ಉಪ್ಪಿನಂಗಡಿ: ಇಂದು ಮಹಾಕಾಳಿ ಮೆಚ್ಚಿ ಜಾತ್ರೆ
ಉಪ್ಪಿನಂಗಡಿ: ಇಲ್ಲಿನ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದ ಮಹಾಕಾಳಿ ಮೆಚ್ಚಿ ಶುಕ್ರವಾರ ರಾತ್ರಿ ನಡೆಯಲಿದೆ. ಭಕ್ತ ವತ್ಸಲಾ ಹಾಗೂ ಕಾರ್ಣಿಕದ ಕ್ಷೇತ್ರವೆಂದೇ ಪ್ರಸಿದ್ಧಿ ಪಡೆದಿರುವ ಮಹಾಕಾಳಿ ದೇವಿಯ ವರ್ಷಾವಧಿ ನೇಮವಿದಾಗಿದ್ದು, ಶ್ರೀ ದೇಗುಲದಲ್ಲಿ ಕುಂಕುಮಾರ್ಚನೆ, ಮಲ್ಲಿಗೆ ಪುಷ್ಪಾರ್ಚನೆ, ಮೊದಲಾದ ಸೇವೆಗಳು ಭಕ್ತರಿಂದ ನಡೆಯಲಿದೆ. ನೇಮೋತ್ಸವದ ಪೂರ್ವಭಾವಿ ತಯಾರಿಕಾ ಕಾರ್ಯ ಪರಂಪರಾಗತವಾಗಿ ರಥಬೀದಿಯಲ್ಲಿರುವ ಶ್ರೀ ದೇವಿ ಕಟ್ಟೆಯಲ್ಲಿ ನಡೆಯುತ್ತಿದೆ. ನೇಮೋತ್ಸವದ ಅಂಗವಾಗಿ ಕ್ಷೇತ್ರದ ಸಹಸ್ರ ಭಕ್ತ ವೃಂದ ಉಪ್ಪಿನಂಗಡಿ ಇದರ ಸೇವಾ ರೂಪದಲ್ಲಿ ಸಾಂಸ್ಕ್ಛತಿಕ ಕಾರ್ಯಕ್ರಮ, ಅನ್ನ ಸಂತರ್ಪಣೆಯೂ ನಡೆಯಲಿದೆ ಎಂದು ದೇವಳ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಜಯಮ್ಮ ತಿಳಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

