ದಕ್ಷಿಣ ಕನ್ನಡ

ಸುಳ್ಯ: ತಮಿಳು ಕಾರ್ಮಿಕರ ಧರಣಿ 12ನೇ ದಿನಕ್ಕೆ

Published On :

ಸುಳ್ಯ: ಸುಳ್ಯ ಮತ್ತು ಪುತ್ತೂರು ತಾಲೂಕಿನಲ್ಲಿರುವ ತಮಿಳು ಪುನರ್ವಸತಿದಾರರಿಗೆ ಜಾತಿ ಪ್ರಮಾಣಪತ್ರ ನೀಡಬೇಕು, ರಾಜ್ಯ ಅರಣ್ಯ ಅಭಿವೃದ್ಧಿ ನಿಗಮದಲ್ಲಿ ಸೇವೆ ಸಲ್ಲಿಸಿ ನಿವೃತ್ತರಾದವರನ್ನು ಅವರಿಗೆ ನೀಡಲಾಗಿರುವ ವಸತಿಗೃಹದಿಂದ ಎಬ್ಬಿಸಬಾರದು ಮತ್ತು ಮೂರನೇ ತಲೆಮಾರಿಗೆ ಕೂಡ ಉದ್ಯೋಗ ನೀಡಬೇಕು ಮೊದಲಾದ ಬೇಡಿಕೆಗಳನ್ನು ಮುಂದಿರಿಸಿ ತಮಿಳು ಕಾರ್ಮಿಕರು ಆರಂಭಿಸಿರುವ ಅಹೋರಾತ್ರಿ ಧರಣಿ 12ನೇ ದಿನಕ್ಕೆ ಕಾಲಿಟ್ಟಿದೆ.  ಪ್ರತಿಭಟನೆಗೆ ಸಮರ್ಪಕ ಸ್ಪಂದನೆ ಬಾರದಿರುವುದನ್ನು ಖಂಡಿಸಿ ಕಾರ್ಮಿಕರು ಸೋಮವಾರ ಕೆಲಸ ಬಹಿಷ್ಕರಿಸಿ ನಗರದಲ್ಲಿ ಬೃಹತ್ ರ್ಯಾಲಿ ನಡೆಸಿದರಲ್ಲದೆ, ಸುಳ್ಯ ತಾಲೂಕು ಕಚೇರಿಗೆ ಮುತ್ತಿಗೆ ಹಾಕಿದ್ದರು.  ಎರಡು ದಿನಗಳೊಳಗೆ ಜಿಲ್ಲಾಧಿಕಾರಿ ಆಗಮನದ ಭರವಸೆ ದೊರೆತ ಹಿನ್ನಲೆಯಲ್ಲಿ ಮುತ್ತಿಗೆ ಕೈಬಿಟ್ಟಿದ್ದು, ಧರಣಿ ಮುಂದುವರಿಯುತ್ತಿದೆ.
ಮೂಡುಬಿದಿರೆ
ಪ್ರದೇಶದಲ್ಲಿ ಇಂದು ವಿದ್ಯುತ್ ಇಲ್ಲ
ಮಂಗಳೂರು: ಕೆಪಿಟಿಸಿಎಲ್ ವತಿಯಿಂದ ಕೇಮಾರ್ 220 ಕೆ.ವಿ ಸ್ವೀಕರಣಾ ಕೇಂದ್ರದ 110 ಕೆವಿ ಮೂಡುಬಿದಿರೆ ಉಪಕೇಂದ್ರದಲ್ಲಿ 10 ಎಂವಿಎ ಪರಿವರ್ತಕ1ರ ಬ್ರೇಕರ್‌ನ್ನು ಬದಲಿಸುವ ಕಾಮಗಾರಿ ಮಾ.27ರಂದು ಬೆಳಗ್ಗೆ 8ರಿಂದ ಸಂಜೆ 6ರ ವರೆಗೆ ನಡೆಯಲಿದೆ. ಆದ್ದರಿಂದ ಮೂಡುಬಿದಿರೆಯ ಶಿರ್ತಾಡಿ, ಕಡಂದಲೆ, ನಿಡ್ಡೋಡಿ, ಬೆಳುವಾಯಿ ಫೀಡರ್‌ಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂ ಪ್ರಕಟಣೆ ತಿಳಿಸಿದೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.