ವಿವಿಧೆಡೆ ವಿದ್ಯುತ್ ನಿಲುಗಡೆ
ಮಂಗಳೂರು: ಕುಂಜಿಬೆಟ್ಟು ಉಪಕೇಂದ್ರದಿಂದ ಹೊರಡುವ ಉಡುಪಿ ಮತ್ತು ಉದ್ಯಾವರ ಫೀಡರ್ಗಳಲ್ಲಿ ತುರ್ತು ಅಭಿವೃದ್ಧಿ ಕಾಮಗಾರಿಯನ್ನು ಹಮ್ಮಿಕೊಂಡಿರುವುದರಿಂದ ಮಾ.19 ಮತ್ತು 22ರಂದು ಬೆಳಗ್ಗೆ 9.30ರಿಂದ ಸಂಜೆ 5 ಗಂಟೆವರೆಗೆ ಈ ಕೆಳಗಿನ ಪ್ರದೇಶಗಲ್ಲಿ ವಿದ್ಯುತ್ ಕಡಿತಗೊಳಿಸಲಾಗುವುದು ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ. ಉಡುಪಿ ನಗರ ಪ್ರದೇಶಗಳಾದ ಕೃಷ್ಣಮಠ, ಚಿಟ್ಪಾಡಿ, ಒಳಕಾಡು, ಕೊಳಂಬೆ, ಮಿಷನ್ಕಾಂಪೌಂಡ್, ಶಾಂತಿನಗರ, ಕಿನ್ನಿಮೂಲ್ಕಿ, ಕೋರ್ಟ್ರಸ್ತೆ, ಕೆ.ಎಂ. ಮಾರ್ಗ, ಮಾರುತಿ ವೀಥಿಕ, ಬೈಲೂರು, ಉದ್ಯಾವರ, ಪಿತ್ರೋಡಿ, ಕಡೆಕಾರು ಹಾಗೂ ಸುತ್ತಮುತ್ತಲಿನ ಪ್ರದೇಶಗಲ್ಲಿ ಅಂದು ವಿದ್ಯುತ್ ಇರುವುದಿಲ್ಲ. ಅದೇ ರೀತಿ ನಿಟ್ಟೂರು ಉಪಕೇಂದ್ರದಿಂರ ಹೊರಡುವ ಅಂಬಲಪಾಡಿ ಫೀಡರ್ನಲ್ಲಿ ತುರ್ತು ನಿರ್ವಹಣೆಯ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಮಾ.21ರಂದು ಬೆಳಗ್ಗೆ 9.30ರಿಂದ ಸಂಜೆ 5.30ರವರೆಗೆ ಈ ಕೆಳಗಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ. ಅಂಬಲಪಾಡಿ, ಕಪ್ಪೆಟ್ಟು, ಬ್ರಹ್ಮಗಿರಿ, ಕಿನ್ನಿಮ್ಕಿ, ಕರ್ನಪಾಡಿ, ಹಳೆ ಉದ್ಯಾವರ ರಸ್ತೆ ಹಾಗೂ ಸುತ್ತಮುತ್ತಲಿನ ಪ್ರದೇಶಗಳು.
ಬಿಜೆಪಿಯಿಂದ ದಿಕ್ಕು ತಪ್ಪಿಸುವ ತಂತ್ರ: ಆರೋಪ
ಹೆಬ್ರಿ: ಸ್ಥಳೀಯ ಸಂಸ್ಥೆಗಳ ಚುನಾವಣೆಯಲ್ಲಿ ಆಗಿರುವ ಸೋಲಿನಿಂದ ಕಂಗಾಲಾದ ಬಿಜೆಪಿಯವರು, ಶಾಸಕ ಗೋಪಾಲ ಭಂಡಾರಿ ಮಾಡುತ್ತಿರುವ ಅಭಿವೃದ್ಧಿ ಕಾರ್ಯಗಳನ್ನು ಸಹಿಸಲಾಗದೆ ನಿರಂತರವಾಗಿ ಸುಳ್ಳು ಹೇಳಿ ಜನರನ್ನು ದಿಕ್ಕು ತಪ್ಪಿಸುವ ಕಾರ್ಯ ಮುಂದುವರಿಸಿದ್ದಾರೆ ಎಂದು ಹೆಬ್ರಿ ಕ್ಷೇತ್ರದ ಜಲ್ಲಾ ಪಂಚಾಯಿತಿ ಸದಸ್ಯ ಮಂಜುನಾಥ ಪೂಜಾರಿ ಆರೋಪಿಸಿದ್ದಾರೆ. ಅಲ್ಲದೆ, ನಕಲಿ ಸುದ್ದಿ ಪತ್ರಿಕೆಯನ್ನು ತಮಗೆ ಬೇಕಾದವರ ಮೂಲಕ ಮುದ್ರಿಸಿ ಬಿಜೆಪಿ ಸಭೆಯಲ್ಲಿ ಹಂಚಿ ಜನರಿಗೆ ತಪ್ಪು ಮಾಹಿತಿ ನೀಡಿದ್ದಾರೆ. ಮುಂದೆ ವಿಧಾನಸಭಾ ಚುನಾವಣೆಯಲ್ಲೂ ನಕಲಿ ಪತ್ರಿಕೆ ಹಂಚಿ ಜನರನ್ನು ಸೆಳೆಯಲು ಬಿಜೆಪಿಯ ನಾಯಕರು ಚಿಂತನೆ ಮಾಡಿದ್ದಾರೆ ಎಂದು ಅವರು ಪತ್ರಿಕಾ ಹೇಳಿಕೆಯಲ್ಲಿ ಆರೋಪಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

