ದಕ್ಷಿಣ ಕನ್ನಡ

ಗಾಂಜಾ ಅಕ್ರಮ ಸಾಗಾಟ: ಇಬ್ಬರ ಬಂಧನ, ಕಾರು ವಶ

Published On :

ಪುತ್ತೂರು: ಗಾಂಜಾ ಅಕ್ರಮ ಸಾಗಾಟ ಪ್ರಕರಣವೊಂದನ್ನು ಪುತ್ತೂರು ನಗರ ಪೊಲೀಸರು ತಾಲೂಕು ದಂಡಾಧಿಕಾರಿಯವರ ಉಪಸ್ಥತಿಯಲ್ಲಿ ಸೋಮವಾರ ಪುತ್ತೂರು ಪೇಟೆಯ ಹೊರವಲಯದ ಹಾರಾಡಿ ರೈಲ್ವೇ ಸೇತುವೆಯ ಬಳಿ ಪತ್ತೆ ಮಾಡಿ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ.
ಚಿಕ್ಕಮಗಳೂರು ಜಿಲ್ಲೆಯ ಬಸವನಹಳ್ಳಿ ನಿವಾಸಿ ರಾಘವೇಂದ್ರ (23) ಮತ್ತು ಪುತ್ತೂರು ಪೇಟೆಯ ಹೊರವಲಯದ ಮುಕ್ರಂಪಾಡಿ ಬಿರುಮಲೆ ಬೆಟ್ಟ ರಸ್ತೆ ನಿವಾಸಿ ರಿಝ್ವಾನ್ (23) ಬಂಧಿತ ಆರೋಪಿಗಳು.
ಆರೋಪಿಗಳು ಕಾರೊಂದರಲ್ಲಿ ಉಪ್ಪಿನಂಗಡಿ ಕಡೆಯಿಂದ ಪುತ್ತೂರು ಕಡೆಗೆ ಗಾಂಜಾ ಸಾಗಾಟ ಮಾಡುತ್ತಿರುವ ಕುರಿತು ಪುತ್ತೂರು ನಗರ ಠಾಣೆಯ ಸಬ್ ಇನ್ಸ್‌ಪೆಕ್ಟರ್ ರಫೀಕ್ ಅವರಿಗೆ ಮಾಹಿತಿ ಲಭಿಸಿತ್ತು. ಈ ಮಾಹಿತಿಯ ಹಿನ್ನೆಲೆಯಲ್ಲಿ ಪೊಲೀಸರು ತಾಲೂಕು ದಂಡಾಧಿಕಾರಿ ಕುಳ್ಳೇ ಗೌಡ ಅವರ ಉಪಸ್ಥತಿಯಲ್ಲಿ ಪುತ್ತೂರು ಪೇಟೆಯ ಹೊರವಲಯದ ಹಾರಾಡಿ ರೈಲ್ವೇ ಸೇತುವೆ ಬಳಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸಿದ್ದಾರೆ.
ಪೊಲೀಸರು ರು. 10 ಸಾವಿರ ಮೌಲ್ಯದ 180 ಗ್ರಾಂ ಗಾಂಜಾ, ಆರೋಪಿಗಳಲ್ಲಿದ್ದ ಎರಡು ಮೊಬೈಲ್‌ಗಳನ್ನು  ಕಾರು ಸಮೇತ ವಶಪಡಿಸಿಕೊಂಡಿದ್ದಾರೆ. ವಶಪಡಿಸಿಕೊಳ್ಳಲಾದ ಸೊತ್ತುಗಳ ಒಟ್ಟು ಮೌಲ್ಯ ರು. 1.64 ಲಕ್ಷ ಎನ್ನಲಾಗಿದೆ. ಪುತ್ತೂರು ನಗರ ಠಾಣೆಯ ಸಿಬ್ಬಂದಿಯಾದ ಕುಮಾರ್, ಚಂದ್ರ, ಪುಟ್ಟಸೋಮಪ್ಪ ಮತ್ತು ಉಮೇಶ್ ಕಾರ್ಯಾಚರಣೆಯಲ್ಲಿದ್ದರು.
ಆರೋಪಿಗಳನ್ನು ಪೊಲೀಸರು ಸೋಮವಾರ ಸಂಜೆ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯ ಅವರಿಗೆ ನ್ಯಾಯಾಂಗ ಬಂಧನ ವಿಧಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.