ನಿಡ್ವಾಳದಲ್ಲಿ ಕೋಟಿ ಚೆನ್ನಯರ ಸಂಚಾರ?
ಸುಳ್ಯ: ಎಣ್ಮೂರು ಸಮೀಪದ ನಿಡ್ವಾಳಕ್ಕೆ ಕೋಟಿ ಚೆನ್ನಯರು ಬಂದಿದ್ದರೆ...?
- ಹೀಗೊಂದು ಪ್ರಶ್ನೆ ಕಳೆದ ಕೆಲವು ದಿನಗಳಿಂದ ಈ ಪರಿಸರದಲ್ಲಿ ಹರಿದಾಡುತ್ತಿದೆ. ಇತಿಹಾಸ ಪ್ರಸಿದ್ಧ ವೀರ ಸಹೋದರರಾದ ಕೋಟಿಚೆನ್ನಯರು ನಡೆದಾಡಿದ, ಹೋರಾಡಿದ, ಮಡಿದ ಸ್ಥಳ ಸುಳ್ಯ ತಾಲೂಕಿನ ಎಣ್ಮೂರು. ಎಣ್ಮೂರಿನ ಆದಿ ಬೈದೆರ್ಗಳ ಗರಡಿಯಲ್ಲಿ ಕಾರಣಿಕ ಪುರುಷರಾದ ಅವಳಿವೀರರ ಸಮಾಧಿ ಇದೆ. ಅವರು ಆರಾಧಿಸುತ್ತಿದ್ದ ಕೆಮ್ಮಲೆ ನಾಗಬ್ರಹ್ಮರ ದೈವಸ್ಥಾನವಿದೆ. ಪ್ರತಿದಿನ ಪೂಜೆ ಸಲ್ಲಿಸುತ್ತಿದ್ದ ನಿಡ್ವಾಳ ಮಹಾವಿಷ್ಣು ದೇವಸ್ಥಾನ ಸಂಪೂರ್ಣ ಜೀರ್ಣೋದ್ಧಾರಗೊಂಡು ಈಗ ನಿತ್ಯ ಪೂಜೆ, ವಾರ್ಷಿಕ ಮಹೋತ್ಸವಗಳು ನಡೆಯುತ್ತಿವೆ. ಇಂತಹ ಐತಿಹಾಸಿಕ ಸ್ಥಳದಲ್ಲಿ ಕೋಟಿ ಚೆನ್ನಯರು ಅವ್ಯಕ್ತ ರೂಪದಲ್ಲಿ ತಿರುಗಾಡುತ್ತಿದ್ದಾರೆಯೇ ಎಂಬ ಜಿಜ್ಞಾಸೆ ನಿಡ್ವಾಳ ಪರಿಸರದಲ್ಲಿ ಆರಂಭಗೊಂಡಿದೆ.
ಇಬ್ಬರು ಯುವಕರ ದರ್ಶನ?!: ನಿಡ್ವಾಳ ದೇವಸ್ಥಾನದ ವಾರ್ಷಿಕ ಉತ್ಸವದ ಸಂದರ್ಭ ದೇವಸ್ಥಾನ ಸಮಿತಿಯ ಪ್ರಧಾನ ಕಾರ್ಯದರ್ಶಿ ಚಂದ್ರಪ್ರಕಾಶರ ಮನೆಯಲ್ಲಿ ಮಹಿಳೆಯೊಬ್ಬರು ಮಾತ್ರ ಇದ್ದಾಗ ಅಂಗಳದಲ್ಲಿ ಇಬ್ಬರು ಯುವಕರು ನಿಂತಿರುವುದನ್ನು ಕಂಡರೆಂದೂ, ಗೇಟು ಮುಚ್ಚಿರುವಾಗ ಅಂಗಳಕ್ಕೆ ಇವರು ಹೇಗೆ ಬಂದರೆಂದು, ಯಾರವರು ಎಂದು ನೋಡುವಾಗ ಇದ್ದಕ್ಕಿದ್ದಂತೆ ಕಣ್ಮರೆಯಾದರೆಂದು ಹೇಳಲಾಗುತ್ತಿದೆ. ಮರುದಿನ ದೇವಸ್ಥಾನದಲ್ಲಿ ಎಡಮಂಗಲ ಕಡೆಯವಳೆಂದು ಹೇಳಿಕೊಂಡ ಅಪರಿಚಿತ ಮಹಿಳೆಯೊಬ್ಬರು 'ಕೋಟಿ ಚೆನ್ನಯರು ಬರುವುದಿಲ್ಲವೇ?' ಎಂದು ಕೇಳಿದರೆಂಬ ವಿಚಾರವೂ ಸೇರಿ ವದಂತಿ ಹರಡುತ್ತಿದೆ. ಮರುದಿನ ಅರ್ಚಕರು ಪ್ರಶ್ನೆ ಇರಿಸಿ ನೋಡಿ 'ಬಂದಿದ್ದವರು ಕೋಟಿ ಚೆನ್ನಯರೇ. ಆದ್ದರಿಂದ ಅದರ ಮೂಲ ಹುಡುಕಿಕೊಂಡು ಹೋಗಬೇಡಿ' ಎಂದು ಹೇಳಿದರೆಂದು ತಿಳಿದು ಬಂದಿದೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

