ನೇಗಿಲ ಯೋಗಿಯೇ ಅನ್ನದ ಸಮಸ್ಯೆ ಎದುರಿಸಬೇಕಾದೀತು
ದಿ. ಮುಕ್ಕಾಟೀರ ಕರುಂಬಯ್ಯ ವೇದಿಕೆ (ಕುಟ್ಟ): ಸರ್ಕಾರ ರೈತರ ಸಮಸ್ಯೆಗಳ ಬಗ್ಗೆ ಶೀಘ್ರ ಗಮನ ನೀಡದೇ ಇದ್ದಲ್ಲಿ, ನೇಗಿಲ ಯೋಗಿ ತನ್ನ ನಾಡಿನಲ್ಲಿಯೇ ಅನ್ನದ ಸಮಸ್ಯೆ ಎದುರಿಸಬೇಕಾದೀತು ಎಂದು ಎಚ್ಚರಿಸಿರುವ ವಿರಾಜಪೇಟೆ ತಾಲೂಕು 5 ನೇ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ಕೇಚಮಾಡ ಸುಬ್ಬಮ್ಮ ತಿಮ್ಮಯ್ಯ, ಅಗತ್ಯ ಬೆಂಬಲ ಬೆಲೆ, ಸಬ್ಸಿಡಿ ರೂಪದ ಸಾಲದ ನೆರವನ್ನು ಫಲಾನುಭವಿ ಕೃಷಿಕನಿಗೆ ದೊರಕುವಂತೆ ಸರ್ಕಾರ ಗಮನ ಹರಿಸುವಂತೆ ಮನವಿ ಮಾಡಿದರು.
ಕನ್ನಡ ಸಾಹಿತ್ಯ ಮತ್ತು ಭಾಷೆಗೆ ಇಂದು ಕೊಂಚ ತಲ್ಲಣ ಉಂಟಾಗಿದೆ. ಇಂಗ್ಲಿಷ್ ಎಂಬ ಮಹಾ ಪಿಡುಗು ತನ್ನ ಕದಂಬ ಬಾಹುಗಳನ್ನು ಎಲ್ಲೆಡೆ ಚಾಚುತ್ತಿದೆ. ಇದರ ಕದಂಬ ಬಾಹುಗಳಿಗೆ ಕನ್ನಡದಂತೆ ನೂರಾರು ಪ್ರಾದೇಶಿಕ ಭಾಷೆಗಳು ಸೊರಗುವ ಹಂತಕ್ಕೆ ತಲುಪಿವೆ ಎಂದು ಆತಂಕ ವ್ಯಕ್ತಪಡಿಸಿದ ಕೇಚಮಾಡ ಸುಬ್ಬಮ್ಮ ತಿಮ್ಮಯ್ಯ ಜಾಗತೀಕರಣದಿಂದಾಗಿ ಆಂಗ್ಲ ಭಾಷೆಗೆ ಎಲ್ಲಿಲ್ಲದ ಪ್ರಾಧಾನ್ಯತೆ ಬಂದಿದೆ.
ಇದು ಗ್ರಾಮೀಣ ಪ್ರದೇಶಕ್ಕಿಂತ ನಗರ ಪ್ರದೇಶಗಳಲ್ಲಿ ಹೆಚ್ಚುತ್ತಲೇ ಇದೆ, ಇತ್ತೀಚೆಗೆ ಈ ಗಾಳಿ ಗ್ರಾಮೀಣ ಪ್ರದೇಶಕ್ಕೂ ಹಬ್ಬಿದೆ. ಪರಭಾಷೆಯ ವ್ಯಾಮೋಹದಿಂದ ಕಲ್ಪವೃಕ್ಷದಂತಿದ್ದ ಕನ್ನಡ ಶಾಲೆಗಳು ಸೊರಗುತ್ತಿವೆ. ನಮಗೆ ಅಗತ್ಯ ಇರಲಿ, ಇಲ್ಲದಿರಲಿ ಪರಭಾಷೆಯೇ ಬೇಕಾಗಿದೆ ಎಂಬ ಕುರುಡು ವ್ಯಾಮೋಹ ಅತಿಯಾಗಿದೆ ಎಂದು ವಿಷಾದಿಸಿದರು.
ಭಾಷೆ ನಾಶವಾದರೆ ಜನಾಂಗ ನಾಶವಾಗುತ್ತದೆ. ಜನಾಂಗ ನಾಶವಾದರೆ ನಾಡು ಅಳಿಯುತ್ತದೆ. ಇದರ ಬಗ್ಗೆ ಸ್ಪಷ್ಟವಾಗಿ ಯುವ ಜನಾಂಗಕ್ಕೆ ತಿಳಿಸಬೇಕು ಎಂದು ಕರೆ ನೀಡಿದ ಸಮ್ಮೇಳನಾಧ್ಯಕ್ಷೆ ಕೇಚಮಾಡ ಸುಬ್ಬಮ್ಮ ತಿಮ್ಮಯ್ಯ ಮನೆಗೊಂದು ಮರ, ಊರಿಗೊಂದು ವನ ಇರಲಿ ಎಂಬ ಘೋಷಣೆಯನ್ನು ಊರಿಗೊಂದು ಶಾಲೆ ಅದು ಕನ್ನಡ ಶಾಲೆ ಎಂಬ ಘೋಷಣೆಯನ್ನು ಮೊಳಗಿಸೋಣ.
ಸರ್ಕಾರಿ ಖಾಸಗಿ ಆಂಗ್ಲ ಶಾಲೆಗೆ ಕಡಿವಾಣ ಹಾಕಿ, ಸರ್ಕಾರಿ ಶಾಲೆಗಳ ಅಭಿವೃದ್ಧಿಯತ್ತ ಸರ್ಕಾರ ಜನರೊಂದಿಗೆ ಗಮನಹರಿಸಬೇಕೆಂದು ಸಲಹೆ ನೀಡಿದರು.
ನಾಡನ್ನು ಒಡೆಯುತ್ತಾ ಹೋದರೆ, ಬಳಿಕ ನೆರೆಹೊರೆ ರಾಜ್ಯಗಳೊಂದಿಗೆ ಸಂಘರ್ಷ ತಪ್ಪಿದ್ದಲ್ಲ. ಈಗಾಗಲೇ ನಾವು ತಮಿಳುನಾಡಿನ ವಿಷಯದಲ್ಲಿ ಪಾಠ ಕಲಿಯಬೇಕಾಗಿದೆ ಎಂದರು.
ಭಾರತದ ಪ್ರಜಾಪ್ರಭುತ್ವದ ಬಹುದೊಡ್ಡ ಅಣಕವೆಂದರೆ ಮತದಾರನೇ ಆಗಿದ್ದು, ಮತದಾರನೇ ಭ್ರಷ್ಟನಾಗಿರುವುದು. ಗುಣವಂತರನ್ನು, ಶೀಲವಂತರನ್ನು, ಪ್ರಾಮಾಣಿಕರನ್ನು ಆಯ್ಕೆ ಮಾಡಬೇಕಾದ ಮತದಾರರೇ ಹಣದ ಆಮಿಷಕ್ಕೆ ಬಲಿಯಾದರೆ ಇನ್ನೆಂತಹ ಪ್ರತಿನಿಧಿಗಳನ್ನು ಆಯ್ಕೆ ಮಾಡಲು ಸಾಧ್ಯ ಎಂದು ಸುಬ್ಬಮ್ಮ ತಿಮ್ಮಯ್ಯ ಪ್ರಶ್ನಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

