ಡಾ. ಹೆಗ್ಗಡೆಗೆ ಜೀವಮಾನ ಸಾಧನಾ ಪ್ರಶಸ್ತಿ
ಕ.ಪ್ರ.ವಾರ್ತೆ ಬೆಳ್ತಂಗಡಿ ಮಾ. 9
ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆಯವರಿಗೆ ಕಾರ್ಪೊರೇಷನ್ ಬ್ಯಾಂಕ್ ಸ್ಥಾಪಿಸಿದ ಜೀವಮಾನ ಸಾಧನಾ ಪ್ರಶಸ್ತಿಯನ್ನು ಶನಿವಾರ ಧರ್ಮಸ್ಥಳದಲ್ಲಿ ನೀಡಿ ಗೌರವಿಸಲಾಯಿತು.
ಪ್ರಶಸ್ತಿ ಸ್ವೀಕರಿಸಿ ಮಾತನಾಡಿದ ಡಾ. ಹೆಗ್ಗಡೆ, ಧರ್ಮಸ್ಥಳ ಕ್ಷೇತ್ರ ಹಾಗೂ ಬ್ಯಾಂಕ್ನ ಸಂಬಂಧ ಅವಿನಾಭಾವವಾದದ್ದು. ಹೆಚ್ಚು ಪ್ರಚಾರವಿಲ್ಲದೆ ಬೆಳೆದ ಬ್ಯಾಂಕ್ ಇದು. ಇತ್ತೀಚೆಗೆ ಹಲವಾರು ಪ್ರಶಸ್ತಿಗಳು ಸಿಗುತ್ತಿವೆ. ಕಳೆದ 45 ವರ್ಷಗಳಲ್ಲಿ ಮಾಡಿದ ಜನಸೇವೆಗೆ ಈಗ ಫಲ ನೀಡುತ್ತಾ ಬಂದಿದೆ ಎಂದು ಅನಿಸುತ್ತಿದೆ. ಪ್ರಶಸ್ತಿ ನನ್ನೊಬ್ಬನದೇ ಅಲ್ಲ. ನನ್ನೊಂದಿಗೆ ಕೆಲಸ ಮಾಡುವ ಸುಮಾರು 20 ಸಾವಿರ ಸಿಬ್ಬಂದಿ ವರ್ಗದವರದ್ದು ಎಂದರು.
ಬೆಳಗಾವಿಯಲ್ಲಿ ಹದಿನೈದು ಸಾವಿರ ಮತ್ತು ತುಮಕೂರಿನಲ್ಲಿ ಮೂವತ್ತೈದು ಸಾವಿರ ಸ್ವಸಹಾಯ ಸಂಘಗಳಿಗೆ ಕಾರ್ಪೊರೇಷನ್ ಬ್ಯಾಂಕ್ನ ಮೂಲಕ ಸುಮಾರು 200 ಕೋಟಿ ಸಾಲದ ಸವಲತ್ತನ್ನು ನೀಡಲಾಗಿದೆ. ಈ ಹಿಂದೆ ಬ್ಯಾಂಕ್ನವರು ಡಿಪಾಸಿಟ್ ಕೇಳಿ ಬರುತ್ತಿದ್ದರು. ಆದರೀಗ ಸಾಲ ನೀಡಲು ಬರುತ್ತಿದ್ದಾರೆ. ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಇನ್ನೂ 5 ಜಿಲ್ಲೆಗಳಿಗೆ ವಿಸ್ತರಿಸುವ ಯೋಜನೆ ಹೊಂದಿದೆ. ರಾಜ್ಯದ ರಾಯಚೂರು, ಬಾಗಲಕೋಟೆ, ಮಂಡ್ಯ, ಬಳ್ಳಾರಿ ಮತ್ತು ಹಾಸನ ಜಿಲ್ಲೆಗಳಲ್ಲಿ ಸುಮಾರು 7.5 ಲಕ್ಷ ಸದಸ್ಯರು ಸೇರ್ಪಡೆಗೊಳ್ಳಲಿದ್ದಾರೆ. ಇದು ಮುಂದಿನ ಒಂದೂವರೆ ವರ್ಷಗಳಲ್ಲಿ ನಡೆಯಲಿದೆ ಎಂದರು.
ಬ್ಯಾಂಕಿನ ಅಧ್ಯಕ್ಷ ಅಜಯಕುಮಾರ್ ಅವರು ಈ ವರ್ಷದಿಂದ ಜೀವಮಾನ ಸಾಧನೆ ಮಾಡಿದವರನ್ನು ಗುರುತಿಸಿ ಪ್ರಶಸ್ತಿ ನೀಡುವ ಪರಿಪಾಠವನ್ನು ಬ್ಯಾಂಕ್ ಆರಂಭಿಸಿದೆ. ಮೊದಲ ಪ್ರಶಸ್ತಿಯನ್ನು ಈ ಬಾರಿ ಡಾ. ಹೆಗ್ಗಡೆಯವರಿಗೆ ನೀಡುತ್ತಿದ್ದೇವೆ ಎಂದರು. ಬ್ಯಾಂಕ್ನ ಕಾರ್ಯನಿರ್ವಾಹಕ ನಿರ್ದೇಶಕ ಶ್ರೀವಾಸ್ತವ ಬಿ.ಕೆ. ವಂದಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

