ಮೊರಾರ್ಜಿ ಶಾಲೆ ಪ್ರವೇಶ: ಇಂದು ಉಚಿತ ತರಬೇತಿ
ಮಂಗಳೂರು: ಜಿಲ್ಲಾ ಮೊರಾರ್ಜಿ ದೇಸಾಯಿ ಶಾಲೆಯ 6ನೇ ತರಗತಿ ಪ್ರವೇಶ ಪರೀಕ್ಷೆಯ ಉಚಿತ ತರಬೇತಿ 17 ರಂದು ಬೆಳಗ್ಗೆ 10 ರಿಂದ ಸಂಜೆ 4ರ ವರೆಗೆ ಜಿಲ್ಲೆಯ ವಿವಿಧೆಡೆ ನಡೆಯಲಿದೆ.
ಪರೀಕ್ಷೆ ನಡೆಯುವ ಸ್ಥಳಗಳು: ಮಂಗಳೂರು- ಕುದ್ಮಲ್ ರಂಗರಾವ್ ವಿದ್ಯಾರ್ಥಿನಿ ನಿಲಯ, ಪಿವಿಎಸ್, ಬಂಟ್ವಾಳ- ಮೊರಾರ್ಜಿ ದೇಸಾಯಿ ವಸತಿ ಶಾಲೆ ವಗ್ಗ, ಪುತ್ತೂರು- ಡಾ. ಶಿವರಾಮ ಕಾರಂತ ಸರ್ಕಾರಿ ಪ್ರೌಢಶಾಲೆ, ಸುಳ್ಯ- ಸರ್ಕಾರಿ ಪದವಿಪೂರ್ವ ಕಾಲೇಜ್ ಗಾಂಧಿನಗರ, ಬೆಳ್ತಂಗಡಿ- ಸಂತ ತೆರಸಾ ಬಾಲಕಿಯರ ಪ್ರೌಢಶಾಲೆಯ ಪಕ್ಕದಲ್ಲಿರುವ ಬಾಲಕಿಯರ ವಸತಿ ನಿಲಯ. ಅರ್ಜಿ ಹಾಕಿದ ಎಲ್ಲಾ ವಿದ್ಯಾರ್ಥಿ, ವಿದ್ಯಾರ್ಥಿನಿಯರು ತರಬೇತಿಯ ಪ್ರಯೋಜನ ಪಡೆಯಬಹುದು. ಹೆಚ್ಚಿನ ಮಾಹಿತಿಗೆ- 9449944086.
ಕೆಪಿಟಿ ಕ್ಯಾಂಪಸ್ನಲ್ಲಿ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು
ಮಂಗಳೂರು: ಕೊನೆಗೂ ಎರಡು ವರ್ಷಗಳ ಪ್ರಯತ್ನದ ಫಲವಾಗಿ ಮಂಗಳೂರಿಗೆ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಮಂಜೂರಾಗಿದೆ. ಸದ್ಯ ಮಂಗಳೂರಿನ ಬಲ್ಮಠದಲ್ಲಿ ಪಿಯುಸಿ ಕಾಲೇಜಿನಲ್ಲಿ 850 ಹಾಗೂ ಕಾರ್ಸ್ಟ್ರೀಟ್ ವಿದ್ಯಾರ್ಥಿಯರ ಪಿಯು ಕಾಲೇಜಿನಲ್ಲಿ 750 ಮಂದಿ ಕಲಿಯುತ್ತಿದ್ದಾರೆ. ಆದರೆ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಇಲ್ಲದೆ ಡೊನೇಷನ್ ರಹಿತವಾಗಿ ಕಡಿಮೆ ಶುಲ್ಕದಲ್ಲಿ ಕಲಿಯಲು ಬಡ ವಿದ್ಯಾರ್ಥಿಗಳು ಬವಣೆ ಪಡುತ್ತಿದ್ದರು. ಈ ಹಿನ್ನಲೆಯಲ್ಲಿ ವಿಧಾನಸಭಾ ಉಪಸಭಾಪತಿ ಯೋಗೀಶ್ ಭಟ್ ಪ್ರಯತ್ನದಲ್ಲಿ ಇಲ್ಲಿಗೆ ಸರ್ಕಾರಿ ಎಂಜಿನಿಯರಿಂಗ್ ಕಾಲೇಜು ಮಂಜೂರಾಗಿದೆ. ಈ ಕಾಲೇಜು ಕೆಪಿಟಿ ಕ್ಯಾಂಪಸ್ನಲ್ಲಿ ತಲೆ ಎತ್ತಲಿದೆ. ಶನಿವಾರ ಬೆಂಗಳೂರಲ್ಲಿ ಸಚಿವ ಸಂಪುಟ ಸಭೆಯಲ್ಲಿ ಕಾಲೇಜು ಮಂಜೂರಾತಿಗೆ ಕಾರಣರಾದ ಉನ್ನತ ಶಿಕ್ಷಣ ಸಚಿವ ಸಿ.ಟಿ.ರವಿಗೆ ಯೋಗೀಶ್ ಭಟ್ ಕೃತಜ್ಞತೆ ವ್ಯಕ್ತಪಡಿಸಿದ್ದಾರೆ.
