ಹಾಸ್ಟೆಲ್ ವಿದ್ಯಾರ್ಥಿನಿಯರ ಮತದಾನಕ್ಕೆ ಆಕ್ಷೇಪ
ಮಂಗಳೂರು: ನಗರದ ಬಂದರು ವಾರ್ಡ್ನ ಬದ್ರಿಯಾ ಮತಗಟ್ಟೆಯಲ್ಲಿ ನರ್ಸಿಂಗ್ ಕಾಲೇಜು ವಿದ್ಯಾರ್ಥಿನಿಯರು ಕಾಲೇಜ್ ಬಸ್ನಲ್ಲಿ ಬಂದು ಮತ ಚಲಾಯಿಸಲು ಬಂದಿರುವುದು ಗಲಾಟೆಗೆ ಕಾರಣವಾಯಿತು. ರಾಜಕೀಯ ಪಕ್ಷದ ಕಾರ್ಯಕರ್ತರು ಪರವೂರಿನ ವಿದ್ಯಾರ್ಥಿಗಳು ಬಸ್ನಲ್ಲಿ ಬಂದಿರುವುದು ನಕಲಿ ಮತದಾನ ಮಾಡಲು ಎಂಬುದು ಅವರ ಆರೋಪ.
ಹಾಸ್ಟೆಲ್ನಲ್ಲಿರುವರಿಗೂ ಮತದಾರ ಪಟ್ಟಿಯಲ್ಲಿ ನೋಂದಣಿ ಮಾಡಲು ಅವಕಾಶ ಇದೆ. ವಿದ್ಯಾರ್ಥಿಗಳ ಬಳಿ ಗುರುತು ಚೀಟಿ ಇತ್ತು, ಮತಪಟ್ಟಿಯಲ್ಲಿ ಹೆಸರೂ ಇತ್ತು. ಆದ್ದರಿಂದ ಮತದಾನಕ್ಕೆ ಚುನಾವಣೆ ಅಧಿಕಾರಿ ಅವಕಾಶ ನೀಡಿದರು. ಆದರೆ ಸ್ಥಳೀಯರು ಮತದಾನಕ್ಕೆ ತಡೆ ಒಡ್ಡಿದಾಗ ಹೆಚ್ಚಿನ ಪೊಲೀಸರನ್ನು ಕರೆಸಿ ಮತದಾನ ಅವಕಾಶ ನೀಡಲಾಯಿತು.
ಅಧಿಕಾರಿಗಳ ಸ್ಪಷ್ಟನೆ: ಪರವೂರಿನ ವಿದ್ಯಾರ್ಥಿಗಳು ಆರು ತಿಂಗಳುಗಳ ಕಾಲ ಯಾವುದೇ ಪ್ರದೇಶದಲ್ಲಿ ವಾಸವಾಗಿದ್ದರೆ ಅಲ್ಲಿ ಮತದಾರರ ಪಟ್ಟಿಯಲ್ಲಿ ಹೆಸರು ಸೇರ್ಪಡೆ ಮಾಡಬಹುದು. ಅದೇ ರೀತಿ ಮಂಗಳೂರಿನಲ್ಲಿ ಹಾಸ್ಟೆಲ್ ವಿದ್ಯಾರ್ಥಿಗಳ ಹೆಸರು ನೋಂದಾಯಿಸಲಾಗಿದೆ. ಒಂದು ವೇಳೆ ಬೇರೆ ರಾಜ್ಯ ಅಥವಾ ಮೊದಲಿದ್ದ ಮತದಾರರ ಪಟ್ಟಿಯಲ್ಲಿ ಇದೇ ಮತದಾರರು ಹೆಸರು ಹೊಂದಿದ್ದರೆ ಅದು ಅಲ್ಲಿನ ಅಧಿಕಾರಿಗಳು ತೆಗೆಯಬೇಕಾದ ಅಂಶ. ಯಾಕೆಂದರೆ ಒಂದು ಪ್ರದೇಶದಲ್ಲಿ 6 ತಿಂಗಳಿಗಿಂತ ಹೆಚ್ಚು ಕಾಲ ಮತದಾರ ವಾಸವಿಲ್ಲದಿದ್ದರೆ ಅವರ ಹೆಸರು ತೆಗೆಯಬೇಕು ಎಂಬ ನಿಯಮ ಇದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಘರ್ಷಣೆ: ಕುದ್ರೋಳಿ ವಾರ್ಡ್ನಲ್ಲಿ ಅಣ್ಣ, ತಮ್ಮಂದಿರು ಸ್ಪರ್ಧಿಸುತ್ತಿದ್ದು, ಅವರ ಗೆಲವಿಗಾಗಿ ಎರಡು ಪಕ್ಷದ ಕಾರ್ಯಕರ್ತರು ಸಣ್ಣ, ಪುಟ್ಟ ವಿಚಾರಕ್ಕೆ ಘರ್ಷಣೆ ನಡೆಸಿದ್ದಾರೆ. ಕುದ್ರೋಳಿ ವಾರ್ಡ್ನಲ್ಲಿ ಜೆಡಿಎಸ್ನಿಂದ ಅಝೀಝ್ ಕುದ್ರೋಳಿ, ಬಿಜೆಪಿಯಿಂದ ಅಝೀಜ್ ತಮ್ಮ ಅನ್ವರ್ ಹುಸೇನ್ ಸ್ಪರ್ಧಿಸುತ್ತಿದ್ದಾರೆ. ಸಂಶುದ್ದೀನ್ ಕಾಂಗ್ರೆಸ್ ಅಭ್ಯರ್ಥಿ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

