ಸದ್ದಿಲ್ಲದೆ ಹರಿಯುತಿದೆ 'ಶುದ್ಧಗಂಗೆ'
ಕ.ಪ್ರ ವಾರ್ತೆ ಮಂಗಳೂರು ಮಾ.21
ಕುಡಿಯಲು ಶುದ್ಧನೀರು ನೀಡುವುದಾಗಿ ಭರವಸೆ ನೀಡಿ, ಅದನ್ನು ವಿತರಿಸುವಲ್ಲಿ ಸರ್ಕಾರಗಳು ವಿಫಲರಾಗಿರಬಹುದು. ಆದರೆ ಖಾಸಗಿ ಸಂಸ್ಥೆಗಳು ಜನರಿಗೆ ಶುದ್ಧನೀರು ವಿತರಿಸುವಲ್ಲಿ ಹಿಂದೆ ಬಿದ್ದಿಲ್ಲ. ಗದಗದ ಹುಲಕೋಟಿಯಲ್ಲಿ ಕೆ. ಎಚ್. ಪಾಟೀಲ್ ಫೌಂಡೇಷನ್ ಶುದ್ಧನೀರಿನ ವ್ಯವಸ್ಥೆ ಮಾಡಿದರೆ, ರಾಜ್ಯದ ನೀರಿಲ್ಲದ ನಾಡಿಗೆ ಧರ್ಮಸ್ಥಳದಿಂದ ಶುದ್ಧಗಂಗೆ ವಿತರಿಸುವ ಯೋಜನೆ ನಾಲ್ಕು ವರ್ಷಗಳಿಂದಲೂ ಜಾರಿಯಲ್ಲಿದೆ. ಹೌದು. ಗಡಸು ನೀರು, ಫ್ಲೋರೈಡ್ಯುಕ್ತ ನೀರಿನ ಸಮಸ್ಯೆಯಿರುವ ರಾಜ್ಯದ ವಿವಿಧ ಜಿಲ್ಲೆಗಳಲ್ಲಿ 'ಧರ್ಮದ ಗಂಗೆ' ಹರಿಸುತ್ತಿದೆ. ಕೇವಲ ನಾಮಕಾವಾಸ್ತೆ ಹಣ ನಿಗದಿ ಪಡಿಸಿ ಜನರಿಗೆ ನೀರನ್ನು ಶುದ್ಧೀಕರಿಸಿ ವಿತರಿಸಲಾಗುತ್ತಿದೆ. ಧರ್ಮಸ್ಥಳ ಧರ್ಮಾಧಿಕಾರಿ ಡಾ. ವೀರೇಂದ್ರ ಹೆಗ್ಗಡೆ ಮಾರ್ಗದರ್ಶನದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ (ಎಸ್ಕೆಆರ್ಡಿಪಿ)ಯ ಸಮುದಾಯ ಅಭಿವೃದ್ಧಿ ವಿಭಾಗ ಈ ಯೋಜನೆ ಕೈಗೆತ್ತಿಕೊಂಡಿದೆ.
2 ಗೆ 20 ಲೀಟರ್!: ಶುದ್ಧಗಂಗಾ ನೀರಿನ ಬೆಲೆ ಪ್ರತಿ ಲೀಟರ್ಗೆ ಕೇವಲ 10 ಪೈಸೆ. 20 ಲೀಟರ್ ಕ್ಯಾನ್ನ ಬೆಲೆ ರು. 2. ಈ ಬೆಲೆಯಲ್ಲಿ ಪ್ರತಿದಿನ 19,500 ಕುಟುಂಬಗಳಿಗೆ 4 ಲಕ್ಷ ಲೀಟರ್ ಶುದ್ಧಗಂಗಾ ನೀರನ್ನು ವಿತರಿಸಲಾಗುತ್ತಿದೆ. ಒಬ್ಬ ಬಳಕೆದಾರನಿಗೆ ವರ್ಷದ 360 ದಿನ ಪ್ರತಿನಿತ್ಯ 20 ಲೀಟರ್ ನೀರು ಪೂರೈಸಲಾಗುತ್ತಿದೆ. ಪ್ರಸ್ತುತ ಚಿಕ್ಕಮಗಳೂರು, ಗದಗ, ಧಾರವಾಡ ಮತ್ತು ಹಾವೇರಿ ಜಿಲ್ಲೆಗಳ 15 ತಾಲೂಕುಗಳ 120 ಗ್ರಾಮಗಳಲ್ಲಿ 50 ಘಟಕಗಳು ಕಾರ್ಯಾಚರಿಸುತ್ತಿವೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

