ಉಪ್ಪಿನಂಗಡಿಯಲ್ಲಿ ಮಹಾಕಾಳಿ ಮೆಚ್ಚಿ
ಉಪ್ಪಿನಂಗಡಿ : ಇತಿಹಾಸ ಪ್ರಸಿದ್ಧ ಉಪ್ಪಿನಂಗಡಿಯ ಸಹಸ್ರಲಿಂಗೇಶ್ವರ ಮಹಾಕಾಳಿ ದೇವಾಲಯದಲ್ಲಿನ ಮಹಾಕಾಳಿ ಮೆಚ್ಚಿಯು(ಜಾತ್ರೆ) ಭಾರಿ ಸಂಖ್ಯೆಯ ಭಕ್ತರ ಪಾಲ್ಗೊಳ್ಳುವಿಕೆಯಲ್ಲಿ ಶುಕ್ರವಾರ ಭಕ್ತಿ ಸಡಗರದೊಂದಿಗೆ ನಡೆಯಿತು.
ಪರಂಪಾರಗತವಾಗಿ ಭೂತನರ್ತನ ಪರಂಪರೆಯ ಕುಟುಂಬದ ಸದಸ್ಯರು ಕಳೆದ ನಡು ಮಖೆಯ ಆರಂಭದಿಂದ ಉಪ್ಪಿನಂಗಡಿಯ ರಥಬೀದಿಯಲ್ಲಿನ ಕಟ್ಟೆಯಲ್ಲಿ ವಾಸ್ತವ್ಯ ಹೂಡಿ ಮಹಾಕಾಳಿ ನೇಮದಲ್ಲಿ ಬಳಕೆಯಾಗುವ ಅಡಿಕೆ ಹಾಳೆಗಳಿಂದ ಸಿರಿ ಮುಡಿ ರಚಿಸಿದ್ದನ್ನು ಬಳಸಿ ಬೃಹತ್ ಅಣಿ ಸಿದ್ಧಪಡಿಸಲಾಗಿತ್ತು. ಈ ಅಣಿಗೆ ಭಕ್ತರು ಮಲ್ಲಿಗೆ ಹೂ ಮಾಲೆಯನ್ನು ಅರ್ಪಿಸುವ ಮೂಲಕ ಪೂಜಿಸಿದರು. ಶುಕ್ರವಾರ ದಿನವಿಡೀ ಅಸಂಖ್ಯಾತ ಭಕ್ತರು ದೇಗುಲಕ್ಕೆ ಆಗಮಿಸಿ ವಿವಿಧ ಪೂಜಾ ಕಾರ್ಯವನ್ನು ನೆರವೇರಿಸಿದರು. ರಾತ್ರಿ ವೇಳೆ ನಿರೀಕ್ಷೆಯನ್ನು ಮೀರಿ ಭಕ್ತರ ಆಗಮನವಾಗಿದ್ದು, ದೇಗುಲದಲ್ಲಿ ತಡ ರಾತ್ರಿವರೆಗೆ ಭಕ್ತರಿಗೆ ಅನ್ನ ಸಂತರ್ಪಣೆಯು ನಡೆಯಿತು. ಹಾಗೂ ದೇಗುಲದ ಭಕ್ತವೃಂದದ ಆಶ್ರಯದಲ್ಲಿ ಧಾರ್ಮಿಕ ಸಭೆ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಇದೇ ಕಾರ್ಯಕ್ರಮದಲ್ಲಿ ಸಾಧಕರ ಸನ್ಮಾನ ಕಾರ್ಯಕ್ರಮವೂ ನಡೆದಿತ್ತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

