್ಮ ಬದ್ಧತೆಯನ್ನು ಪ್ರದರ್ಶಿಸುವ ಕಾರ್ಯ ಮಾಡಬೇಕಿದೆ ಎನ್ನುವ ಮಾತುಗಳು ಕೇಳಿ ಬಂದವು.
ಮುರುವ ಮಹಾಬಲ ಭಟ್ ಮಾತನಾಡಿ, ಭೌಗೋಳಿಕವಾಗಿ, ಜನಸಂಖ್ಯೆಯಲ್ಲಿ ವಿಟ್ಲಗೆ ತಾಲೂಕು ಪಟ್ಟ ಸಿಗಬೇಕಾದ ಎಲ್ಲ ಅರ್ಹತೆ ಇದೆ. ಆದರೆ ವಿಟ್ಲಕ್ಕೆ ಅನ್ಯಾಯವಾಗುತ್ತಿದೆ. ಇದರಿಂದಾಗಿ ಇಲ್ಲಿ ಅಲ್ಪಸಂಖ್ಯಾತರು, ಪರಿಶಿಷ್ಟರು ಅಧಿಕ ಸಂಖ್ಯೆಯಲ್ಲಿದ್ದು ಅವರಿಗೆ ಸಿಗುವ ಸೌಲಭ್ಯಗಳನ್ನು ಸಿಗುತ್ತಿಲ್ಲ ಎಂದರು.  ರಾಮಕೃಷ್ಣ ಭಟ್ ಬೊಳಂತಿಮೊಗರು, ಸೇಸಪ್ಪ ಗೌಡ ಮಾಡತ್ತಾರು, ಹುಸೈನಾರ್, ವಿಟ್ಲ ಮಂಗೇಶ್ ಭಟ್, ಶ್ರೀಧರ ಶೆಟ್ಟಿ ಬೈಲುಗುತ್ತು, ಎಂ.ಕೆ. ಮೂಸಾ, ರವಿಪ್ರಸಾದ್ ಶೆಟ್ಟಿ ಪಾಲ್ತಾಡಿ, ಎಂ.ಎಸ್. ಮಹಮ್ಮದ್, ಕಾನ ಈಶ್ವರ ಭಟ್, ಮಾಧವ ಮಾವೆ ಮಾತನಾಡಿದರು.
ಸಂಚಾಲನಾ ಸಮಿತಿ ರಚನೆ: ಗೌರಾವಧ್ಯಕ್ಷರಾಗಿ ಮುರುವ ಮಹಾಬಲ ಭಟ್ಟ, ಅಧ್ಯಕ್ಷರಾಗಿ ಮಾಧವ ಮಾವೆ, ಪ್ರಧಾನ ಕಾರ್ಯದರ್ಶಿಯಾಗಿ ರಾಮಣ್ಣ ಶೆಟ್ಟಿ ಕರೋಪಾಡಿ, ಉಪಾಧ್ಯಕ್ಷರಾಗಿ ಲಕ್ಷ್ಮೀನಾರಾಯಣ ಅಡ್ಯಂತಾಯ, ಸೇಸಪ್ಪ ಗೌಡ ಮಾಡತ್ತಾರು, ಕೋಶಾಧಿಕಾರಿಯಾಗಿ ಕಾನ ಈಶ್ವರ ಭಟ್, ಕಾನೂನು ಸಲಹೆಗಾರರಾಗಿ ಪ್ರಕಾಶ ನಾರಾಯಣ, ಜಯರಾಮ ರೈ, ಪ್ರದ್ಮನಾಭ ಅಳಿಕೆ ಆಯ್ಕೆಯಾದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.