ದಕ್ಷಿಣ ಕನ್ನಡ

ಪೊಲೀಸ್ ಮಾಹಿತಿದಾರ, ಕಾವಲುಗಾರರೇ ಕಳ್ಳರು !

Published On :

ಮಂಗಳೂರು: ಎಲೆಕ್ಟ್ರಾನಿಕ್ ಅಂಗಡಿಗಳಿಗೆ ಕನ್ನ ಹಾಕುತ್ತಿದ್ದ ಕಾವಲುಗಾರ ಮತ್ತು ಪೊಲೀಸ್ ಮಾಹಿತಿದಾರರನ್ನು ಬಂಧಿಸಿದ ಕದ್ರಿ ಪೊಲೀಸರು ಆರೋಪಿಗಳಿಂದ 5 ಲಕ್ಷ ಮೌಲ್ಯದ ಲ್ಯಾಪ್‌ಟಾಪ್, ಟಿವಿ, ಕಂಪ್ಯೂಟರ್ ಇನ್ನಿತರ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
ಬಂದರು ನಿವಾಸಿ ಇಬ್ರಾಹಿಂ ಮತ್ತು ಮುನೀರ್ ಬಂಧಿತರು.
ಮುನೀರ್ ಕಳ್ಳತನದ ಮಾಸ್ಟರ್ ಮೈಂಡ್. ಈತ ಪೊಲೀಸರಿಗೆ ಮಾಹಿತಿದಾರನಾಗಿ ಕೆಲಸ ಮಾಡುತ್ತಿದ್ದ ಅಸಾಮಿ. ಹೀಗಾಗಿ ಈತ ಹಲವು ವರ್ಷದಿಂದ ಪೊಲೀಸರು ಬಂಧಿಸಿರಲಿಲ್ಲ.
ಇಬ್ರಾಹಿಂ ನಗರದ ವೈನ್‌ಗೇಟ್ ಬಿಲ್ಡಿಂಗ್ ಕಾವಲುಗಾರ. ಈ ದುರಾತ್ಮ ಎದುರುಗಡೆ ನೇತ್ರಾವತಿ ಕಟ್ಟಡದ ಟಾಲಿ ಕಂಪ್ಯೂಟರ್‌ಗೆ ಜನವರಿಯಲ್ಲಿ ನುಗ್ಗಿ ಲ್ಯಾಪ್‌ಟಾಪ್, ಕ್ಯಾಮೆರಾ ಕಳವು ಮಾಡಿದ್ದ! ಈ ಖದೀಮರು ಕಳವು ಪತ್ತೆ ಹಚ್ಚಲು ಇಟ್ಟಿರುವ ಸಿಸಿ ಕ್ಯಾಮೆರಾವನ್ನು ಕದ್ದು ತಂದಿದ್ದಾರೆ.
ಆರೋಪಿಗಳಿಂದ 7 ಲ್ಯಾಪ್‌ಟಾಪ್, 3 ಎಲ್‌ಸಿಡಿ ಕಪ್ಯೂಟರ್, ಕ್ಯಾಮೆರಾ, ಸಿ.ಸಿ.ಟಿವಿ ಕ್ಯಾಮೆರಾ, 2ಸಿ.ಡಿ. ರೈಟರ್, ಟಿವಿ, ಸ್ಕೂಟರ್ ಸೇರಿ 5 ಲಕ್ಷ ಮೌಲ್ಯದ ಸೊತ್ತುಗಳನ್ನು ವಶಪಡಿಸಿಕೊಂಡಿದ್ದಾರೆ.
27 ಪ್ರಕರಣ: ಮುನೀರ್ ವಿರುದ್ಧ 27 ಪ್ರಕರಣ ದಾಖಲಾಗಿದೆ. ಈ ಚೋರರು ಸಾಧಾರಣವಾಗಿ ಬೆಳಗ್ಗೆ 4 ಗಂಟೆಯಿಂದ ಬೆಳಗ್ಗೆ 6.30 ಒಳಗೆ ಎಲೆಕ್ಟ್ರಾನಿಕ್ ಅಂಗಡಿಗಳಿಗೆ ನುಗ್ಗಿ ಕಳವು ಮಾಡುತ್ತಾರೆ. ಕದ್ದ ಮಾಲುಗಳನ್ನು ಅಂಗಡಿಗಳಿಗೆ ಕಡಿಮೆ ಕ್ರಯಕ್ಕೆ ಮಾರಾಟ ಮಾಡಿ ಅದರಿಂದ ಬಂದ ಹಣದಲ್ಲಿ ಮಜಾ ಮಾಡುವುದು ಇವರ ದಿನಚರಿ.
ಬಲ್ಮಠ ಶಾಂತಿ ಮೂಲೆಯಲ್ಲಿ ವಾಹನ ತಪಾಸಣೆ ನಡೆಸುವ ವೇಳೆ ಆರೋಪಿಗಳನ್ನು ಕದ್ರಿ ಅಪರಾಧ ವಿಭಾಗ ಪೊಲೀಸರು ಬಂಧಿಸಿದರು.
ಬಲ್ಮಠ ನೇತ್ರಾವತಿ ಕಟ್ಟಡ ಟಾಲಿ ಕಂಪ್ಯೂಟರ್ ಜನವರಿ ತಿಂಗಳಲ್ಲಿ ಲ್ಯಾಪ್‌ಟಾಪ್, ಕ್ಯಾಮೆರಾ ಕಳವಾಗಿತ್ತು. ಇದಕ್ಕೆ ಕನ್ನ ಹಾಕಿದ್ದು ಇದೇ ಭೂಪ. ಬೀಗ ಒಡೆಯುವುದು ಕನ್ನ ಹಾಕುವುದು ಇದೇ ಕೆಲಸ ಮನೆಯವರು ಸಂಪೂರ್ಣ ಸಹಕಾರ. ಪತ್ನಿ ಪೊಲೀಸರ ವಿರುದ್ಧ ಕಿರುಕುಳ ಆರೋಪ ಹೊರಿಸುವುದೇ ಕೆಲಸ.
ಕದ್ರಿ ಇನ್‌ಸ್ಪೆಕ್ಟರ್ ರಾಘವ ಪಡೀಲ್, ಸಬ್ ಇನ್‌ಸ್ಪೆಕ್ಟರ್, ಸಿದ್ದಗೌಡ ಭಜಂತ್ರಿ, ಎಎಸ್‌ಐ ಸುಕುಮಾರ್, ಸಿಬ್ಬಂದಿ ವಿನಯ ಕುಮಾರ್, ಸುಧೀರ್ ಶೆಟ್ಟಿ, ಪ್ರಕಾಶ್ ನಾಯಕ್, ಯಶವಂತ್, ಪಾಲ್‌ರಾಜ್  ದಾಳಿ ನಡೆಸಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Disclaimer : ಕಾಮೆಂಟ್‌ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್‌ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್‌ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.