ಗೋವು ದೇಶ ಸಾಕಬಲ್ಲದು: ರಾಘವೇಶ್ವರ ಶ್ರೀ
ಮಂಗಳೂರು: ನಾವು ಗೋವನ್ನು ಸಾಕುತ್ತೇವೆ ಎನ್ನುವ ಭ್ರಮೆ ಬೇಡ, ವಾಸ್ತವವಾಗಿ ಗೋವುಗಳೇ ನಮ್ಮನ್ನು ಸಾಕುತ್ತವೆ. ಗೋವು ಒಂದು ಕುಟುಂಬದ ಬೇಕು ಬೇಡಗಳನ್ನು ಭರಿಸಲು ಸೀಮಿತವಲ್ಲ, ಇಡೀ ದೇಶವನ್ನೇ ಸಾಕಬಲ್ಲದು ಎಂದು ಹೊಸನಗರ ರಾಮಚಂದ್ರಾಪುರ ಮಠದ ಮಠಾಧೀಶ ರಾಘವೇಶ್ವರ ಭಾರತಿ ಸ್ವಾಮೀಜಿ ಅಭಿಪ್ರಾಯಪಟ್ಟಿದ್ದಾರೆ.
ಕಾಸರಗೋಡು ತಾಲೂಕು ಬಜಕೂಡ್ಲು ಅಮೃತಧಾರಾ ಗೋಶಾಲೆ ಆಶ್ರಯದಲ್ಲಿ, ಕಾಸರಗೋಡು ತಳಿಯ ಗೋವಿನ ಸಂರಕ್ಷಣೆ, ಜಾಗೃತಿಗಾಗಿ ಆಯೋಜಿಸಿದ್ದ 'ಜನಜನನೀ' ಕಾರ್ಯಕ್ರಮ ಪ್ರಯುಕ್ತ ಶನಿವಾರ ಪೆರ್ಲ ಶ್ರೀ ಸತ್ಯನಾರಾಯಣ ಪ್ರೌಢಶಾಲೆ ಪರಿಸರದಲ್ಲಿ ನಡೆದ 'ಗೋಕಥಾ' ಕಾರ್ಯಕ್ರಮದಲ್ಲಿ ಅವರು ಪ್ರವಚನ ನೀಡಿದರು.
ಭಗವಂತನ ಹಾಗೆ ಗೋವು ಕೂಡಾ ಮಾನವನಿಂದ ಅಲ್ಪವನ್ನು ಸ್ವೀಕರಿಸಿ ಅನಂತವನ್ನು ನೀಡುವ ವಿಶಿಷ್ಟ ಗುಣ ಹೊಂದಿದೆ. ನೀರು ನೀಡಿ ಹಾಲು, ಹುಲ್ಲು ನೀಡಿ ಹೊನ್ನಿನ ಸಮಾನ ಗೋ ಉತ್ಪನ್ನಗಳನ್ನು ನಾವು ಪಡೆಯುತ್ತೇವೆ ಎಂದರು.
ಕಾರ್ತವೀರ್ಯನ ವಂಶಸ್ಥರು: ಗೋವಿಗೆ ರಕ್ಷಣೆ ನೀಡಬೇಕಾದ ಸರ್ಕಾರವೇ ಕಸಾಯಿಖಾನೆಗಳನ್ನು ತೆರೆಯಲು ಕಾರಣವಾಗುತ್ತಿರುವುದು ವಿಪರ್ಯಾಸ ಎಂದು ಸ್ವಾಮೀಜಿ ಆಕ್ರೋಶ ವ್ಯಕ್ತಪಡಿಸಿದರು.
ಅಂದು ಗೋವಿಗಾಗಿ ಕಾರ್ತವೀರ್ಯನ ವಿರುದ್ಧ ಕೊಡಲಿ ಎತ್ತಿದ ಪರಶುರಾಮನ ಮಾದರಿಯಲ್ಲಿ ಇಂದು ಕೂಡಾ ಗೋವಿಗಾಗಿ ಹೋರಾಡಬೇಕಾದ ಅನಿವಾರ್ಯತೆ ಒದಗಿದೆ ಎಂದು ವಿಶ್ಲೇಷಿಸಿದರು. ಸಾಕೇತ ಶರ್ಮ, ವೆಂಕಟಗಿರಿ, ದೀಪಿಕಾ ಸಂಗಡಿಗರಿಂದ ಗಾಯನ, ಮೂರೂರು ವಿಷ,ು ಭಟ್, ರೇಶ್ಮಾ ತಂಡದವರಿಂದ ರೂಪಕ, ಕಲಾವಿದ ನೀರ್ನಳ್ಳಿ ಗಣಪತಿ ಅವರಿಂದ ಆಶು ಚಿತ್ರ ರಚನೆಯೂ ಗಮನ ಸೆಳೆಯಿತು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

