ಕಲ್ಮಕಾರು ತೋಟಗಳಲ್ಲಿ ಕಾಡಾನೆಗಳದ್ದೇ ಕಾರುಬಾರು
ಸುಬ್ರಹ್ಮಣ್ಯ: ಕಲ್ಮಕಾರು ಪರಿಸರದಲ್ಲಿ ಕಾಡಾನೆಗಳ ಹಾವಳಿ ತೀವ್ರವಾಗಿ ಕಂಡು ಬಂದಿದೆ. ಕಳೆದ ಹಲವಾರು ದಿನಗಳಿಂದ ಕೃಷಿ ತೋಟಗಳಿಗೆ ನಿರಂತರ ದಾಳಿಯಿಡುತ್ತಿರುವ ಕಾಡಾನೆಗಳು ತೋಟಗಳನ್ನು ಧ್ವಂಸ ಮಾಡುತ್ತಿವೆ. ಇಲ್ಲಿಯ ಕೊಪ್ಪಡ್ಕ ಎಂಬಲ್ಲಿ ಕೆಲವು ದಿನಗಳಿಂದ ಕಾಡಾನೆಗಳ ಹಿಂಡು ನಿರಂತರವಾಗಿ ರೈತರ ಕೃಷಿ ತೋಟಗಳಿಗೆ ನುಗ್ಗಿ ತೋಟಗಳನ್ನು ಪುಡಿಪುಡಿ ಮಾಡಿವೆ. ಮಂಗಳವಾರ ಕೊಪ್ಪಡ್ಕ ಎಂಬಲ್ಲಿ ಚಂದ್ರಶೇಖರ ಎಂಬವರ ತೋಟಕ್ಕೆ ನುಗ್ಗಿದ ಕಾಡಾನೆಗಳ ಹಿಂಡು 15 ತೆಂಗು, 100 ಅಡಕೆಮರ ಹಾಗೂ ಬಾಳೆಗಿಡಗಳನ್ನು ಎಳೆದಾಡಿ ತಿಂದು ಸರ್ವನಾಶ ಮಾಡಿದೆ. ಇದೇ ದಿನ ಜಯಕುಮಾರ್ ಕೊಪ್ಪಡ್ಕ ಎಂಬವರ ತೋಟಕ್ಕೆ ದಾಳಿ ನಡೆಸಿ 15 ತೆಂಗು, 40 ಅಡಕೆ ಮರ, 200 ಬಾಳೆ ಗಿಡಗಳನ್ನು ನಾಶಗೊಳಿಸಿದೆ. ಶುಭಕರ ಕೆಮ್ಮಮನೆ ಎಂಬವರ ತೋಟದಲ್ಲಿನ 8 ಫಲಭರಿತ ತೆಂಗಿನಮರ, 30 ಅಡಕೆಮರ, ಸುಮಾರು 50 ಬಾಳೆಗಿಡಗಳನ್ನು ನಾಶಗೊಳಿಸಿದೆ. ಅಲ್ಲದೆ ಭವಾನಿಶಂಕರ ಕೊಪ್ಪಡ್ಕ ಎಂಬವರ ತೋಟದಲ್ಲಿ 15 ತೆಂಗು, 30 ಕಂಗು ಹಾಗೂ 50 ಬಾಳೆಗಿಡಗಳನ್ನು ಧ್ವಂಸಗೊಳಿಸಿದೆ.
ಪಾರಾದ ಯುವಕ: ಸುಬ್ರಹ್ಮಣ್ಯ ಸಮೀಪದ ದೇವರಗದ್ದೆಯ ನಿವಾಸಿ ಪುತ್ರ ಮುಗೇರ ಎಂಬವರ ಪುತ್ರ ವಸಂತ(24) ಎಂಬವರು ಗಿರಿಗದ್ದೆಯಲ್ಲಿ ಕೆಲಸ ನಿರ್ವಹಿಸಿ ಮತ್ತೆ ಸುಬ್ರಹ್ಮಣ್ಯಕ್ಕೆ ಹಿಂದಿರುಗುವಾಗ ಬಿದಿರು ಮಲೆ ಎಂಬಲ್ಲಿ ಕಾಡಾನೆಗಳ ದಾಳಿಯಿಂದ ಪಾರಾಗಿದ್ದಾರೆ. ದಾರಿಯಲ್ಲಿ ಎದುರಾದ ಆನೆಗಳು ವಸಂತ ಅವರನ್ನು ಅಟ್ಟಿಸಿಕೊಂಡು ಬಂತು. ಆನೆಗಳಿಂದ ತಪ್ಪಿಸಿಕೊಳ್ಳಲು ಪ್ರಯತ್ನಿಸುವ ಸಂದರ್ಭ ವಸಂತ ಆಯತಪ್ಪಿ ಬಿದ್ದು, ಗಾಯಗೊಂಡರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

