ದಕ್ಷಿಣ ಕನ್ನಡ

ಅಳಿಕೆಯಲ್ಲಿ ತ್ಯಾಜ್ಯ ಜಲ ಶುದ್ಧೀಕರಣ ಘಟಕ

Published On :

ವಿಟ್ಲ: ವಿದ್ಯಾರ್ಜನೆ, ಶಿಸ್ತು ಮತ್ತು ಸಂಸ್ಕಾರಕ್ಕೆ ಪ್ರಸಿದ್ಧ ಅಳಿಕೆಯ ಶ್ರೀ ಸತ್ಯಸಾಯಿ ಲೋಕ ಸೇವಾ ವಿದ್ಯಾ ಸಂಸ್ಥೆ. ಇಲ್ಲಿನ ಅಚ್ಚುಕಟ್ಟುತನಕ್ಕೆ ಹೊಸ ಸೇರ್ಪಡೆ ಜಲ ಶುದ್ಧೀಕರಣ ಘಟಕ.
 ವಿಟ್ಲದ ಅಳಿಕೆ ಶ್ರೀ ಸತ್ಯಸಾಯಿ ಲೋಕಸೇವಾ ಟ್ರಸ್ಟ್ ಮತ್ತು ಚಿಲ್ಡ್ರನ್ ಆಫ್ ಸತ್ಯಸಾಯಿ ಅಳಿಕೆ ಹಳೆ ವಿದ್ಯಾರ್ಥಿಗಳ ವತಿಯಿಂದ ಸುಮಾರು ರು. 40 ಲಕ್ಷ ವೆಚ್ಚದ ಜಲ ಶುದ್ಧೀಕರಣ ಘಟಕ ಸ್ಥಾಪಿಸಿದ್ದಾರೆ.
ಈ ಸಂಸ್ಥೆಯಲ್ಲಿ ರಾಜ್ಯ ಸೇರಿ ಬೇರೆ ರಾಜ್ಯಗಳಿಂದ ಬಂದ ಸುಮಾರು 1,500 ವಿದ್ಯಾರ್ಥಿಗಳಿದ್ದಾರೆ. ಇದರಲ್ಲಿ ಸುಮಾರು 200 ರಿಂದ 250 ವಿದ್ಯಾರ್ಥಿಗಳು ದಿನನಿತ್ಯ ಮನೆಗೆ ಹೋಗಿ ಬರುವವರಾದರೆ ಉಳಿದವರು ಹಾಸ್ಟೆಲ್‌ನಲ್ಲೇ ಉಳಿದುಕೊಳ್ಳುವ ವಿದ್ಯಾರ್ಥಿಗಳು. ಹಾಸ್ಟೆಲ್ ಅಂದರೆ ಕೇಳಬೇಕೇ, ಸ್ನಾನ, ಶೌಚ ಎಲ್ಲ ಮಾಮೂಲು. ಇದರಿಂದ ಬಂದ ತ್ಯಾಜ್ಯಗಳನ್ನೆಲ್ಲಾ ಈ ಮೊದಲು ತೋಟಗಳಿಗೆ ನೇರವಾಗಿ ಬಿಡುತ್ತಿದ್ದರು. ಕೆಲವು ಸಲ ಈ ತ್ಯಾಜ್ಯ ಕೊಳೆತು ವಾಸನೆ ಕೂಡ ಬರುತ್ತಿತ್ತು. ಅದರೆ ಈಗ ಈ ಜಲ ಶುದ್ಧೀಕರಣ ಘಟಕದಿಂದಾಗಿ ಇದಕ್ಕೆಲ್ಲಾ ಮುಕ್ತಿ ಸಿಕ್ಕಿದೆ.
ಎನಿದು ಜಲ ಶುದ್ಧೀಕರಣ ಘಟಕ?: ಇದನ್ನು ಆಂಗ್ಲ ಭಾಷೆಯಲ್ಲಿ ಸೀವೇಜ್ ಟ್ರೀಟ್‌ಮೆಂಟ್ ಪ್ಲಾಂಟ್ ಎಂದು ಕರೆಯುತ್ತಾರೆ. ಅಂದರೆ ಇದು ಮುಖ್ಯವಾಗಿ ಮಾನವ ತ್ಯಾಜ್ಯಗಳಾದ ಮೂತ್ರ, ಮಲ, ಸ್ನಾನದ ನೀರನ್ನು ಶುದ್ಧೀಕರಿಸುವ ಒಂದು ಘಟಕ. ಈ ಘಟಕವನ್ನು ಇಲೆಕ್ಟ್ರೋಬೇಸಿಸ್ ಸಿಸ್ಟಮ್ ಅಥವಾ ಈ ಡೋಕ್ಸ್ ಸಿಸ್ಟಮ್ ಮೂಲಕ ತಯಾರಿಸಲಾಗುತ್ತದೆ. ಇದರಲ್ಲಿ ಇಲೆಕ್ಟ್ರೋಲೈಟಿಕ್ ಆಕ್ಸಿಡೈಸ್ ಅಡ್ವಾನ್ಸ್ ಟೆಕ್ನೋಲೊಜಿಯ ಮೂಲಕ ತ್ಯಾಜ್ಯಗಳನ್ನು ಶುದ್ಧೀಕರಿಸಲಾಗುತ್ತದೆ. ಈ ಘಟಕಕ್ಕೆ ಕರೆಂಟನ್ನು ಕನ್ವರ್ಟ್ ಮಾಡುವುದರ ಮೂಲಕ ನೀರನ್ನು ಶುದ್ಧೀಕರಿಸಲಾಗುತ್ತದೆ. 1,000 ಲೀ. ತ್ಯಾಜ್ಯಕ್ಕೆ ತಗಲುವ ವಿದ್ಯುತ್ ವೆಚ್ಚ ಎಷ್ಟು ಗೊತ್ತೇ? ಕೇವಲ ರು. 1 ಮಾತ್ರ. ಮತ್ತೊಂದು ವಿಚಾರ ಎಂದರೆ ಇದು ಪರಿಸರ ಸ್ನೇಹಿ.
'ಈ ಜಲ ಶುದ್ಧೀಕರಣ ಘಟಕ ಕ್ಯೆನೋಡ್ ಜತ್ಯ ಕ್ಯಾಥೋಡ್ ಎಂಬ ಎರಡು ಇಲೆಕ್ರೋಡ್ಸನ್ನು ಬಳಸಲಾಗುತ್ತದೆ. ಇಲೆಕ್ರೋಡ್ಸಗೆ ವಿದ್ಯುತ್ ಹರಿಸಿ ಕ್ಯಾಥೋಡ್‌ಗೆ ಮೈನಸ್ ಪವರನ್ನು ಕೊಟ್ಟಾಗ ನೀರಿನ ಕಣಗಳು ವಿಭಜನೆಗೊಳ್ಳುತ್ತವೆ. ಈ ನೀರಿನ ತ್ಯಾಜ್ಯಗಳು ಹೈಡ್ರೋ ಕಾರ್ಬನ್ ರೂಪದಲ್ಲಿದ್ದು ಕರೆಂಟ್ ಕೈಕೊಟ್ಟಾಗ ಹೈಡ್ರೋಜನ್ ಮತ್ತು ಕಾರ್ಬನ್ ಆಗಿ ವಿಭಜನೆಗೊಳ್ಳುತ್ತದೆ. ಇದರಿಂದ ಹೈಡ್ರೋಜನ್ ವಾತಾವರಣದಲ್ಲಿ ಸೇರಿಕೊಂಡು ಕಾರ್ಬನ್ ಬೂದಿಯಾಗಿ ನೀರಿನಲ್ಲಿ ತೇಲುತ್ತದೆ. ಆ ನೀರನ್ನು ಫಿಲ್ಟರ್ ಮೂಲಕ ಹರಿಸಿದಾಗ ಕಾರ್ಬನ್ ವಿಭಜನೆಯಾಗಿ ಶುದ್ಧನೀರು ಮಾತ್ರ ಸಿಗುತ್ತದೆ. ಆ ಕಾರ್ಬನ್ ಬೂದಿಯನ್ನು ಸಸಿಗಳಿಗೆ ಉಪಯೋಗಿಸಬಹುದು. ಜೊತೆಗೆ ನೀರನ್ನು ಸಸಿಗಳಿಗೆ, ಹೂದೋಟಕ್ಕೆ, ನೆಲ ತೊಳೆಯಲು ಇನ್ನೂ ಅನೇಕ ವಿಧಗಳಲ್ಲಿ ಬಳಕೆ ಮಾಡಬಹುದು.
ಘಟಕ ಸ್ಥಾಪಿಸಲು ಭಾಸ್ಕರ ಶರ್ಮಾ ಮತ್ತು ಬಸವೇ ಗೌಡ ಅವರು ತಾಂತ್ರಿಕ ಸಹಾಯ ನೀಡಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.