'ಗರ್ಭಿಣಿಯರ ಶಾರೀರಿಕ, ಮಾನಸಿಕ ಆರೋಗ್ಯಕ್ಕೆ ಯೋಗ ಪೂರಕ'
ಮಂಗಳೂರು: ಗರ್ಭಿಣಿಯರು ಆರೋಗ್ಯ ಕಾಯ್ದುಕೊಳ್ಳಲು ಯೋಗ ಸಹಕಾರಿ, ಮಾನಸಿಕ, ಶಾರೀರಿಕ ಆರೋಗ್ಯ ಉತ್ತಮವಾಗುವ ಜತೆಗೆ ಸಮಸ್ಯೆ ತಡೆಗಟ್ಟಬಲ್ಲದು ಎಂದು ಡಾ.ಆರ್.ರತಿದೇವಿ ಅಭಿಪ್ರಾಯ ಪಟ್ಟರು.
ಆವಿಷ್ಕಾರ್ ಯೋಗ ಸಹಯೋಗದಲ್ಲಿ ಎ.ಜೆ.ಆಸ್ಪತ್ರೆ ಮತ್ತು ಸಂಶೋಧನೆ ವಿಭಾಗದಿಂದ ಶನಿವಾರ ಆಯೋಜಿಸಿದ 'ಗರ್ಭಿಣಿಯರಿಗೆ ಯೋಗ' ವಿಷಯದ ಬಗ್ಗೆ ಉಪನ್ಯಾಸ ನೀಡಿದರು. ಮಹಿಳೆ ಆರೋಗ್ಯ ಸಂರಕ್ಷಿಸಿದರೆ ಮಗುವಿನ ಆರೋಗ್ಯ ರಕ್ಷಿಸಿದಂತೆ ಎಂದು ಹೇಳಿದರು.
ಮಣಿಪಾಲ ವಿವಿ ಯೋಗ ಪ್ರಾಚಾರ್ಯ ಡಾ.ಅನ್ನಪೂರ, ಆಚಾರ್ಯ ಉಪನ್ಯಾಸ ನೀಡಿ, ದೇಹದ ಚಲನೆ ಉತ್ತಮವಾಗಿ ದೇಹ ಮತ್ತು ಮನಸ್ಸಿನ ಸ್ಥಿರತೆ ಕಾಪಾಡಲು ಯೋಗ ಸಹಕಾರಿ. ಪ್ರಾಣಾಯಾಮ ಮತ್ತು ಧ್ಯಾನದಿಂದ ಶಾರೀರಿಕ ಹಾಗೂ ಮಾನಸಿಕ ಸಮತೋಲನ ಕಾಪಾಡಿಕೊಂಡು ತಾಯಿ, ಮಗುವಿನ ಆರೋಗ್ಯ ಉತ್ತಮವಾಗಿಡಲು ಪೂರಕ ಎಂದರು.
ಅಧ್ಯಕ್ಷತೆ ವಹಿಸಿದ್ದ ಡಾ.ಅಮಿತಾ ಪಿ.ಮಾರ್ಲ ಮಾತನಾಡಿದರು. ಕುಶಾಲಪ್ಪ ಜಿ.ಎನ್. ಮಾತನಾಡಿ, ಬದಲಾದ ಜೀವನ ಶೈಲಿ, ಆಹಾರ ಕ್ರಮದಿಂದ ಗರ್ಭಿಣಿಯರ ಆರೋಗ್ಯದಲ್ಲಿ ಬೇಗನೆ ವ್ಯತ್ಯಾಸ ಕಂಡುಬರುತ್ತಿದೆ. ಯೋಗ ಅಭ್ಯಾಸ ಇದಕ್ಕೆ ಪರಿಹಾರವಾಗಬಲ್ಲದು ಎಂದರು.
ಬಾಲಕೃಷ, ಕೆ. ವಂದಿಸಿದರು. ರಾಣಿ ಎಲ್.ಶೆಣೈ ನಿರೂಪಿಸಿದರು.
Follow KannadaPrabha channel on WhatsApp
Subscribe to KannadaPrabha YouTube Channel and watch Videos
Download the KannadaPrabha News app to follow the latest news updates
Subscribe and Receive exclusive content and updates on your favorite topics
Disclaimer : ಕಾಮೆಂಟ್ಗಳಲ್ಲಿ ವ್ಯಕ್ತಪಡಿಸಿದ ಅಭಿಪ್ರಾಯಗಳು ಅವುಗಳನ್ನು ಪೋಸ್ಟ್ ಮಾಡುವ ವ್ಯಕ್ತಿಯ ಸಂಪೂರ್ಣ ಜವಾಬ್ದಾರಿಯಾಗಿದೆ; ಅವು kannadaprabha.com ನ ಅಭಿಪ್ರಾಯಗಳನ್ನು ಪ್ರತಿಬಿಂಬಿಸುವುದಿಲ್ಲ. ಒಬ್ಬ ವ್ಯಕ್ತಿ, ಸಮುದಾಯ, ಧರ್ಮ ಅಥವಾ ದೇಶದ ವಿರುದ್ಧ ಅವಹೇಳನಕಾರಿ ಅಥವಾ ಅಶ್ಲೀಲವಾದ ಯಾವುದೇ ಕಾಮೆಂಟ್ಗಳು ಭಾರತ ಸರ್ಕಾರದ ಮಾಹಿತಿ ತಂತ್ರಜ್ಞಾನ ನೀತಿಯ ಅಡಿಯಲ್ಲಿ ಶಿಕ್ಷಾರ್ಹವಾಗಿವೆ. ಅಂತಹ ಕಾಮೆಂಟ್ಗಳ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು.

