ನೀರಿನ ಟ್ಯಾಂಕ್ಗೆ ಕೀಟನಾಶಕ ಬೆರಕೆ: ದೂರು
ಸುಂಟಿಕೊಪ್ಪ: ಇಲ್ಲಿನ ನಿವಾಸಿಯೊಬ್ಬರ ಮನೆಗೆ ಅಳವಡಿಸಿದ್ದ ಕುಡಿಯವ ನೀರಿನ ಟ್ಯಾಂಕ್ಗೆ ಯಾರೋ ಕಿಡಿಗೇಡಿಗಳು ಕ್ರಿಮಿನಾಶಕವನ್ನು ಬೆರೆಸಿರುವ ಕುರಿತು ಪೊಲೀಸ್ ದೂರು ನೀಡಲಾಗಿದೆ. ಪಂಪ್ ಹೌಸ್ ರಸ್ತೆಯ ಈವಾಜಿತ್ ಬೆನ್ನಿಸ್ ಎಂಬವರು ದಿನನಿತ್ಯ ಪಂಚಾಯಿತಿಯಿಂದ ಸರಬರಾಜು ಮಾಡುತ್ತಿರುವ ಕುಡಿಯುವ ನೀರನ್ನು ಸಿಂಟೆಕ್ಸ್ ಟ್ಯಾಂಕ್ ಮೂಲಕ ಸಂಗ್ರಹಿಸಿ ತದನಂತರ ಗೃಹ ಬಳಕೆಗೆ ಉಪಯೋಗಿಸುತ್ತಿದ್ದರು. ಆದರೆ, ಸೋಮವಾರ ಮುಂಜಾನೆ ನಿತ್ಯಕರ್ಮಕ್ಕೆಂದು ನೀರನ್ನು ಉಪಯೋಗಿಸಲು ಮುಂದಾದಾಗ ನೀರಿನಲ್ಲಿ ಯಾವುದೋ ಕ್ರಿಮಿನಾಶಕ ಬೆರಕೆಗೊಂಡಿರುವುದನ್ನು ವಾಸನೆಯ ಮೂಲಕ ಪತ್ತೆಹಚ್ಚಿದ್ದಾರೆ. ಕೂಡಲೇ ಈವಾಜಿತ್ ಸುಂಟಿಕೊಪ್ಪ ಗ್ರಾಮ ಪಂಚಾಯಿತಿ ಅಧ್ಯಕ್ಷ ಎಂ.ಎ. ಉಸ್ಮಾನ್ ಅವರ ಗಮನಕ್ಕೆ ತಂದಿದ್ದಾರೆ. ಸ್ಥಳಕ್ಕೆ ಧಾವಿಸಿದ ಉಸ್ಮಾನ್ ಅವರು ಈ ಮನೆಯ ಮತ್ತು ಸುತ್ತಮುತ್ತಲಿನ ಮನೆಯವರಿಗೆ ಸರಬರಾಜು ಆದ ನೀರನ್ನು ಪರಿಶೀಲಿಸಿ ಪ್ರಕರಣದ ಬಗ್ಗೆ ಪಿ.ಡಿ.ಒ. ಅವರ ಗಮನಕ್ಕೆ ತಂದು ಪೊಲೀಸರಿಗೆ ದೂರು ನೀಡಿದ್ದಾರೆ. ಠಾಣಾಧಿಕಾರಿ ಎಸ್.ಪಿ. ಕೃಷ್ಣ ಕುಮಾರ್ ಭೇಟಿ ನೀಡಿದ್ದಾರೆ. ಕುಡಿಯುವ ನೀರನ್ನು ಸಂಗ್ರಹಿಸಿಟ್ಟುಕೊಳ್ಳುವವರು ನೀರನ್ನು ಬಳಸುವ ಮುನ್ನ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಿರುವ ಉಸ್ಮಾನ್, ಇಂತಹ ಪ್ರಕರಣ ಕಂಡುಬಂದಲ್ಲಿ ಕೂಡಲೇ ಪಂಚಾಯಿತಿಯ ಗಮನಕ್ಕೆ ತರುವಂತೆ ಅಧ್ಯಕ್ಷ ಸೂಚಿಸಿದ್ದಾರೆ.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

