ದಕ್ಷಿಣ ಕನ್ನಡ

ಮೊಯ್ಲಿ ವಿರುದ್ಧ ಸುನಿಲ್ ಆರೋಪ ಸುಳ್ಳು: ಭಂಡಾರಿ

Published On :

ಕಾರ್ಕಳ: ಕೇಂದ್ರ ಸಚಿವ ವೀರಪ್ಪ ಮೊಯ್ಲಿ ವಿರುದ್ಧ ಮಾಜಿ ಶಾಸಕ ಸುನಿಲ್ ಕುಮಾರ್ ಮಾಡಿರುವ ಆಪಾದನೆಗಳಿಗೆ ಕಾರ್ಕಳ ಶಾಸಕ ಗೋಪಾಲ ಭಂಡಾರಿ ಸ್ಪಷ್ಟೀಕರಣ ನೀಡಿದ್ದು ಆಪಾದನೆಗಳನ್ನು ಅಲ್ಲಗಳೆದಿದ್ದಾರೆ.
ಸುನಿಲ್ ಕುಮಾರ್ ಅವರು ವೀರಪ್ಪ ಮೊಯ್ಲಿಯವರ ಫ್ಯಾಮಿಲಿ ಟ್ರಸ್ಟ್ ಎಂದು ಹೇಳಿದ್ದಾರೆ, ಆದರೆ ಇದು ಫ್ಯಾಮಿಲಿ ಟ್ರಸ್ಟ್ ಅಲ್ಲ ಎಂಬುದಕ್ಕೆ ಸೂಕ್ತ ದಾಖಲೆ ಇದೆ ಎಂದು ಭಂಡಾರಿ ಹೇಳಿದ್ದಾರೆ.
ಈ ಟ್ರಸ್ಟ್ 1969ರಲ್ಲಿ ಪ್ರಾರಂಭವಾದ ಸಂಸ್ಥೆಯಾಗಿದ್ದು 1992ರಲ್ಲಿ ಟ್ರಸ್ಟ್ ಆಗಿ ಪರಿವರ್ತಿತವಾಗಿರುತ್ತದೆ.  ಈ ಟ್ರಸ್ಟ್ ಧರ್ಮಸ್ಥಳದ ಧರ್ಮಾಧಿಕಾರಿ ವೀರೇಂದ್ರ ಹೆಗ್ಗಡೆ ಸಹಿತ ಇತರ ಹಲವಾರು ಗಣ್ಯರಿಂದ ಹಣ ಪಡೆದು ಬಡ ಮಕ್ಕಳಿಗೆ ಉತ್ತಮ ಶಿಕ್ಷಣ ಉಚಿತವಾಗಿ ನೀಡಲಾಗುತ್ತಿದೆ.  ಪ್ರತಿವರ್ಷ ಶೇ.100 ಫಲಿತಾಂಶವನ್ನು ಈ ವಿದ್ಯಾರ್ಥಿಗಳು ತಂದಿರುತ್ತಾರೆ. ಈ ಶಿಕ್ಷಣ ಸಂಸ್ಥೆ ಸುಮಾರು 20 ವರ್ಷಗಳಿಂದ ಉತ್ತಮ ವಿದ್ಯಾಭ್ಯಾಸ ನೀಡುವಲ್ಲಿ ನಿರತವಾಗಿದೆ ಎಂದು ಅವರು ವಿವರಿಸಿದ್ದಾರೆ.
ಗೋಮಾಳ ವಿರುದ್ಧದ ಆರೋಪ...: ಇನ್ನು ಗೋಮಾಳ ಕಬಳಿಸಲಾಗಿದೆ ಎಂದು ಆಪಾದಿಸಿರುವ ಜಾಗವದಲ್ಲಿ 1994ರಲ್ಲಿ ಎರಡು ಎಕರೆ ಸರ್ಕಾರದಿಂದ ಮಂಜೂರಾಗಿದ್ದು 1999 ರಲ್ಲಿ ಎರಡು ಎಕರೆ ಎರಡು ಸೆಂಟ್ಸ್‌ನ್ನು ರು. 6.80 ಲಕ್ಷ ಭರಿಸಿ ಖರೀದಿಸಲಾಗಿದೆ. ಈ ಟ್ರಸ್ಟ್ ಪಕ್ಷದ ಪರವಾಗಿ ಹಲವು ಕಾರ್ಯಕ್ರಮಗಳನ್ನು ಮಾಡಲಾಗುತ್ತಿದೆ ಎಂದು ಆಪಾದಿಸಲಾಗಿದೆ.
 ನಿಜವಾಗಿಯೂ ಈ ಟ್ರಸ್ಟ್ ಪಕ್ಷದ ಯಾವುದೇ ಚಟುವಟಿಕೆಯಲ್ಲಿ ಭಾಗಿಯಾಗಿಲ್ಲ.  ಹಲವು ಧಾರ್ಮಿಕ ಚಟುವಟಿಕೆಗಳಿಗೆ ಈ ಜಾಗ ಉಚಿತವಾಗಿ ನೀಡಲಾಗಿದ್ದು ಈಗ ಸರ್ಕಾರಿ ಮಹಿಳಾ ಪಾಲಿಟಿಕ್ನಿಕ್ ಸಂಸ್ಥೆಗೆ ಉಚಿತವಾಗಿ ನೀಡಲಾಗಿದೆ ಎಂದು ಭಂಡಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.