ಮತದಾರರ ಪಟ್ಟಿ ಸ್ವಚ್ಛವಾಗಿರಲಿ: ಡಿಸಿ ಹರ್ಷಗುಪ್ತ
ಮಂಗಳೂರು: ಮತದಾರರ ನೋಂದಣಿ ಪ್ರಕ್ರಿಯೆಯಲ್ಲಿ ಆಗಿರುವ ಪ್ರಗತಿ ವರದಿಯನ್ನು ಪ್ರತಿದಿನ ಬೆಳಗ್ಗೆ ಜಿಲ್ಲಾಡಳಿತಕ್ಕೆ ಸಲ್ಲಿಸಬೇಕು ಎಂದು ಜಿಲ್ಲಾಧಿಕಾರಿ ಹರ್ಷಗುಪ್ತ ಹೇಳಿದರು.
ಶುಕ್ರವಾರ ಜಿಲ್ಲಾಧಿಕಾರಿ ಕಚೇರಿಯಲ್ಲಿ ರಿಟರ್ನಿಂಗ್ ಅಧಿಕಾರಿಗಳ ಸಭೆಯಲ್ಲಿ ಅವರು ಮಾತನಾಡಿದರು.
ಫಾರ್ಮ್ ನಂ. 6, 7 ಮತ್ತು 8 ಹಾಗೂ ಎಲ್ಲಿ ಹೆಚ್ಚು ನೋಂದಣಿಯಾಗಿದೆ, ಎಲ್ಲೆಲ್ಲಿ ಕಡಿಮೆ ನೋಂದಣಿಯಾಗಿದೆ, ಇದಕ್ಕೆ ಕಾರಣವೇನು ಇತ್ಯಾದಿ ಕಾರಣ ಸಹಿತ ಮಾಹಿತಿ ನೀಡಬೇಕು ಎಂದು ಸಂಬಂಧಿತ ಅಧಿಕಾರಿಗಳಿಗೆ ಸೂಚನೆ ನೀಡಿದರು.
ಮತದಾರರ ಪಟ್ಟಿಯಲ್ಲಿ ಹೆಸರುಗಳ ಡುಪ್ಲಿಕೇಟ್ ಆಗದಂತೆ ಮತ್ತು ಸತ್ತವರ ಹಾಗೂ ಇತರ ಕಾರಣದಿಂದ ಇಲ್ಲದವರ ಹೆಸರನ್ನು ಕೈಬಿಟ್ಟು ಮತದಾರರ ಸ್ವಚ್ಛ ಪಟ್ಟಿ ರಚಿಸಿದರೆ ಶೇಕಡಾವಾರು ವಿವರ, ಪಾಲ್ಗೊಳ್ಳುವಿಕೆಯನ್ನು ಖಚಿತಪಡಿಸಿಕೊಳ್ಳಬಹುದು.
ಕೆಳಮಟ್ಟದಿಂದ ಮೇಲ್ಮಟ್ಟದವರೆಗಿನ ಅಧಿಕಾರಿಗಳ ನಡುವೆ ಸಂವಹನ ಮುಖ್ಯವಾಗಿದ್ದು, ಮತದಾನ ಪ್ರಕ್ರಿಯೆಯನ್ನು ಸೂಚನೆಯಂತೆ ಪಾಲಿಸಲು ಸುತ್ತೋಲೆಗಳಂತೆ ನಡೆದುಕೊಳ್ಳಬೇಕು. ಗಡಿ ಪ್ರದೇಶದ ಮತದಾರರ ಪಟ್ಟಿಯನ್ನು ತಯಾರಿಸುವಾಗ ಸೂಕ್ಷ್ಮವಾಗಿ ಕೆಲಸ ಮಾಡುವಂತೆ ಸೂಚಿಸಿದರು.
ಸೆಕ್ಟರ್ ಅಧಿಕಾರಿಗಳು ಚುನಾವಣಾ ಪ್ರಕ್ರಿಯೆಯ ಬೆನ್ನೆಲುಬಾಗಿದ್ದು, ಅವರ ಸಕ್ರಿಯ ಪಾಲ್ಗೊಳ್ಳುವಿಕೆ ಮುಖ್ಯ. ಅವರು ತಮ್ಮ ಬೂತ್ ಮಟ್ಟದ ಅಧಿಕಾರಿಗಳ ಜತೆ ಪ್ರತಿದಿನ ಸಂಪರ್ಕದಲ್ಲಿದ್ದು ಮಾಹಿತಿ ಸಂಗ್ರಹಿಸಬೇಕು. ಸಭೆ ನಡೆಸಲು ನಿಗದಿತ ಜಾಗ ಗುರುತಿಸಿಕೊಳ್ಳಬೇಕು. ನಿಗದಿತ ಮಾದರಿಯಲ್ಲೇ ಮಾಹಿತಿ ತುಂಬಿಸಿ ಕಳುಹಿಸಬೇಕು. ಮತದಾರರ ನೋಂದಣಿಯಲ್ಲಿ ಎಲ್ಲಿ ತಪ್ಪಾಗಿದೆ, ಯಾರು ಹೊಣೆ ಎಂಬುದನ್ನು ಸ್ಪಷ್ಟಪಡಿಸಿದರು.
ಬಿಎಲ್,ಒಗೆ ಸಂಭಾವನೆ: ಕ್ಷೇತ್ರವಾರು ಬೋಗಸ್ ತಡೆಯಲು ಬೇಕಾದ ಕ್ರಮ ಕೈಗೊಳ್ಳಲು ನಿರ್ದೇಶನ ನೀಡಿದ ಅವರು, ಆರ್,ಒಗಳು ಮತ್ತು ಎಆರ್,ಒಗಳಿಗೆ ಹೆಚ್ಚಿನ ಜವಾಬ್ದಾರಿ ಇದ್ದು, ಭಾವಚಿತ್ರಗಳಿಲ್ಲದ ಎಪಿಕ್ ಕಾರ್ಡ್,ಗಳು ಇರಬಾರದು ಎಂದರು. ಬಿಎಲ್,ಒಗೆ ಕಳೆದ ಬಾರಿಯ ಪಟ್ಟಿ ಕೊಟ್ಟು ಕಾರಣ ಕೇಳಿ. ಮತದಾನ ಪ್ರಮಾಣ ಜಾಸ್ತಿಯಾದರೆ ಬಿಎಲ್,ಒಗೆ ವಿಶೇಷ ಸಂಭಾವನೆ ಕೊಡುವ ಬಗ್ಗೆ ಚಿಂತಿಸಲಾಗುವುದು ಎಂದರು.
ಅಪರ ಜಿಲ್ಲಾಧಿಕಾರಿ ದಯಾನಂದ್, ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಡಾ.ವಿಜಯ ಪ್ರಕಾಶ್, ಮಹಾನಗರ ಪಾಲಿಕೆ ಆಯುಕ್ತ ಡಾ.ಹರೀಶ್ ಕುಮಾರ್ ಹಾಜರಿದ್ದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

