ದಕ್ಷಿಣ ಕನ್ನಡ

ನೆಟ್ಟಣ ಬಾರ್ ಮುಚ್ಚುವಂತೆ ಕೊರಗರ ಆಗ್ರಹ

Published On :

ಸುಬ್ರಹ್ಮಣ್ಯ: ಸಮೀಪದ ನೆಟ್ಟಣದಲ್ಲಿ ವ್ಯವಹರಿಸುತ್ತಿರುವ ಬಾರ್‌ನಿಂದ ಈ ಪರಿಸರದಲ್ಲಿ ಗಲಾಟೆ ,ದೊಂಬಿ ನಡೆದು ಶಾಂತಿ ಭಂಗವಾಗುತ್ತಿದೆ. ನಿತ್ಯವೂ ಬಾರ್‌ನಲ್ಲಿ ಕ್ಷುಲ್ಲಕ ಜಗಳ ನಡೆದು ತೊಂದರೆಯಾಗುತ್ತಿದೆ ಎಂದು ಇಲ್ಲಿನ ಕೊರಗ ಸಮುದಾಯ ಆರೋಪಿಸಿದೆ.
ಕೊರಗ ಸಮುದಾಯದ ಜನರನ್ನು ಗುರಿಯಾಗಿಟ್ಟುಕೊಂಡು ಈ ಬಾರ್ ಅವರನ್ನು ಬಲಿಪಶು ಮಾಡಲಾಗುತ್ತಿದೆ. ಕುಡಿದ ಮತ್ತಿನಲ್ಲಿ ಗಂಡಸರು ಮನೆಗೆ ಬಂದು ಹೆಂಡತಿ ಮಕ್ಕಳಿಗೆ ಕಿರಿಕಿರಿ ಮಾಡುತ್ತಿದ್ದು ಮಕ್ಕಳ ವಿದ್ಯಾಭ್ಯಾಸಕ್ಕೆ ಅಡ್ಡಿ ಸೇರಿದಂತೆ ಎಲ್ಲದಕ್ಕೂ ಈ ಬಾರ್ ಕಾರಣವಾಗಿದೆ. ಹಾಗಾಗಿ ಇಲ್ಲಿಯ ಬಾರ್  ಮುಚ್ಚುವಂತೆ ನೆಟ್ಟಣ ಆದಿನೆಲೆ ಕೊರಗ ಕಾಲೋನಿಯ ಕೊರಗ ಸಮುದಾಯದ ಜನ ಒಕ್ಕೊರಲಿನಿಂದ ಆಗ್ರಹಿಸಿದ್ದಾರೆ.
ನೆಟ್ಟಣದಲ್ಲಿ ಬುಧವಾರ ಸುದ್ದಿಗೋಷ್ಠಿಯಲ್ಲಿ ಪುತ್ತೂರು ತಾಲೂಕು ಆದಿನೆಲೆ ಕಾಲೋನಿಯ ಕೊರಗ ಸಮುದಾಯದ ಅಧ್ಯಕ್ಷ ಶಂಕರ್ ಮಾತನಾಡಿ, ಇಲ್ಲಿಯ ಬಾರ್‌ನಿಂದ ನಮ್ಮ ಸಮುದಾಯದ ಜನರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗುತ್ತಿವೆ. ನಮ್ಮ ಕಾಲೋನಿಯ 2 ಜೀವಗಳು ವ್ಯಸನಕ್ಕೆ ಬಲಿಯಾಗಿದ್ದಾರೆ.
ಮತ್ತೆ ಹಾಗಾಗಬಾರದು. ಈ ಬಾರ್‌ನಲ್ಲಿ ನಿತ್ಯ ಗಲಾಟೆ ನಡೆಯುತ್ತಿದೆ.  ಇವರ ಮನೆ ಮಂದಿ ನೆಮ್ಮದಿ ಕಳಕೊಂಡು ಭೀತಿಗೆ ಒಳಗಾಗಿದ್ದಾರೆ.ಮಕ್ಕಳು ಮಹಿಳೆಯರು ಆತಂಕದಿಂದ ಕಾಲ ಕಳೆಯುತ್ತಿದ್ದಾರೆ. ಹಾಗಾಗೀ ಇಲ್ಲಿಯ ಬಾರ್ ಮುಚ್ಚುವಂತೆ ಅವರು ಆಗ್ರಹಿಸಿದರು.
ಕಾಲೋನಿಯ ಶ್ರೀನಾಥ್ ಕೊರಗ, ಲಲಿತಾ, ಬಾಬು ಕೊರಗ, ಚನಿಯ, ರುಕ್ಮಿಣಿ, ಬಾಗಿ, ಹೇಮಲತಾ, ಸೀತಾ, ಮಾಂಕು ಇದ್ದರು.
ಈ ಕಾಲನಿಯಲ್ಲಿ ಕೊರಗ ಸಮುದಾಯದ 11 ಮನೆ ಇದ್ದು 50 ಮಂದಿ ವಾಸ್ತವ್ಯ ಹೊಂದಿದ್ದಾರೆ.
ಬಾರ್ ಮುಚ್ಚುವಂತೆ ಒತ್ತಾಯ: ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ, ಜನಜಾಗೃತಿ ವೇದಿಕೆ, ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ನೆಟ್ಟಣ, ಸಂಘ ಸಂಸ್ಥೆಗಳು, ಆದಿನೆಲೆ ಕೊರಗ ಕಾಲೋನಿಯವರು, ಬಿಳಿನೆಲೆ ಗ್ರಾಮಸ್ಥರು ನೆಟ್ಟಣ ಬಾರ್ ಮುಚ್ಚುವಂತೆ ಗ್ರಾಮ ಪಂಚಾಯಿತಿಗೆ ಮಂಗಳವಾರ ಮನವಿ ಸಲ್ಲಿಸಿ, ಒತ್ತಾಯಿಸಿದ್ದಾರೆ.  

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.