ಇಂದು ಕೃತಿ' ಬಿಡುಗಡೆ
ಮೂಡುಬಿದಿರೆ: ಇಲ್ಲಿನ ಮೂಡುವೇಣುಪುರ ಶ್ರೀ ವೆಂಕಟರಮಣ ದೇವಸ್ಥಾನ ಮತ್ತು ಶ್ರೀ ಹನುಮಂತ ದೇವಸ್ಥಾನದ ಇತಿಹಾಸ, ಜಿಎಸ್ಬಿ ಸಮಾಜದ ಅವಲೋಕನ ಕುರಿತ ಕೃತಿ 'ಮೂಡುವೇಣುಪುರದೊಡೆಯ' ಭಾನುವಾರ ಸಂಜೆ ಶ್ರೀ ಕಾಶೀಮಠಾಧೀಶ ಶ್ರೀಶ್ರೀಮದ್ ಸುಧೀಂದ್ರ ತೀರ್ಥ ಸ್ವಾಮೀಜಿ ಬಿಡುಗಡೆಗೊಳಿಸಲಿದ್ದಾರೆ. ಮಂಗಳೂರು ರಥಬೀದಿ ಶ್ರೀ ವೆಂಕಟರಮಣ ದೇವಸ್ಥಾನದ ಆವರಣದಲ್ಲಿ ಈ ಸಮಾರಂಭ ನಡೆಯಲಿದ್ದು, ಇದು ಮೂಡುಬಿದಿರೆಯ ಪತ್ರಕರ್ತ, ಬೆಂಜನಪದವು ಕೆನರಾ ಎಂಜಿನಿಯರಿಂಗ್ ಕಾಲೇಜಿನ ಆಡಳಿತಾಧಿಕಾರಿ ಎಂ. ಗಣೇಶ್ ಕಾಮತ್ರ ಚೊಚ್ಚಲ ಕೃತಿ.
ಇಂದು 'ಬಿಂದಾಸ್ ಜೀವನ'
ಮಂಗಳೂರು: ಶ್ರೀ ಪತಂಜಲಿ ಯೋಗ ಶಿಕ್ಷಣ ಸಮಿತಿ ವತಿಯಿಂದ ಮಾ. 17 ರಂದು ಕೊಡಿಯಾಲ್ಬೈಲ್ ಡಾ.ಜಿ.ಎಸ್. ಸ್ಮಾರಕ ವೃದ್ಧಾಶ್ರಮದಲ್ಲಿ ಬೆಳಗ್ಗೆ 10ಕ್ಕೆ ಮನೋವಿಜ್ಞಾನದ ಕುರಿತು 'ಬಿಂದಾಸ್ ಜೀವನ' ಕಾರ್ಯಕ್ರಮ ನಡೆಯಲಿದೆ. ಮಣಿಪಾಲ ಕೆ.ಎಂ.ಸಿ ಆಸ್ಪತ್ರೆಯ ನಿವೃತ್ತ ಉಪನ್ಯಾಸಕ ಡಾ.ಎಂ. ರಂಗನಾಥ್ ಕಾರ್ಯಕ್ರಮ ನಡೆಸಿಕೊಡುವರು. ಪರಿಪೂರ್ಣ ಜೀವನ, ಸರಳ ವಿಚಾರಗಳು, ರೋಗ, ಔಷಧ ಮುಕ್ತ ಸಹಜ ಜೀವನದ ಕುರಿತು ಉಪನ್ಯಾಸ ನೀಡುವರು. ಕಾರ್ಯಕ್ರಮ ಉಚಿತವಾಗಿದ್ದು, ಎಲ್ಲಾ ವಯೋವಾನದವರಿಗೂ ಅವಕಾಶವಿದೆ. ಹೆಚ್ಚಿನ ಮಾಹಿತಿಗೆ ಸಮಿತಿ ಅಧ್ಯಕ್ಷ ಕೆ.ಎನ್. ಶೆಟ್ಟಿ- 9845081232 ಸಂಪರ್ಕಿಸಬಹುದು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

