ಕಸ ಗುಡಿಸುವ ದೈತ್ಯ ಯಂತ್ರ ಅರ್ಪಣೆ
ಮಂಗಳೂರು: ಸ್ವಚ್ಛತೆ ಬಗ್ಗೆ ವಿಶೇಷ ಗಮನ ಹರಿಸಿರುವ ಮಹಾನಗರ ಪಾಲಿಕೆ 57 ಲಕ್ಷ ವೆಚ್ಚದಲ್ಲಿ ಕಸಗುಡಿಸುವ ಯಂತ್ರವನ್ನು ಖರೀದಿಸಿದೆ. ಜಿಲ್ಲಾಧಿಕಾರಿ ಎನ್.ಪ್ರಕಾಶ್ ಯಂತ್ರವನ್ನು ನಾಗರಿಕರ ಸೇವೆಗೆ ಅರ್ಪಿಸಿದರು.
ಮೂರು ಕಡೆ ಬ್ರಶ್ಗಳು ಮತ್ತು ಮಧ್ಯಭಾಗದಲ್ಲಿ ವ್ಯಾಕ್ಯೂಮ್ ಹೊಂದಿರುವ ಶಕ್ತಿಶಾಲಿ ಯಂತ್ರದಲ್ಲಿ ನೀರು ಚಿಮುಕಿಸುವ ವ್ಯವಸ್ಥೆಯೂ ಇದೆ. 2.5 ಮೀಟರ್ ಅಗಲದ ರಸ್ತೆಯನ್ನು ಒಂದು ಗಂಟೆಯಲ್ಲಿ 10ರಿಂದ 12 ಕಿ.ಮೀ.ವರೆಗೆ ಸ್ವಚ್ಛಗೊಳಿಸುವ ಸಾಮರ್ಥ್ಯ ಹೊಂದಿದೆ. ಒಂದು ಗಂಟೆಗೆ 7ರಿಂದ 8 ಲೀ. ಇಂಧನ ವ್ಯಯವಾಗಲಿದೆ. ಮಣ್ಣಗುಡ್ಡ, ಕೋರ್ಟ್ ವಾರ್ಡ್ಗಳನ್ನು ಪೈಲಟ್ ಪ್ರಾಜೆಕ್ಟ್ ಆಯ್ಕೆ ಮಾಡಿರುವ ಪಾಲಿಕೆ ಅಲ್ಲಿಗೆ 7800 ತ್ಯಾಜ್ಯ ಸಂಗ್ರಹ ಹಳದಿ ಮತ್ತು ಹಸಿರು ತೊಟ್ಟಿಗಳನ್ನು ವಿತರಿಸಿದೆ.
'ಕಸ ವಿಲೇವಾರಿ ಮಾಡುವಾಗ ನಾಗರಿಕರು ಸಹಕರಿಸುವುದು ಅಗತ್ಯ. ಹಸಿ ಮತ್ತು ಒಣ ಕಸವನ್ನು ಪ್ರತ್ಯೇಕಿಸಿ ನೀಡುವುದರಿಂದ ತ್ಯಾಜ್ಯ ವಿಲೇವಾರಿ ಸುಲಭವಾಗಲಿದೆ' ಎಂದು ಜಿಲ್ಲಾಧಿಕಾರಿ ಪ್ರಕಾಶ್ ಹೇಳಿದರು. ದೇಶದ ಬೇರೆಡೆ ಈ ಅಧುನಿಕ ಮಾದರಿಯ ಕಸ ಸಂಗ್ರಹ ವ್ಯವಸ್ಥೆ ಅಷ್ಟೇನು ಯಶಸ್ವಿಯಾಗಿಲ್ಲ, ಆದರೆ ಹೆಚ್ಚಿನ ಜಾಗೃತಿ ಇರುವ ಮಂಗಳೂರಲ್ಲಿ ಯಶಸ್ವಿಯಾಗಬಹುದು ಎಂದರು.
ಮಹಾನಗರ ಪಾಲಿಕೆ ಆಯುಕ್ತ ಡಾ.ಹರೀಶ್ ಕುಮಾರ್ ಮಾತನಾಡಿ, ಮಹಾ ನಗರಪಾಲಿಕೆ ಸ್ವಾವಲಂಬಿಯಾಗುವ ನಿಟ್ಟಿನಲ್ಲಿ ಕಸಗುಡಿಸುವ ಯಂತ್ರ ಖರೀದಿಸಲಾಗಿದೆ. ಕಾರ್ಮಿಕರ ಅಸಹಕಾರದ ವೇಳೆಯಲ್ಲಿ ಈ ಯಂತ್ರ ಪಾಲಿಕೆಗೆ ವರದಾನವಾಗಲಿದೆ ಎಂದರು. ಕಾಂಕ್ರಿಟ್ ರಸ್ತೆಗಳಲ್ಲಿ ಅತ್ಯಂತ ಸುಲಲಿತವಾಗಿ ಕಸ ಗುಡಿಸಲು ಈ ಯಂತ್ರದಿಂದ ಸಾಧ್ಯವಾಗಲಿದೆ ಎಂದರು. ಜಂಟಿ ಆಯುಕ್ತ ಶ್ರೀಕಾಂತ್ ರಾವ್, ವಲಯ ಆಯುಕ್ತರಾದ ಪ್ರಮೀಳಾ ಇದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

